ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಧೋನಿ ಅಲಭ್ಯ, ಪಂತ್‌ಗೆ ಸ್ಥಾನ!?

ನವದೆಹಲಿ, ಜುಲೈ 20: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಅಲಭ್ಯರಾಗಲಿದ್ದಾರೆ. ಸರಣಿ ಬದಲು ಧೋನಿ ಸೇನೆಗೆ 2 ತಿಂಗಳ ಕಾಲ ಸೇವೆ ಸಲ್ಲಿಸಲು ನಿರ್ಧರಿಸಿದ್ದಾರೆ. ಶುಕ್ರವಾರ (ಜುಲೈ 19) ಈ ವಿಚಾರವನ್ನು ಅಧಿಕೃತ ಮೂಲ ಖಾತರಿಪಡಿಸಿದೆ.
ಭಾರತೀಯ ಪ್ರಾದೇಶಿಕ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಗೌರವ ಲೆಫ್ಟಿನೆಂಟ್ ಆಗಿರುವ ಕೂಲ್ ಕ್ಯಾಪ್ಟನ್, ಮುಂದಿನ ಎರಡು ತಿಂಗಳಕಾಲ ತನ್ನ ರೆಜಿಮೆಂಟ್‌ನ ಸೇವೆಯಲ್ಲಿ ಕಳೆಯಲಿದ್ದಾರೆ. ಇದರೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಧೋನಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ.
ಪಿಟಿಐ ವರದಿಯ ಪ್ರಕಾರ ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು, 'ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯರಿರಲು ಧೋನಿ ತಾನೇ ನಿರ್ಧರಿಸಿದ್ದಾರೆ. ಮುಂದಿನ ಎರಡು ತಿಂಗಳ ಕಾಲ ಧೋನಿ ತನ್ನ ಪ್ಯಾರಾಮಿಲಿಟರಿ ರೆಜಿಮೆಂಟ್‌ನಲ್ಲಿ ಕಳೆಯಲಿದ್ದಾರೆ,' ಎಂದಿದ್ದಾರೆ.
ವಿಶ್ವಕಪ್ ಬಳಿಕ ಭಾರತ ಮೊದಲ ಬಾರಿಗೆ ಪಾಲ್ಗೊಳ್ಳುವ ಪ್ರವಾಸ ಸರಣಿಯಿಂದ ಧೋನಿ ಹಿಂದೆ ಸರಿದಿರುವುದರಿಂದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್, ಧೋನಿ ಜಾಗ ಆವರಿಸುವುದನ್ನು ನಿರೀಕ್ಷಿಸಲಾಗಿದೆ. ಟೆಸ್ಟ್‌ನಲ್ಲಿ ಪಂತ್ ಬದಲಿಗೆ ವೃದ್ಧಿಮಾನ್ ಸಾಹ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಆಗಸ್ಟ್ 3ರಿಂದ ಪ್ರವಾಸ ಸರಣಿ ಆರಂಭಗೊಳ್ಳಲಿದ್ದು, ಸರಣಿಯು 3 ಟಿ20 ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ. ಟೀಮ್ ಇಂಡಿಯಾ ಎಂದಿನ ನಾಯಕ ವಿರಾಟ್ ಕೊಹ್ಲಿ ತಂಡ ಮುನ್ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications