For Quick Alerts
ALLOW NOTIFICATIONS  
For Daily Alerts
 

MS Dhoni ಫಿಟ್ ಆಗಿಲ್ಲವೇ? ಇಲ್ಲಿದೆ ವೀಡಿಯೊ

ಐಪಿಎಲ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಲೀಗ್‌ನಲ್ಲಿ ಭಾಗವಹಿಸುವ 10 ತಂಡಗಳು ಈಗಾಗಲೇ ತಮ್ಮ ತಯಾರಿ ನಡೆಸಿವೆ. ಚೆನ್ನೈ ಸೂಪರ್ ಕಿಂಗ್ಸ್‌ ಸಹ ಲೀಗ್‌ನಲ್ಲಿ ಮತ್ತೊಮ್ಮೆ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಈ ವೇಳೆ ಎಲ್ಲರ ಕಣ್ಣುಗಳು ಸಿಎಸ್‌ಕೆ ತಂಡದ ಭರವಸೆಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ನೆಟ್ಟಿರಲಿವೆ. ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಅವರು ಐಪಿಎಲ್‌ನಲ್ಲಿ ಚೆನ್ನೈ ಪರ ಆಡುತ್ತಿದ್ದಾರೆ. ಈ ಬಾರಿಯೂ ಧೋನಿ ಚೆನ್ನೈ ಪರ ಆಡಲು ಸಜ್ಜಾಗಿದ್ದಾರೆ. ಆದರೆ ಈಗ ಧೋನಿ ಅವರ ಬಗ್ಗೆ ಪ್ರಶ್ನೆ ಒಂದು ಮೂಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಈ ಆವೃತ್ತಿಯ ಆರಂಭದಲ್ಲೆ ದೊಡ್ಡ ಪೆಟ್ಟು ಬಿದ್ದಿದೆ. ಆಸ್ಟ್ರೇಲಿಯಾದ ವೇಗದ ಬೌಲರ್‌ ನಾಥನ್‌ ಎಲಿಸ್‌ ಲೀಗ್‌ನಿಂದಲೇ ಹೊರ ನಡೆದಿದ್ದಾರೆ. ಇನ್ನು ಮ್ಯಾಥ್ಯೂ ಶಾರ್ಟ್‌ ಅವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೇ ವೇಳೆ ಧೋನಿ ಅವರ ಫಿಟ್ನೆಸ್‌ ಬಗ್ಗೆಯೂ ಈಗ ಪ್ರಶ್ನೆಗಳು ಏಳುವಂತೆ ಮಾಡಿವೆ. ಏಕೆಂದರೆ ಧೋನಿ ಮೈದಾನದಲ್ಲಿ ಕುಂಟುತ್ತಾ ನಡೆಯುವುದನ್ನು ಕಾಣಬಹುದಾಗಿದೆ.

Dhoni

ಕಳೆದ ಆವೃತ್ತಿಯಲ್ಲೂ ಧೋನಿ ಅವರು ಫಿಟ್ನೆಸ್‌ ಸಂಬಂಧಿಸಿದ್ದ ಸವಾಲುಗಳನ್ನು ಎದುರಿಸಿದ್ದರು. ಧೋನಿ ಇತ್ತೀಚಿಗೆ ಚೆಪಾಕ್ ಮೈದಾನದಲ್ಲಿ ಅಭ್ಯಾಸ ನಡೆಸಿ, ಮರಳಿ ಬರುವಾಗ ಅವರು ಸಂಪೂರ್ಣ ಫಿಟ್‌ ಆಗಿದ್ದಾರೆ ಎಂದು ತೋರುತ್ತಿರಲಿಲ್ಲ. ಅವರು ನಡಿಗೆ ಸಾಮಾನ್ಯಕ್ಕಿಂತ ಭಿನ್ನವಾಗಿತ್ತು. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಧೋನಿ ಫಿಟ್ನೆಸ್‌ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸಿಎಸ್‌ಕೆ ಅಭಿಮಾನಿಗಳ ಚಿಂತೆ ಹೆಚ್ಚಿಸಿದ ವಿಡಿಯೋ

ಬೌಲರ್‌ಗಳ ನಿದ್ದೆ ಹಾಳು ಮಾಡುತ್ತಿದ್ದ ಧೋನಿ ಅವರ ಬ್ಯಾಟಿಂಗ್ ಕಳೆದ ಕೆಲವು ವರ್ಷಗಳಲ್ಲಿ ನಿರಾಶಾದಾಯಕವಾಗಿದೆ. ಇವರು ಕಳೆದ ಎರಡು ವರ್ಷಗಳಲ್ಲಿ ಮೆಂಟರ್‌ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಏಳು ಅಥವಾ ಅದಕ್ಕಿಂತ ಕಡಿಮೆಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇವರು 2024ರಲ್ಲಿ ಆಡಿದ 14 ಪಂದ್ಯಗಳಲ್ಲಿ 161 ರನ್‌ ಸಿಡಿಸಿದ್ದರು. ಇನ್ನು ಕಳೆದ ಆವೃತ್ತಿಯಲ್ಲಿ ಎಲ್ಲ ಪಂದ್ಯಗಳನ್ನು ಆಡಿ 196 ರನ್‌ ಕಲೆ ಹಾಕಿದ್ದಾರೆ.

Dhoni

ಭಾರತದ ಮಾಜಿ ಆಟಗಾರರಾದ ಇರ್ಫಾನ್‌ ಪಠಾಣ್‌ ಹಾಗೂ ರಾಬಿನ್ ಉತ್ತಪ್ಪ ಅವರು ಧೋನಿ ಅವರಿಗೆ ಈ ಐಪಿಎಲ್‌ ಕೊನೆಯ ಆವೃತ್ತಿ ಆಗಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ಚೆನ್ನೈ ತಂಡದ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ನೀಡಲಾಗಿದೆ. ಬದಲಿ ವಿಕೆಟ್‌ ಕೀಪರ್ ಆಗಿ ಸಂಜು ಸ್ಯಾಮ್ಸನ್‌ ಅವರನ್ನು ಸಹ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇದರಿಂದ ವಿಕೆಟ್‌ ಕೀಪಿಂಗ್‌ ಸಮಸ್ಯೆ ಸಹ ಬಗೆ ಹರಿದಂತೆ ಆಗಿದೆ.

ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಭಿಯಾನವನ್ನು ಮಾರ್ಚ್‌ 30 ರಿಂದ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಸಿಎಸ್‌ಕೆ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಾಟ ನಡೆಸಲಿದೆ.

Story first published: Saturday, March 21, 2026, 11:20 [IST]
Other articles published on Mar 21, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+