For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಕಿಂಗ್ಸ್‌ ಇಲೆವೆನ್‌ಗೆ 5 ವಿಕೆಟ್ ಸೋಲುಣಿಸಿದ ಕ್ಯಾಪಿಟಲ್ಸ್

Delhi vs Punjab, 37th Match - Live Cricket Score

ನವದೆಹಲಿ, ಏಪ್ರಿಲ್ 20: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ (ಏಪ್ರಿಲ್ 20) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಣ ಐಪಿಎಲ್ 37ನೇ ಪಂದ್ಯದಲ್ಲಿ ಡೆಲ್ಲಿ 5 ವಿಕೆಟ್ ಜಯ ಸಾಧಿಸಿದೆ. ಶಿಖರ್ ಧವನ್-ಶ್ರೇಯಸ್ ಐಯ್ಯರ್ ಅರ್ಧಶತಕ, ಕಾಗಿಸೋ ರಬಾಡ ಅವರ ಬೌಲಿಂಗ್ ಬೆಂಬಲದೊಂದಿಗೆ ಡಿಸಿ ಐಪಿಎಲ್ 6ನೇ ಗೆಲುವು ದಾಖಲಿಸಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ನ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೇವಲ 12 ರನ್‌ಗೆ ವಿಕೆಟ್ ಒಪ್ಪಿಸಿದರು. ಮುಂದೆ ಮಯಾಂಕ್ ಅಗರ್ವಾಲ್ 2, ಡೇವಿಡ್ ಮಿಲ್ಲರ್ 7, ಮನ್ದೀಪ್ ಸಿಂಗ್ 30, ರವಿಚಂದ್ರನ್ ಅಶ್ವಿನ್ (ಸಿ), ಸ್ಯಾಮ್ ಕರನ್ 0, ಹರ್ಪ್ರೀತ್ ಬ್ರಾರ್ ಅಜೇಯ 20 ರನ್ ಬೆಂಬಲ ಮಾತ್ರ ತಂಡಕ್ಕೆ ಲಭಿಸಿತು.

ಐಪಿಎಲ್ 2019: ಪಂಜಾಬ್ vs ಡೆಲ್ಲಿ ಪಂದ್ಯ, ಸ್ಕೋರ್‌ಕಾರ್ಡ್ ಕೆಳಗಿದೆ

1
45913

ಆದರೆ 37 ಎಸೆತಗಳಿಗೆ 69 ರನ್ ಸಿಡಿಸಿದ ಗೇಲ್ ಪಂಜಾಬ್ 150+ ರನ್ ಸೇರಿಸುವಲ್ಲಿ ಗಮನಾರ್ಹ ರನ್ ಕೊಡುಗೆ ನೀಡಿದರು. ಕೆXIಪಿ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತು. ಪಂಜಾಬ್ ಬ್ಯಾಟಿಂಗ್ ವೇಳೆ ಡೆಲ್ಲಿ ವೇಗಿ ಕಾಗಿಸೋ ರಬಾಡಾ 2, ಅಕ್ಸರ್ ಪಟೇಲ್ 2, ಸಂದೀಪ್ ಲಮಿಚಾನೆ 3 (40 ರನ್) ಉರುಳಿಸಿ ತಂಡವನ್ನು ಬೆಂಬಲಿಸಿದರು.

ಗುರಿ ಬೆನ್ನಟ್ಟಿದ ಡೆಲ್ಲಿಗೆ ಧವನ್ 56 (41 ಎಸೆತ), ಶ್ರೇಯಸ್ ಐಯ್ಯರ್ 58 (49) ರನ್ ಗಣನೀಯವಾಗಿ ನೆರವಿಗೆ ಬಂತು. ಡಿಡಿ 19.4ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 166 ರನ್‌ನೊಂದಿಗೆ ಗುರಿ ಮುಟ್ಟಿತು. ಪಂಜಾಬ್ ಪರ ಹಾರ್ಡ್ನಸ್ ವಿಲ್ಜೊಯೆನ್ 2 ವಿಕೆಟ್ ಪಡೆದು ಮಿಂಚಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಾಸ್ ಅಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕಾಲಿನ್ ಇಂಗ್ರಾಮ್, ಶೇರ್ಫೇನ್ ರುದರ್ಫೋರ್ಡ್, ಅಕ್ಸರ್ ಪಟೇಲ್, ಕಾಗಿಸೊ ರಬಾಡಾ, ಅಮಿತ್ ಮಿಶ್ರಾ, ಸಂದೀಪ್ ಲಮಿಖಾನೆ, ಇಶಾಂತ್ ಶರ್ಮಾ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ: ಲೋಕೇಶ್ ರಾಹುಲ್ (ವಿಕೆಟ್), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ರವಿಚಂದ್ರನ್ ಅಶ್ವಿನ್ (ಸಿ), ಸ್ಯಾಮ್ ಕರನ್, ಹರ್ಪ್ರೀತ್ ಬ್ರಾರ್, ಹಾರ್ದಸ್ ವಿಲ್ಜೊಯೆನ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ

Story first published: Sunday, April 21, 2019, 0:08 [IST]
Other articles published on Apr 21, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+