ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಕನಸು ಭಗ್ನ, ಡೆಲ್ಲಿಗೆ ಗೆಲುವು

Delhi vs Rajasthan, 53rd Match - Live Cricket Score

ನವದೆಹಲಿ, ಮೇ 4: ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ (ಮೇ 4) ನಡೆದ ಐಪಿಎಲ್ 53ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ವಿಕೆಟ್ ಸುಲಭ ಜಯ ಗಳಿಸಿದೆ. ಇದರೊಂದಿಗೆ ರಾಜಸ್ಥಾನ್ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಈ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಮತ್ತೆ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್‌ ರಾಯಲ್ಸ್‌ ಆರಂಭದಲ್ಲೇ ಆಘಾತ ಅನುಭವಿಸಿತು. ಸಂಜು ಸ್ಯಾಮ್ಸನ್ 5, ಲಿಯಾಮ್ ಲಿವಿಂಗ್ಸ್ಟೋನ್ 14, ಅಜಿಂಕ್ಯ ರಹಾನೆ 2, ಮಹಿಪಾಲ್‌ ರಾಮ್ರರ್ 8, ಶ್ರೇಯಸ್ ಗೋಪಾಲ್ 12, ಸ್ಟುವರ್ಟ್ ಬಿನ್ನಿ 0, ಕೃಷ್ಣಪ್ಪ ಗೌತಮ್ 6 ರನ್‌ಗೆ ವಿಕೆಟ್ ಒಪ್ಪಿಸಿದ್ದು ತಂಡದ ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿ ಹೇಳಿತು.

ಪಂದ್ಯದ Live Score ಕೆಳಗಿದೆ

1
45929

ರಾಜಸ್ಥಾನ್ ಪರ ಹೋರಾಟ ನಡೆಸಿದ್ದು ಯುವ ಆಟಗಾರ ರಿಯಾನ್ ಪರಾಗ್ ಮಾತ್ರ. ಪರಾಗ್ 49 ಎಸೆತಗಳಿಗೆ 50 ರನ್ ಸೇರಿಸಿದರು. ಆರ್‌ಆರ್‌ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 115 ರನ್ ಬಾರಿತು. ರಾಯಲ್ಸ್ ಇನ್ನಿಂಗ್ಸ್ ವೇಳೆ ಡೆಲ್ಲಿ ವೇಗಿ ಇಶಾಂತ್ ಶರ್ಮಾ 38ಕ್ಕೆ 3, ಅಮಿತ್ ಮಿಶ್ರಾ 17ಕ್ಕೆ 3 ವಿಕೆಟ್ ಪಡೆದು ಪಾರಮ್ಯ ಮೆರೆದರು.

ರಾಜಸ್ಥಾನ್ ನೀಡಿದ 116 ಸುಲಭ ರನ್‌ ಗುರಿ ಬೆನ್ನತ್ತಿದ ಡೆಲ್ಲಿಯಿಂದ ಪೃಥ್ವಿ ಶಾ 8, ಶಿಖರ್ ಧವನ್ 16, ಶ್ರೇಯಸ್ ಅಯ್ಯರ್ 15, ಕಾಲಿನ್ ಇಂಗ್ರಾಮ್ 12 ರನ್‌ ಗಳಿಸಿ ಔಟಾದರಾದರೂ ರಿಷಬ್ ಪಂತ್ 38 ಎಸೆತಕ್ಕೆ ಅಜೇಯ 53 ರನ್ ಬಾರಿಸಿದ್ದರಿಂದ ಡಿಸಿ 16.1 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತು.

ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ವಿ.ಕೆ.), ಲಿಯಾಮ್ ಲಿವಿಂಗ್ಸ್ಟೋನ್, ಅಜಿಂಕ್ಯ ರಹಾನೆ (ಸಿ), ರಿಯಾನ್ ಪರಾಗ್, ಸ್ಟುವರ್ಟ್ ಬಿನ್ನಿ, ಮಹೀಪಾಲ್ ಲೋಮರರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಇಶ್ ಸೋಧಿ, ವರುಣ್ ಆ್ಯರನ್, ಒಶೇನ್ ಥಾಮಸ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕಾಲಿನ್ ಇಂಗ್ರಾಮ್, ಶೇರ್ಫೇನ್ ರುದರ್ಫೋರ್ಡ್, ಕೀಮೊ ಪಾಲ್, ಅಕ್ಸರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಟ್ರೆಂಟ್ ಬೌಲ್ಟ್.

Story first published: Saturday, May 4, 2019, 19:30 [IST]
Other articles published on May 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X