ಕೋಲ್ಕತಾ ವಿರುದ್ಧ ಡೆಲ್ಲಿ ತಂಡಕ್ಕೆ 55 ರನ್‌ಗಳ ಭಾರಿ ಅಂತರದ ಗೆಲುವು

ಕೋಲ್ಕತಾತ ನೈಟ್ ರೈಡರ್ಸ್ ವಿರುದ್ಧ ಪಂದ್ಯವನ್ನು ಡೆಲ್ಲಿ ಡೇರ್‌ವಿಲ್ಸ್ ತಂಡವು 55 ರನ್‌ಗಳ ವೃಹತ್ ಅಂತರದಿಂದ ಗೆದ್ದಿದೆ. ಶ್ರೇಯಸ್ ಐಯರ್ ತಮ್ಮ ಮೊದಲ ನಾಯಕತ್ವದ ಪಂದ್ಯದಲ್ಲಿಯೇ ಗೆಲುವಿನ ಸವಿ ಸವಿದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 219 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಪ್ರತಿಯಾಗಿ ಕೋಲ್ಕತಾ ತಂಡವು 20 ಓವರ್‌ಗಳಲ್ಲಿ 164 ರನ್ ಗಳಿಸಳಷ್ಟೆ ಶಕ್ತವಾಯಿತು.
ನಾಯಕನ ಇನ್ನಿಂಗ್ಸ್ ಆಡಿದ ಶ್ರೇಯಸ್ ಐಯರ್ ಕೇವಲ 40 ಎಸೆತದಲ್ಲಿ 93 ರನ್ ಭಾರಿಸಿ ಔಟಾಗದೇ ಉಳಿದರು ಅವರ ಇನ್ನಿಂಗ್ಸ್‌ನಲ್ಲಿ ಇದ್ದದ್ದು ಬರೋಬ್ಬರಿ 10 ಸಿಕ್ಸರ್. ಶ್ರೇಯಸ್ ಹೊರತುಪಡಿಸಿ ಯುವ ಪ್ರತಿಭೆ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಪೃಥ್ವಿ ಶಾ 63 ರನ್ ಗಳಿಸಿದರು. ಕಾಲಿನ್ ಮುನ್ರೋ (33) ಜೊತೆಯಾಗಿ ಅವರು ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟರು.
ಕೊಲ್ಕತ್ತ ಪರ ಬ್ಯಾಟ್ಸ್‌ಮನ್‌ಗಳು ಆತುರವಾಗಿ ರನ್ ಗಳಿಸುವ ಭರದಲ್ಲಿ ತಪ್ಪುಗಳನ್ನು ಮಾಡಿ ವಿಕೆಟ್ ಒಪ್ಪಿಸಿದರು. ಕ್ರಿಸ್ ಲೇನ್ 5, ನರೇನ್ 26, ಉತ್ತಪ್ಪ 1, ರಾಣಾ 8, ದಿನೇಶ್ ಕಾರ್ತಿಕ್ 18 ಗಳಿಸಿದರೆ ಹೊಸ ಆಟಗಾರ ಶುಭ್‌ಮನ್ ಗಿಲ್ 37 ರನ್ ಗಳಿಸಿದರು. ಆಂಡ್ರೆ ರಸೆಲ್ 40 ರನ್ ಗಳಿಸಿ ಔಟಾದರು.
ಡೆಲ್ಲಿ ಪರ ಟ್ರೆಂಟ್ ಬೌಲ್ಟ್, ಮ್ಯಾಕ್ಸ್‌ವೆಲ್, ಅವಿಶ್ ಖಾನ್, ಅಮಿತ್ ಮಿಶ್ರಾ ತಲಾ ಎರಡು ವಿಕೆಟ್ ಗಳಿಸಿದರು. ಪಂದ್ಯ ಪುರುಶೋತ್ತಮ ಪ್ರಶಸ್ತಿಗೆ ಶ್ರೇಯಸ್ ಐಯರ್ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications