ಎಂ.ಎಸ್ ಧೋನಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಶೊಯೇಬ್ ಅಖ್ತರ್!

ಲಂಡನ್, ಜೂನ್ 06: ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ರಾವಲ್‌ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೊಯೇಬ್ ಅಖ್ತರ್, ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್ ಧೋನಿ ಕ್ರಿಕೆಟ್ ಜಾಣ್ಮೆಯಲ್ಲಿ ಕಂಪ್ಯೂಟರ್‌ಗಿಂತಲೂ ಫಾಸ್ಟ್ ಎಂದು ಹೇಳಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
"ಧೋನಿ ಕಂಪ್ಯೂಟರ್‌ಗಿಂತಲೂ ಫಾಸ್ಟ್. ಕ್ರಿಕೆಟ್‌ನ ಪಿಚ್ ಕುರಿತಾಗಿ ಕಂಪ್ಯೂಟರ್ ಏನನ್ನೇ ಹೇಳಿದರು, ಎಂ.ಎಸ್ ಧೋನಿ ಕಂಪ್ಯೂಟರ್‌ಗಿಂತಲೂ ವೇಗವಾಗಿ ಅವನ್ನು ಹೇಳಬಲ್ಲರು,'' ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಧೋನಿ ಅವರ ಸಾಮರ್ಥ್ಯವನ್ನು ಹಾಡಿ ಹೊಗಳಿದ್ದಾರೆ.
ಪ್ರಸಕ್ತ ಚಾಲ್ತಿಯಲ್ಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್‌ಗಳ ಜಯ ದಾಖಲಿಸಿ ಶುಭಾರಂಭ ಮಾಡಿದೆ. ಪಂದ್ಯದಲ್ಲಿ 34 ರನ್‌ಗಳನ್ನು ಗಳಿಸಿ ಗಮನ ಸೆಳೆದ ಧೋನಿ, ವಿಕೆಟ್ ಹಿಂಬದಿಯಲ್ಲೂ ತಮ್ಮ ಕೈಚಳಕ ಪ್ರದರ್ಶಿ ಒಂದು ಆಕರ್ಷಕ ಸ್ಟಂಪಿಂಗ್ ಮಾಡಿದ್ದರು.
ಇದೇ ವೇಳೆ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಕುರಿತಾಗಿಯೂ ಮೆಚ್ಚುಗೆಯ ಮಾತುಗಳನ್ನು ಆಡಿರುವ ಅಖ್ತರ್, ತಂಡದ 4ನೇ ಕ್ರಮಾಂಕಕ್ಕೆ ರಾಹುಲ್ ಹೇಳಿ ಮಾಡಿಸಿದ ಬ್ಯಾಟ್ಸ್‌ಮನ್ ಎಂದಿದ್ದಾರೆ.
"ರಾಹುಲ್ ಅವರನ್ನು ಒಬ್ಬ ಕ್ರಿಕೆಟರ್ ರೂಪದಲ್ಲಿ ಬಹಳ ಇಷ್ಟಪಡುತ್ತೇನೆ. ವಿರಾಟ್ ಕೊಹ್ಲಿ ಅವರ ಮಾರ್ಗದಲ್ಲಿ ಸಾಗುವ ಸಾಮರ್ಥ್ಯ ರಾಹುಲ್ ಅವರಲ್ಲಿದೆ. ಭವಿಷ್ಯದಲ್ಲಿ ಅವರು ಅದ್ಭುತ ಬ್ಯಾಟ್ಸ್‌ಮನ್ ಆಗಬಹುದು. ನಾನು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ತಂಡದಲ್ಲಿ ಆಡುವ ಅವಕಾಶ ಸಿಗದೇ ಇರುವ ಸಂದರ್ಭಗಳಲ್ಲಿ ತನ್ನೆಲ್ಲಾ ಕೋಪವನ್ನು ನೆಟ್ಸ್‌ನಲ್ಲಿ ಹೊರಹಾಕು ಎಂದು ಸಲಹೆ ನೀಡಿದ್ದೆ. ಯಾವುದೇ ಕಾರಣಕ್ಕೂ ಏಕಾಗ್ರತೆ ಕಳೆದುಕೊಳ್ಳಬೇಡ. ಒಬ್ಬ ದೊಡ್ಡ ಆಟಗಾರನಾಗುವ ಸಾಮರ್ಥ್ಯ ನಿನ್ನಲ್ಲಿದೆ,'' ಎಂದು ಹೇಳಿದ್ದ ಎಂದು ಅಖ್ತರ್ ಹೇಳಿಕೊಂಡಿದ್ದಾರೆ.
ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ದಾಖಲಿಸಿದ್ದ ರಾಹುಲ್, ದಕ್ಷಿಣ ಆಫ್ರಿಕಾ ವಿರುದ್ಧವೂ ಗಮನಾರ್ಹ ಬ್ಯಾಟಿಂಗ್ ನಡೆಸಿ 26 ರನ್‌ಗಳ ಕಾಣಿಕೆ ನೀಡಿದರಲ್ಲದೆ, ಉಪನಾಯಕ ರೋಹಿತ್ ಶರ್ಮಾ ಅವರೊಟ್ಟಿಗೆ 85 ರನ್‌ಗಳ ಜೊತೆಯಾಟವನ್ನೂ ನಡೆಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications