Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಜವೇಂದ್ರ ಚಹಾಲ್ ಭಾವೀ ಪತ್ನಿ ಧನಶ್ರೀ ದುಬೈನಲ್ಲಿ ಕ್ವಾರಂಟೈನ್: ವೀಡಿಯೋ ಹಂಚಿಕೊಂಡ ಚಹಾಲ್

Dhanashree Verma Supporting RCB From Quarantine Period: Video

ಕ್ರಿಕೆಟಿಗ ಯುಜವೇಂದ್ರ ಚಹಾಲ್ ಅವರ ಭಾವೀ ಪತ್ನಿ ಡಾ. ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವಳು ತನ್ನ ನೃತ್ಯ ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಡಾ. ಧನಶ್ರೀ ಶರ್ಮಾ ದುಬೈ ತಲುಪಿದ್ದಾರೆ. ಶೀಘ್ರದಲ್ಲೇ ಅವರು ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವನ್ನು ಹುರಿದುಂಬಿಸುವುದನ್ನು ಕಾಣಬಹುದು.

ದುಬೈನ ಕೋವಿಡ್-19 ನಿಯಮಗಳಂತೆ ಸದ್ಯ ಧನಶ್ರೀ ಕ್ವಾರಂಟೈನ್‌ ದಿನಗಳನ್ನು ಕಳೆಯುತ್ತಿರುವಾಗಿ ವೀಡಿಯೋ ಹಂಚಿಕೊಂಡಿದ್ದಾರೆ. ದುಬೈಗೆ ತೆರಳುವ ಮೊದಲು, ಹೃತಿಕ್ ಅವರ ಹಾಡಿಗೆ ನೃತ್ಯ ಮಾಡುತ್ತಿರುವ ಧನಶ್ರೀ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಅವರು ತಮ್ಮ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದು, ಹೋಟೆಲ್ನ ಕೋಣೆಯಿಂದಲೇ ಧನಶ್ರೀ ವಿಡಿಯೋ ಮೂಲಕ ಆರ್‌ಸಿಬಿಯನ್ನು ಹುರಿದುಂಬಿಸಿದರು. ಧನಶ್ರೀ, 'ನಾನು ನನ್ನ ಕ್ವಾರಂಟೈನ್ ಹೊಂದಿದ್ದೇನೆ ಆದರೆ ಆರ್‌ಸಿಬಿಯನ್ನು ಬೆಂಬಲಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ'' ಎಂದು ಪೋಸ್ಟ್‌ ಮಾಡಿರುವ ಧನಶ್ರೀ ಅವರ ವಿಡಿಯೋವನ್ನು ಯುಜವೇಂದ್ರ ಚಹಾಲ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಧನಶ್ರೀ ಕ್ಯಾರೆಂಟೈನ್ ಅವಧಿಯಲ್ಲಿ ಆರ್‌ಸಿಬಿಯನ್ನು ಬೆಂಬಲಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಕ್ರೀಡಾಂಗಣದಲ್ಲಿ ತಂಡವನ್ನು ಬೆಂಬಲಿಸುತ್ತಿದ್ದಾರೆ ಎಂದು ಯುಜವೇಂದ್ರ ಚಹಾಲ್ ಹೇಳಿದ್ದಾರೆ.

Story first published: Thursday, October 15, 2020, 10:20 [IST]
Other articles published on Oct 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+