For Quick Alerts
ALLOW NOTIFICATIONS  
For Daily Alerts
 

2021ಕ್ಕೆ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ ಎಂ ಎಸ್ ಧೋನಿ

dhoni has reportedly told the management he can go back in auction pool

ಒಂದು ಕಡೆ ಕ್ರಿಕೆಟ್ ಅಂಗಳದಲ್ಲಿ ಧೋನಿ ನಿವೃತ್ತಿಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿಧೋನಿ 2021ನೇ ಆವೃತ್ತಿಯ ಐಪಿಎಲ್‌ನಲ್ಲೂ ಪಾಲ್ಗೊಳ್ಳುವುದು ಖಚಿತವಾಗುತ್ತಿದೆ. ಅಭಿಮಾನಿಗಳು ಕ್ರಿಕೆಟ್ ಪಂಡಿತರು ಧೋನಿ ಯಾವಾಗ ನಿವೃತ್ತರಾಗುತ್ತಾರೆ ಎಂದೆಲ್ಲಾ ಲೆಕ್ಕಾಚಾರದಲ್ಲಿ ತೊಡಗಿದ್ದರೆ ಧೋನಿ ಆ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ.

ಧೋನಿಯ ಚುಟುಕು ಕ್ರಿಕೆಟ್‌ನಿಂದ ಸಧ್ಯಕ್ಕೆ ನಿವೃತ್ತರಾಗುವುದಿಲ್ಲ ಅನ್ನೋದಿಕ್ಕೆ ಸಿಎಸ್‌ಕೆ ಮೂಲದಿಂದ ಬಂದಿರುವ ಈ ಖಚಿತ ಮಾಹಿತಿ ಸ್ಪಷ್ಟತೆಯನ್ನು ನೀಡುತ್ತದೆ. ಧೋನಿ ಇನ್ನೂ ಸಾಕಷ್ಟು ಸಮಯ ಕ್ರಿಕೆಟ್ ಅಂಗಳದಲ್ಲಿರಲು ಬಯಸಿದ್ದಾರೆ ಅನ್ನೋದು ಕೂಡ ಖಚಿತವಾಗಿದೆ.

ಆರಂಭದಿಂದಲೂ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿಕೊಂಡು ಬಂದಿದ್ದಾರೆ. ಚೆನ್ನೈಗೆ ಮೂರು ಬಾರಿ ಐಪಿಎಲ್ ಚಾಂಪಿಯನ್ ಪಟ್ಟವನ್ನೂ ಕೊಡಿಸಿದ್ದಾರೆ ಧೋನಿ. ಇದೀಗ ಚೆನ್ನೈ ಸೂಪರ್ ಕಿಂಗ್‌ ಮೂಲದಿಂದ ದೊರೆತಿರುವ ಮಾಹಿತಿಯ ಪ್ರಕಾರ ಮುಂದಿನ ವರ್ಷದಲ್ಲಿ ನಡೆಯುವ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಧೋನಿ ಪಾಲ್ಗೊಳ್ಳಲಿದ್ದಾರೆ ಅನ್ನೋದು.

ಸ್ವತಃ ಧೋನಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸಿಎಸ್‌ಕೆ ಮೂಲಗಳು ಹೇಳಿದೆ. ಮೂಲದ ಪ್ರಕಾರ ಸಿಎಸ್‌ಕೆ ಬಿಡ್ಡಿಂಗ್‌ಗೆ ಅವಕಾಶವನ್ನು ನೀಡದೆ ರೈಟ್ ಟು ಮ್ಯಾಚ್ ಕಾರ್ಡ್‌ ಬಳಸಿ ತನ್ನಲ್ಲೇ ಉಳಿಸಿಕೊಳ್ಳಬೇಕು ಎಂದು ಚಿಂತಿಸಿದೆ.

ಮಾಹಿತಿಯ ಪ್ರಕಾರ ಧೋನಿ ಈ ರೀತಿ ಚಿಂತಿಸಲು ತಂಡದ ಒಳಿತೇ ಕಾರಣವಂತೆ. ಧೋನಿ ಬೇಸ್ ವ್ಯಾಲ್ಯೂ 15 ಕೋಟಿಗೂ ಅಧಿಕ ಇದ್ದು ಮುಂದಿನ ಹರಾಜಿನಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಈ ಮೊತ್ತ ಕಡೆಮೆಯಾಗಬಹುದು, ಮತ್ತು ಆ ಮೊತ್ತದಿಂದ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಬಹುದು ಎಂಬ ಯೋಚನೆ ಅಡಗಿದೆ ಎನ್ನಲಾಗ್ತಿದೆ.

ಅದೇನೆ ಇರಲಿ ಒಂದು ವೇಳೆ ಮಹೇಂದ್ರ ಸಿಂಗ್ ಧೋನಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾದರೆ ಸಾಕಷ್ಟು ರೋಚಕತೆಗೆ ಕಾರಣವಾಗಲಿದೆ. ಮಾತ್ರವಲ್ಲ ಇದೇ ಮೊದಲ ಬಾರಿಗೆ ಮಹೇಂದ್ರ ಸಿಂಗ್ ಧೋನಿ ಹರಾಜಿನಲ್ಲಿ ಪಾಲ್ಗೊಂಡಂತಾಗುತ್ತದೆ.

Story first published: Wednesday, November 27, 2019, 19:59 [IST]
Other articles published on Nov 27, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+