For Quick Alerts
ALLOW NOTIFICATIONS  
For Daily Alerts
 

IPL ನಲ್ಲಿ ಅನ್‌ಸೋಲ್ಡ್‌: ಢಾಕಾ ಪ್ರೀಮಿಯರ್‌ ಲೀಗ್‌ನಲ್ಲಿ ಅಬ್ಬರಿಸುತ್ತಿರುವ ಹನುಮ ವಿಹಾರಿ

Hanuma vihari

ಭಾರತ ಕ್ರಿಕೆಟ್‌ ತಂಡದ ಉತ್ತಮ ಬ್ಯಾಟ್ಸ್‌ಮನ್ ಎಂದು ಹಿರಿಯ ಆಟಗಾರರಿಂದ ಭೇಷ್ ಎನಿಸಿಕೊಂಡಿರುವ ಹನುಮ ವಿಹಾರಿ ಢಾಕಾ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚಿನ ಆಟ ಪ್ರದರ್ಶಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 50 ಓವರ್‌ಗಳ ಕ್ರಿಕೆಟ್‌ ಟೂರ್ನಿಯಲ್ಲಿ ಹನುಮ ವಿಹಾರಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಢಾಕಾ ಪ್ರೀಮಿಯರ್‌ ಲೀಗ್‌ನ ಕೊನೆಯ ಮೂರು ಪಂದ್ಯಗಳಲ್ಲಿ ವಿಹಾರಿ ಅಜೇಯ ಶತಕ ಮತ್ತು ಅರ್ಧಶತಕ ಗಳಿಸಿದ್ದಾರೆ. ಒಟ್ಟಾರೆಯಾಗಿ, ಹನುಮ ವಿಹಾರಿ ಕಳೆದ ಮೂರು ಪಂದ್ಯಗಳಲ್ಲಿ 16 ಎಸೆತಗಳಲ್ಲಿ 45, 43 ಎಸೆತಗಳಲ್ಲಿ 112 ಮತ್ತು 23 ಎಸೆತಗಳಲ್ಲಿ 59 ರನ್ ಗಳಿಸಿವ ಮೂಲಕ ಅಬ್ಬರದ ಆಟ ಪ್ರದರ್ಶಿಸಿದ್ದಾರೆ.

ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಅಬಹಾನಿ ಲಿಮಿಟೆಡ್ ತಂಡವನ್ನು ಪ್ರತಿನಿಧಿಸುತ್ತಿರುವ ಈತ 3 ಇನ್ನಿಂಗ್ಸ್‌ಗಳಲ್ಲಿ 216 ರನ್ ಗಳಿಸಿದ್ದರು. ಒಂದು ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ತನ್ನ ತಾಕತ್ತು ತೋರಿಸಿದರು. ಏತನ್ಮಧ್ಯೆ, ಫೆಬ್ರವರಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನಲ್ಲಿ, ಹನುಮ ವಿಹಾರಿ ಕನಿಷ್ಠ 50 ಲಕ್ಷ ರೂ.ಗೆ ಹರಾಜನ್ನು ಪ್ರವೇಶಿಸಿದರು. ದುರದೃಷ್ಟವಶಾತ್, ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಹನುಮಾನ್ ವಿಹಾರಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

Hanuma vihari

ಇದರಿಂದ ಬೇಸರಗೊಂಡ ಹನುಮ ವಿಹಾರಿ ಬಿಸಿಸಿಐ ಅನುಮತಿ ಪಡೆದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಢಾಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಸ್ಥಾನ ಸಿಗದ ಕಾರಣ ಹತಾಶರಾಗಿರುವ ಅವರು ಅಲ್ಲಿಗೆ ಹೋಗಿದ್ದಾರೆ. ಅದರಲ್ಲೂ ಟೆಸ್ಟ್ ಸ್ಪೆಷಲಿಸ್ಟ್ ಎಂಬ ಭಾವನೆಯನ್ನು ಈ ಟೂರ್ನಿಯಿಂದ ಅಳಿಸಿ ಹಾಕುತ್ತಿದ್ದಾರೆ. ಅವರು ನಿಜವಾದ ಟಿ20 ಕ್ರಿಕೆಟಿಗರಾಗಿ ಮೂರು ಫಾರ್ಮೆಟ್ ಕ್ರಿಕೆಟರ್ ಆಗಿ ಹೊರಹೊಮ್ಮುತ್ತಿದ್ದಾರೆ. ಶತಕ ಹಾಗೂ ಅರ್ಧ ಶತಕ ಸಿಡಿಸಿರುವ ಈತ ಮುಂದಿನ ವರ್ಷ ಐಪಿಎಲ್ ನಲ್ಲಿ ಯಾವುದಾದ್ರು ತಂಡದಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಆಡುವಂತಿದೆ.

ಆದ್ರೆ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಹನುಮ ವಿಹಾರಿ ಆಡುವುದನ್ನು ನೋಡಿದ ಅಭಿಮಾನಿಗಳು ವಿಹಾರಿ ಅವರನ್ನು ಸನ್‌ರೈಸರ್ಸ್ ತಂಡಕ್ಕೆ ಖರೀದಿಸಿದ್ದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿಯೇ ಸನ್ ರೈಸರ್ಸ್ ಅಭಿಮಾನಿಗಳು ಹನುಮ ವಿಹಾರಿ ಖರೀದಿಗೆ ಬೇಡಿಕೆ ಇಡುತ್ತಿದ್ದಾರೆ. ಐಪಿಎಲ್ 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನ ಕಾಣಬಹುದು.

Rishab Pant ಅವರಿಗೆ ದಂಡ ವಿಧಿಸಿಲು ಅಸಲಿ ಕಾರಣವೇನು | Oneindia Kannada

ಭಾರತ ಪರ 15 ಟೆಸ್ಟ್ ಪಂದ್ಯಗಳನ್ನಾಡಿರುವ 28ರ ಹರೆಯದ ಹನುಮ ವಿಹಾರಿ 35ರ ಬ್ಯಾಟಿಂಗ್ ಸರಾಸರಿಯಲ್ಲಿ 808 ರನ್ ಗಳಿಸಿದ್ದರು. 1 ಶತಕ ಮತ್ತು 5 ಅರ್ಧಶತಕಗಳು ಇವರ ಹೆಸರಿನಲ್ಲಿವೆ.

Story first published: Friday, April 8, 2022, 12:07 [IST]
Other articles published on Apr 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+