
ಬೆಂಗಳೂರು, ಏಪ್ರಿಲ್ 21: ಮಂಕಡಿಂಗ್ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ರನ್‌ಔಟ್ ಮಾಡಿ ಭಾರಿ ಚರ್ಚೆ ಎಬ್ಬಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್‌ಗೆ ಇದೀಗ ಅವರ ಮತ್ತೊಂದು ಮಕಡಿಂಗ್ ಪ್ರಯತ್ನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಚಮಕ್ ನೀಡಿದ್ದಾರೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಣ ಪಂದ್ಯದಲ್ಲಿಅಶ್ವಿನ್ ತಮ್ಮ ಬೌಲಿಂಗ್‌ನಲ್ಲಿ ಶಿಖರ್ ಧವನ್ ಅವರನ್ನು 13ನೇ ಓವರ್‌ನಲ್ಲಿ ಮಂಕಡಿಂಗ್ ಮೂಲಕ ರನ್‌ಔಟ್ ಮಾಡಲು ಯತ್ನಿಸಿದರು. ಬಳಿಕ ನಂತರದ ಎಸೆತದ ವೇಳೆ ಧವನ್ ಕ್ರೀಸ್ ಬಿಟ್ಟು ಓಡುತ್ತಿರುವವರಂತೆ ನಟಿಸಿ ಅಶ್ವಿನ್‌ಗೆ ಚಮಕ್ ನೀಡಿದರು.
ಅಶ್ವಿನ್‌ಗೆ ಧವನ್ ನೀಡಿದ ಚಮಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ. ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಿಂಗ್ಸ್ ಇಲೆವೆನ್ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಶಿಖರ್ ಧವನ್ ಅರ್ಧಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಡ್ಯಾನ್ಸಿಂಗ್ ಧವನ್' ಎಂದು ಶಿಖರ್ ಧವನ್ ಅಚರ ಈ ಚೇಷ್ಟೆಯನ್ನು ಪೋಸ್ಟ್ ಮಾಡಲಾಗಿದೆ.