Deodhar Trophy 2023: ದೇವಧರ್ ಟ್ರೋಫಿ ಪಂದ್ಯಾವಳಿಗೆ ಪಶ್ಚಿಮ ವಲಯ ತಂಡ ಪ್ರಕಟ; ಪೃಥ್ವಿ, ದುಬೆಗೆ ಸ್ಥಾನ
ಇದೇ ಜುಲೈ 24ರಿಂದ ಪುದುಚೇರಿಯಲ್ಲಿ ನಡೆಯಲಿರುವ ಮುಂಬರುವ 2023ರ ದೇವಧರ್ ಟ್ರೋಫಿ ಪಂದ್ಯಾವಳಿಗಾಗಿ ಪಶ್ಚಿಮ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಿಯಾಂಕ್ ಪಾಂಚಾಲ್ ಪಶ್ಚಿಮ ವಲಯ ತಂಡವನ್ನು ಮುನ್ನಡೆಸಲಿದ್ದಾರೆ.
ದೇವಧರ್ ಟ್ರೋಫಿಗಾಗಿ 15 ಪ್ರಮುಖ ಆಟಗಾರರು ಮತ್ತು 5 ಸ್ಟ್ಯಾಂಡ್‌ಬೈ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಪಶ್ಚಿಮ ವಲಯ ತಂಡದಲ್ಲಿ ಕೆಲವು ದೊಡ್ಡ ಆಟಗಾರರಿಂದ ಕೂಡಿದ್ದು, ಮುಂಬೈ ಬ್ಯಾಟರ್‌ಗಳಾದ ಪೃಥ್ವಿ ಶಾ ಜೊತೆಗೆ ಶಿವಂ ದುಬೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಸಿಎಸ್‌ಕೆ ಪರ ಶಿವಂ ದುಬೆ ಅವರು ಐಪಿಎಲ್ 2023ರಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಈ ವೇಳೆ ಶಿವಂ ದುಬೆ 400ಕ್ಕೂ ಹೆಚ್ಚು ರನ್ ಬಾರಿಸಿದರು. ಇನ್ನು ಪೃಥ್ವಿ ಶಾ ಉತ್ತಮ ದೇಶೀಯ ಋತುವನ್ನು ಹೊಂದಿದ್ದರೂ, ಐಪಿಎಲ್‌ನಲ್ಲಿ ವಿಫಲರಾದರು. ಆದರೆ ಅವರು ಕೌಂಟಿ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸುತ್ತಿದ್ದರೂ ಪಶ್ಚಿಮ ವಲಯ ತಂಡದಲ್ಲಿ ಅವರನ್ನು ಆಯ್ಕೆ ಮಾಡಿರುವುದು ಆಶ್ಚರ್ಯವೆನಿಸಿದೆ.
ಇವರಿಬ್ಬರನ್ನು ಹೊರತುಪಡಿಸಿ, ಸರ್ಫರಾಜ್ ಖಾನ್ ಮತ್ತು ರಾಹುಲ್ ತ್ರಿಪಾಠಿ, ಅಂಕಿತ್ ಬವಾನೆ ಸೇರಿದಂತೆ ಇತರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪಶ್ಚಿಮ ವಲಯ ಬೌಲಿಂಗ್ ವಿಭಾಗವು ಕೆಲವು ಆಶ್ಚರ್ಯಕರ ಆಯ್ಕೆಗಳನ್ನು ಹೊಂದಿದೆ. ಶಮ್ಸ್ ಮುಲಾನಿ ಮತ್ತು ಅರ್ಜಾನ್ ನಾಗ್ವಾಸ್ವಾಲ್ಲಾ ಮುನ್ನಡೆಸಲಿದ್ದಾರೆ. ಅಲ್ಲದೆ ರಾಜವರ್ಧನ್ ಹಂಗರ್ಗೇಕರ್ ಅವರನ್ನು ಮುಖ್ಯ ಬಳಗದಲ್ಲಿ ಸೇರಿಸಲಾಗಿದೆ.
ಚೇತನ್ ಸಕರಿಯಾ, ತುಷಾರ್ ದೇಶಪಾಂಡೆ, ಯುವರಾಜ್ ದೋಡಿಯಾ, ಎ ಕಾಜಿ ಮತ್ತು ಕಥನ್ ಪಟೇಲ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ.

ದೇವಧರ್ ಟ್ರೋಫಿ 2023; ಪಶ್ಚಿಮ ವಲಯ ತಂಡ
ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಹಾರ್ವಿಕ್ ದೇಸಾಯಿ, ಹೇಟ್ ಪಟೇಲ್, ಸರ್ಫರಾಜ್ ಖಾನ್, ಅಂಕಿತ್ ಬವಾನೆ, ಸಮರ್ಥ ವ್ಯಾಸ್, ಶಿವಂ ದುಬೆ, ಅತಿತ್ ಸೇಠ್, ಪಾರ್ಥ್ ಭುತ್, ಶಮ್ಸ್ ಮುಲಾನಿ, ಅರ್ಜಾನ್ ನಾಗ್ವಾಸ್ವಾಲ್ಲಾ, ಚಿಂತನ್ ಗಜ, ರಾಜವರ್ಧನ್ ಹಂಗರ್ಗೇಕರ್.
ಸ್ಟ್ಯಾಂಡ್‌ಬೈ ಆಟಗಾರರು: ಚೇತನ್ ಸಕರಿಯಾ, ತುಷಾರ್ ದೇಶಪಾಂಡೆ, ಯುವರಾಜ್ ದೊಡಿಯಾ, ಎ ಕಾಜಿ, ಕಥನ್ ಪಟೇಲ್.
ದೇವಧರ್ ಟ್ರೋಫಿ 2023: ಉತ್ತರ ವಲಯ ತಂಡ
ನಿತೀಶ್ ರಾಣಾ (ನಾಯಕ), ಅಭಿಷೇಕ್ ಶರ್ಮಾ, ಪ್ರಭ್‌ಸಿಮ್ರಾನ್ ಸಿಂಗ್, ಎಸ್ ಜಿ ರೋಹಿಲ್ಲಾ, ಎಸ್ ಖಜುರಿಯಾ, ಮನದೀಪ್ ಸಿಂಗ್, ಹಿಮಾಂಶು ರಾಣಾ, ವಿವ್ರಾಂತ್ ಶರ್ಮಾ, ನಿಶಾಂತ್ ಸಿಂಧು, ರಿಷಿ ಧವನ್, ಯುಧ್ವೀರ್ ಸಿಂಗ್, ಸಂದೀಪ್ ಶರ್ಮಾ, ಹರ್ಷಿತ್ ರಾಣಾ, ವೈಭವ್ ಅರೋರಾ, ಮಯಾಂಕ್ ಮಾರ್ಕಂಡೆ.
ಸ್ಟ್ಯಾಂಡ್ ಬೈ ಆಟಗಾರರು: ಮಯಾಂಕ್ ದಾಗರ್, ಮಯಾಂಕ್ ಯಾದವ್, ಅರ್ಸ್ಲಾನ್ ಖಾನ್, ಶುಭಂ ಅರೋರಾ, ಯುವರಾಜ್ ಸಿಂಗ್, ಮನನ್ ವೋಹ್ರಾ, ಅಕಿಬ್ ನಬಿ, ಶಿವಾಂಕ್ ವಶಿಷ್ಟ್.
ಕೋವಿಡ್-19 ಕಾರಣದಿಂದ ಕಳೆದೆರಡು ವರ್ಷ ದೇವಧರ್ ಟ್ರೋಫಿ ಪಂದ್ಯಾವಳಿಯನ್ನು ಬಿಸಿಸಿಐಗೆ ರದ್ದುಪಡಿಸಿತ್ತು. ಇದೀಗ ಮೂರು ವರ್ಷಗಳ ನಂತರ ದೇವಧರ್ ಟ್ರೋಫಿ ಮರಳಿದೆ. ದೇಶೀಯ ಪಂದ್ಯಾವಳಿ ಜುಲೈ 24ರಿಂದ ಆಗಸ್ಟ್ 3ರವರೆಗೆ ಪುದುಚೇರಿಯಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications