ಕೇದಾರ್ ಮುಖಕ್ಕೆ ಕೇಕ್ ಹಚ್ಚಿ ಬರ್ತ್ ಡೇ ಆಚರಿಸಿದ ಸಿಎಸ್‌ಕೆ: ವಿಡಿಯೋ

ಚೆನ್ನೈ, ಮಾರ್ಚ್ 28: ಐಪಿಎಲ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರೀ ಹುಮ್ಮಸ್ಸಿನಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ, ಅನಂತರ ಡೆಲ್ಲಿ ಕ್ಯಾಪಿಟಲ್ಸ್ ಎದುರು ಜಯ ಸಾಧಿಸಿದ ಖುಷಿ ತಂಡವನ್ನಾವರಿಸಿದೆ. ಈ ಖುಷಿ ಚೆನ್ನೈ ಆಟಗಾರ ಕೇದಾರ್ ಜಾಧವ್ ಅವರ ಹುಟ್ಟುಹಬ್ಬ ಆಚರಿಸುವಾಗಲೂ ಒಮ್ಮೆ ಇಣುಕಿ ಹೋಯಿತು.
ಕ್ರೀಡಾಪಟುಗಳು ಹೆಚ್ಚಿನವರು ತರ್ಲೆ-ತಮಾಷೆಯ ನಡತೆ ಹೊಂದಿರುವವರೆ. ಮುಖ ಗಂಟಿಕ್ಕಿ ಕೂರೋ, ಡಿಗ್ನಿಟಿ ಮೇಂಟೇನ್ ಮಾಡೋ ಕ್ರೀಡಾಪಟುಗಳು ಕಾಣಿಸೋದು ಕಡಿಮೆ. ಕೇದಾರ್ ಜಾಧವ್ ಹುಟ್ಟುಹಬ್ಬ ಆಚರಣೆಯ ವೇಳೆ ಚೆನ್ನೈ ನಾಯಕ ಎಂಎಸ್ ಧೋನಿ, ಸುರೇಶ್ ರೈನಾ ಸೇರಿ ಇಡೀ ತಂಡವೇ ತರ್ಲೆ-ತಮಾಷೆಗಳಲ್ಲಿ ಭಾಗಿಯಾಗಿದ್ದು ಕಂಡುಬಂತು.
ಸಿಎಸ್‌ಕೆ ಆಲ್ ರೌಂಡರ್, 34ರ ಹರೆಯದ ಜಾಧವ್ ಜನಿಸಿದ್ದು 26 ಮಾರ್ಚ್ 1985ರಲ್ಲಿ ಪುಣೆಯಲ್ಲಿ. ಜಾಧವ್ ಬರ್ತ್ ಡೇ ಆಚರಿಸಿರುವ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 27ರಂದು ಟ್ವಿಟರ್ ನಲ್ಲಿ ಹಾಕಿಕೊಂಡಿದೆ. ಕೇದಾರ್ ಮೈಗೆ ಕೇಕ್ ಮೆತ್ತಿ ಚೆನ್ನೈ ಆಟಗಾರರು ಸಂಭ್ರಮಿಸುತ್ತಿರುವ ಈ ವಿಡಿಯೋ ಟ್ವಿಟರ್ ನಲ್ಲಿ ಈಗಲೂ ಓಡಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications