Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

12 ವರ್ಷಗಳ ಹಿಂದಿನ ದಾಖಲೆ ಮುರಿದ ದೇವದತ್ ಪಡಿಕ್ಕಲ್

Devdutt Padikkal Breaks 12 Years Old Record

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿ ತಂಡಕ್ಕೆ ಆಧಾರವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಓಪನರ್ ದೇವದತ್ ಪಡಿಕ್ಕಲ್ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಐದನೇ ಅರ್ಧಶತಕ ದಾಖಲಿಸಿದ ದೇವದತ್‌, ಚೊಚ್ಚಲ ಆವೃತ್ತಿಯಲ್ಲೇ ಐದು ಅರ್ಧಶತಕಗಳಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ತಂಡದ ಪರ ಆಡದೇ ಐದು ಅರ್ಧಶತಕಗಳಿಸುವ ಮೂಲಕ ದೇವದತ್ ದಾಖಲೆ ಬರೆದಿದ್ದಾರೆ. ಈ ಮೂಲಕ ಶಿಖರ್‌ ಧವನ್ ಹೆಸರಲ್ಲಿದ್ದ 12 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ.

ಶಿಖರ್ ಧವನ್ 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ 4 ಅರ್ಧಶತಕ ದಾಖಲಿಸಿದ್ದರು. ಇವರ ನಂತರದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಇದ್ದು, 2015ರಲ್ಲಿ ಅದೇ ತಂಡದ ಪರವಾಗಿ 4 ಅರ್ಧಶತಕ ಸಿಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಇಂದಿನ ಪಂದ್ಯದಲ್ಲಿ ದೇವದತ್ 41 ಎಸೆತಗಳಲ್ಲಿ 50ರನ್ ಸಿಡಿಸಿದರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳಿದ್ದವು.

Story first published: Monday, November 2, 2020, 21:16 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+