Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೇವಧರ್ ಟ್ರೋಫಿ: ಭಾರತ 'ಬಿ'ಗೆ ಗೆಲುವು ತಂದ ಗಾಯಕ್ವಾಡ್, ಅಪರಾಜಿತ್

Deodhar Trophy: Gaikwad, Aparajith guide India B to 108-run win over India A

ರಾಂಚಿ, ಅಕ್ಟೋಬರ್ 31: ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಮತ್ತು ಬಾಬಾ ಅಪರಾಜಿತ್ ಆಕರ್ಷಕ ಶತಕದ ಬೆಂಬಲದಿಂದ ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಗುರುವಾರ (ಅಕ್ಟೋಬರ್ 31) ನಡೆದ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಭಾರತ 'ಎ' ವಿರುದ್ಧ ಭಾರತ 'ಬಿ' 108 ರನ್ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 'ಬಿ'ಯಿಂದ, ರುತುರಾಜ್ ಗಾಯಕ್ವಾಡ್ 113, ಯಶಸ್ವಿ ಜೈಸ್ವಾಲ್ 31, ಬಾಬಾ ಅಪರಾಜಿತ್ 101, ವಿಜಯ್ ಶಂಕರ್ 26, ಕೃಷ್ಣಪ್ಪ ಗೌತಮ್ 19 ರನ್‌ ಸೇರಿಸಿದರು. ತಂಡ 50 ಓವರ್‌ಗೆ 6 ವಿಕೆಟ್ ಕಳೆದು 302 ರನ್ ಮಾಡಿತ್ತು.

ಗುರಿ ಬೆಂಬತ್ತಿದ ಭಾರತ 'ಎ', ಅಭಿಮನ್ಯು ಈಶ್ವರನ್ 20, ದೇವದತ್ ಪಡಿಕ್ಕಲ್ 10, ವಿಷ್ಣು ವಿನೋದ್ 11, ಹನುಮ ವಿಹಾರಿ 59, ಅಮನ್‌ದೀಪ್ ಖಾರೆ 25, ಇಶಾನ್ ಕಿಶನ್ 26, ಶಹಬಾಝ್ ಅಹ್ಮದ್ 18 ರನ್‌ನೊಂದಿಗೆ 47.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 194 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಇಂಡಿಯಾ ಬಿ ಇನ್ನಿಂಗ್ಸ್‌ನಲ್ಲಿ ಜಯದೇವ್ ಉನಾದ್ಕತ್ 2, ಸಿದ್ಧಾರ್ಥ್ ಕೌಲ್ 1, ಆರ್ ಅಶ್ವಿನ್ 2 ವಿಕೆಟ್ ಪಡೆದರೆ, ಇಂಡಿಯಾ ಎ ಇನ್ನಿಂಗ್ಸ್‌ನಲ್ಲಿ ರೂಶ್ ಕಲಾರಿಯಾ 3, ಮೊಹಮ್ಮದ್ ಸಿರಾಜ್ 2, ಕೃಷ್ಣಪ್ಪ ಗೌತಮ್ 1 ವಿಕೆಟ್‌ ಪಡೆದು ಗಮನ ಸೆಳೆದರು.

Story first published: Thursday, October 31, 2019, 19:11 [IST]
Other articles published on Oct 31, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+