For Quick Alerts
ALLOW NOTIFICATIONS  
For Daily Alerts
 

ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ಧೋನಿ: ಚೆಂಡು ಹುಡುಕುತ್ತಾ ಗಲ್ಲಿ ಕ್ರಿಕೆಟ್ ನೆನಪಿಸಿದ ಮಾಹಿ: ವಿಡಿಯೋ

Dhoni Hits huge Sixes During net Session In Dubai; Then Goes To Search Balls like Gully Cricket Style

ದುಬೈ, ಆಗಸ್ಟ್ 24: ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಿಗೆ ದಿನಗಣನೆ ಆರಂಭವಾಗಿದೆ. ಮುಂದಿನ ತಿಂಗಳು ಐಪಿಎಲ್‌ನ ಉಳಿದ ಪಂದ್ಯಗಳು ನಡೆಯಲಿದೆ. ಯುಎಇನಲ್ಲಿ ನಡೆಯಲಿರುವ ಈ ಐಪಿಎಲ್ ಪಂದ್ಯಗಳಿಗಾಗಿ ಈಗಾಗಲೇ ಕೆಲ ತಂಡಗಳು ದುಬೈ ತಲುಪಿದ್ದು ಅಭ್ಯಾಸವನ್ನು ಆರಂಭಿಸಿದೆ. ಇದರಲ್ಲಿ ಮೊದಲಿಗೆ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ದುಬೈ ಸೇರಿಕೊಂಡಿದ್ದು ಕಠಿಣ ಅಭ್ಯಾಸದಲ್ಲಿ ಭಾಗಿಯಾಗಿದೆ. ಅಭ್ಯಾಸದ ಕೆಲ ಕುತೂಹಲಕಾರಿ ವಿಡಿಯೋಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದೆ. ಆದರೆ ಇಂದು ವಿಶೇಷವಾದ ವಿಡಿಯೋ ತುಣುಕೊಂದನ್ನು ಸಿಎಸ್‌ಕೆ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಅಭಿಮಾನಿಗಳಿ ಗಲ್ಲಿ ಕ್ರಿಕೆಟ್ ನೆನಪಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಈ ಬಾರಿಯ ಐಪಿಎಲ್‌ಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಕಠಿಣ ಅಭ್ಯಾಸವನ್ನು ನಡೆಸುತ್ತಿರುವ ಧೋನಿ ನೆಟ್ ಸೆಶನ್‌ನಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿದ್ದಾರೆ. ಆದರೆ ಸಿಕ್ಸರ್ ಸಿಡಿಸಿದ ನಂತರ ಚೆಂಡುಗಳೆಲ್ಲಾ ಮೈದಾನದಾಚೆ ಹೋಗಿ ಬಿದ್ದ ಬಳಿಕ ಅಬ್ಯಾಸಕ್ಕೆ ಚೆಂಡೇ ಇಲ್ಲದಂತಾಗಿತ್ತು. ಅದಾದ ಬಳಿಕ ಸ್ವತಃ ಎಂಎಸ್ ಧೋನಿ ಚೆಂಡನ್ನು ಹುಡುಕಲು ಇತರ ಸದಸ್ಯರ ಜೊತೆಗೆ ತೆರಳಿದ್ದಾರೆ. ಅಂಗಳದಾಚೆಗಿನ ಪೊದೆಗಳಲ್ಲಿ, ಸಂದುಗಳಲ್ಲಿ ಧೋನಿ ಬ್ಯಾಟ್‌ನಿಂದ ಸರಿಸುತ್ತಾ ಹುಡುಕಾಡುತ್ತಿದ್ದರೆ ಪಕ್ಕಾ ಗಲ್ಲಿ ಕ್ರಿಕೆಟ್ ನೆನಪಿಸುವಂತಿದೆ.

ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ಗಳಲ್ಲಿ ಅಥವಾ ಲೀಗ್ ಕ್ರಿಕೆಟ್‌ಗಳಲ್ಲಿ ಸಾಕಷ್ಟು ಸಿಬ್ಬಂದಿಗಳು ಇರುವುದರಿಂದ ಪ್ರೇಕ್ಷಕರು ಇರುವುದರಿಂದ ಚೆಂಡಿನ ಹುಡುಕಾಟ ಸಾಹಸವಲ್ಲ. ಆದರೆ ಕೊರೊನಾವೈಸರ್‌ನ ಕಾರಣದಿಂದಾಗಿ ಸಾಕಷ್ಟು ಕಠಿಣ ನಿರ್ಬಂಧಗಳಿವೆ. ಹೀಗಾಗಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಲಾಗುತ್ತಿದೆ. ಇದೇ ಕಾರಣದಿಂದಾಗಿ ಚೆಂಡಿನ ಹುಡುಕಾಟಕ್ಕೆ ಸ್ವತಃ ಧೋನಿಯೇ ಹೋಗಬೇಕಾಯಿತು. ಆದರೆ ಧೋನಿ ಚೆಂಡನ್ನು ಹುಡುಕುತ್ತಿರುವ ಈ ವಿಡಿಯೋ ಅಭಿಮಾನಿಗಳಿಗೆ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.

ಇನ್ನು ಈ ವಿಡಿಯೋಗೆ ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆಯಲ್ಲಿ ಸುಂದರ ತಲೆಬರಹವನ್ನು ಕೂಡ ನೀಡಲಾಗಿದೆ. " ಧೋನಿಯ ಸಿಕ್ಸರ್‌ಗಳಿಗೆ, ಧೋನಿಯ ಮೇಲಿನ ನಮ್ಮ ಪ್ರೀತಿಗೆ ಗಡಿರೇಖೆಗಳಿಲ್ಲ" ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು ಕೆಲ ಅಭಿಮಾನಿಗಳು ಈ ದೃಶ್ಯ ನಮ್ಮ ಬಾಲ್ಯವನ್ನು ನೆನಪಿಸಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ.

ಫಾರ್ಮ್‌ಗೆ ಮರಳಿದ ಸಿಎಸ್‌ಕೆ: 2020ರ ಐಪಿಎಲ್ ಆವೃತ್ತಿಯನ್ನು ಅತ್ಯಂತ ಹೀನಾಯವಾಗಿ ಕೊನೆಗೊಳಿಸಿತ್ತು ಚೆನ್ನೈ ಸೂಪರ್ ಕಿಂಗ್ಸ್. ಐಪಿಎಲ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಾನು ಪಾಲ್ಗೊಂಡ ಟೂರ್ನಿಯಲ್ಲಿ ಪ್ಲೇಆಫ್ ಹಂತಕ್ಕೇ ತಲುಪದೆಯೇ ಟೂರ್ನಿಯಿಂದ ಹೊರಬಿದ್ದಿತ್ತು. 7ನೇ ಸ್ಥಾನಿಯಾಗಿ ಟೂರ್ನಿಯನ್ನು ಅಂತ್ಯಗೊಳಿಸಿತ್ತು. ಆದರೆ ಕೇವಲ ಆರು ತಿಂಗಳ ಅಂತರದಲ್ಲಿ ಆರಂಭವಾದ ಐಪಿಎಲ್ 2021ರ ಆವೃತ್ತಿಯಲ್ಲಿ ಧೋನಿ ಪಡೆ ಸಂಪೂರ್ಣ ಬದಲಾಗಿತ್ತು. ಟೂರ್ನಿಯಲ್ಲಿ ಅತ್ಯದ್ಭತ ಪ್ರದರ್ಶನ ನೀಡುವ ಮೂಲಕ ಬಹುತೇಕ ಎಲ್ಲಾ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಾ ಸಾಗಿದ್ದು ಅಗ್ರ ಸ್ಥಾನಕ್ಕಾಗಿ ಪೈಪೋಟಿಯನ್ನು ನಡೆಸುತ್ತಿದೆ.

ಐಪಿಎಲ್‌ನ 14ನೇ ಆವೃತ್ತಿಯ ಪಂದ್ಯಗಳು ಮೊದಲಾರ್ಧ ಮುಕ್ತಾಯವಾಗುತ್ತಿದ್ದಂತೆಯೇ ಕೊರೊನಾವೈರಸ್‌ಗೆ ತುತ್ತಾಗಿರುವ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದು ಇದು ಮುಂದಿನ ತಿಂಗಳು ಪುನಾರಂಭವಾಗಲಿದೆ. ಈ ಸಂದರ್ಭದಲ್ಲಿ ಧೊನಿ ಪಡೆ ಮೊದಲ ಚರಣದಲ್ಲಿ ನೀಡಿದ ಅದ್ಭುತ ಫಾರ್ಮ್‌ಅನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ಅದಕ್ಕಾಗಿ ಧೋನಿ ಪಡೆ ಅತ್ಯಂತ ಕಠಿಣ ತರಬೇತಿಯನ್ನು ದುಬೈ ಅಂಗಳದಲ್ಲಿ ನಡೆಸುತ್ತಿದೆ.

ಫಾರ್ಮ್ ಕಂಡುಕೊಳ್ಳುತ್ತಾರಾ ಧೋನಿ: ಈ ಬಾರಿಯ ಆವೃತ್ತಿಯ ಮೊದಲಾರ್ದದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಹುತೇಕ ಎಲ್ಲಾ ಆಟಗಾರರು ಕೂಡ ಅದ್ಭುತ ಫಾರ್ಮ್‌ನಲ್ಲಿದ್ದರು. ಆದರೆ ಸ್ವತಃ ನಾಯಕ ಎಂಎಸ್ ಧೋನಿ ಮಾತ್ರ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಎರಡನೇ ಚರಣದ ಪಂದ್ಯದಲ್ಲಿ ಮತ್ತೆ ತಮ್ಮ ಹಳೆಯ ಫಾರ್ಮ್‌ಗೆ ಮರಳಲು ಭಾರೀ ಪ್ರಯತ್ನ ನಡೆಸುತ್ತಿದ್ದಾರೆ.

Story first published: Tuesday, August 24, 2021, 23:56 [IST]
Other articles published on Aug 24, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+