10 ಸಾವಿರ ರನ್ ಕ್ಲಬ್ ಸೇರಿದ 5ನೇ ಭಾರತೀಯ ಆಟಗಾರ ಧೋನಿ

ಸಿಡ್ನಿ, ಜನವರಿ 13: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಅವರು ನಿಧಾನಗತಿಯಲ್ಲಿ ಅರ್ಧಶತಕ ಗಳಿಸಿದ್ದು, ಸದ್ಯಕ್ಕೆ ಚರ್ಚಿತವಾಗುತ್ತಿದೆ. ಈ ನಡುವೆ ಧೋನಿ ಅವರು ಏಕದಿನ ಅಂತಾರಾಷ್ಟ್ರೀಯ 10,000ರನ್ ಗಡಿ ದಾಟಿದರು.
ಈ ಸಾಧನೆ ಮಾಡಿದ ಭಾರತದ 5ನೇ ಆಟಗಾರ ಹಾಗೂ ವಿಶ್ವದ 13ನೇ ಆಟಗಾರರಾಗಿದ್ದರು. 37 ವರ್ಷ ವಯಸ್ಸಿನ ಧೋನಿ ಅವರು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ 9,999ರನ್ ಗಳಿಸಿದ್ದರು. ಈ ಪಂದ್ಯದಲ್ಲಿ 51ರನ್ ಗಳಿಸಿದ ಧೋನಿ ಅವರು ಈ ಸಾಧನೆ ಮಾಡಿದರು.
ವಿಕೆಟ್ ಕೀಪರ್ ಗಳ ಪೈಕಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ನಂತರ ಭಾರತದ ಎಂಎಸ್ ಧೋನಿ ಮಾತ್ರ ಈ ಸಾಧನೆ ಮಾಡಿದ್ದಾರೆ.
ಭಾರತದ ಪರ 10 ಸಾವಿರ ಪ್ಲಸ್ ರನ್ ಗಳಿಸಿದವರು:
| ಆಟಗಾರ | ಪಂದ್ಯ | ಇನ್ನಿಂಗ್ಸ್ | ರನ್ | ರನ್ ಸರಾಸರಿ | 100-50 |
| ಸಚಿನ್ ತೆಂಡೂಲ್ಕರ್ | 463 | 452 | 18426 | 44.83 | 49 ಶತಕ, 96 ಅರ್ಧ ಶತಕ |
| ಸೌರವ್ ಗಂಗೂಲಿ | 308 | 297 | 11221 | 40.95 | 22, 71 |
| ರಾಹುಲ್ ದ್ರಾವಿಡ್ | 340 | 314 | 10768 | 39.15 | 12, 82 |
| ವಿರಾಟ್ ಕೊಹ್ಲಿ | 217 | 209 | 10235 | 38 | 48 |
| ಎಂಎಸ್ ಧೋನಿ | 333 | 279 | 10050 | 49.75 | 9, 68 |

Story first published: Sunday, January 13, 2019, 17:51 [IST]
Other articles published on Jan 13, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications