Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೋರ್ಬ್ಸ್ ಶ್ರೀಮಂತರ ಪಟ್ಟಿ: ಟಾಪ್ 5ಕ್ಕೇರಿದ ಧೋನಿ

ನವದೆಹಲಿ, ಅ.9: ವಿಶ್ವ ಕ್ರೀಡಾ ಲೋಕದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದರ್ ಸಿಂಗ್ ಧೋನಿ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಫೋರ್ಬ್ಸ್ ಪಟ್ಟಿಗೆ ಎಂಟ್ರಿ ಕೊಟ್ಟಾಗ 31ನೇ ಸ್ಥಾನದಲ್ಲಿದ್ದ ಧೋನಿ ಕಳೆದ ವರ್ಷ 16 ಸ್ಥಾನಕ್ಕೇರಿದ್ದರು ಈಗ ಟಾಪ್ 5 ಸೇರಿ ಮೀಸೆ ತಿರುವಿದ್ದಾರೆ.

ವಿಶ್ವದ ಅತ್ಯಂತ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ಪತ್ರಿಕೆಯಾದ ಫೋರ್ಬ್ಸ್ ನಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಹೊರ ಹಾಕಿರುವ 2014ರ ಪಟ್ಟಿಯಲ್ಲಿ ಬ್ಯಾಸ್ಕೆಟ್‍ನಾಲ್ ಆಟಗಾರ ಲೆಬ್ರಾನ್ ಜೇಮ್ಸ್, ಗಾಲ್ಫ್ ಆಟಗಾರ ಟೈಗರ್ ವುಡ್ಸ್, ಟೆನ್ನಿಸ್ ಆಟಗಾರರಾದ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ಆಟಗಾರರಾಗಿದ್ದಾರೆ. ಧೋನಿ ಒಟ್ಟು 20 ಮಿಲಿಯನ್ ಡಾಲರ್ ಸಂಪಾದನೆ ಮಾಡಿಕೊಂಡಿದ್ದು ಕಳೆದ ವರ್ಷಕ್ಕಿಂತ ಒಂದು ಮಿಲಿಯನ್ ಡಾಲರ್ ಕಡಿಮೆ ಆದಾಯ ಗಳಿಕೆ ಹೊಂದಿದ್ದರೂ ಪಟ್ಟಿಯಲ್ಲಿ ಮೇಲಕ್ಕೇರಿರುವುದು ವಿಶೇಷ.

ಧೋನಿ ಪ್ರತಿಷ್ಠಿತ ಕ್ರೀಡಾ ಕಂಪನಿಯಾದ ಸ್ಫಾರ್ಥನ್ ಅಮೇಥಿ ವಿಶ್ವವಿದ್ಯಾನಿಲಯದಿಂದ ವಾರ್ಷಿಕವಾಗಿ 4 ಮಿಲಿಯನ್ ಪಡೆದರೆ, ರಿಬೋಕ್ ಶೂ ಕಂಪನಿಯಿಂದ ಒಂದು ಮಿಲಿಯನ್ ಪಡೆಯುತ್ತಿದ್ದಾರೆ.

Dhoni ranked 5th in Forbes list with $20 million brand value

ಅಮೆರಿಕದ ಬ್ಯಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 37 ಮಿಲಿಯನ್ ಡಾಲರ್ ಸಂಪಾದಿಸಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಅಥ್ಲೀಟ್ ಎನಿಸಿದ್ದಾರೆ. ಮ್ಯಾಕ್‍ಡೊನಾಲ್ಡ್, ನೈಕ್, ಕೋಕ-ಕೊಲಾ, ಅಪ್ಪರ್ ಡೆಕ್ ಕಂಪನಿಗಳು ಸೇರಿದಂತೆ ಮತ್ತಿತರ ಕಂಪನಿಗಳ ರಾಯಭಾರಿಗಳಿಗೆ ನೀಡುತ್ತಿರುವ ಸಂಭಾವನೆ ಈ ಬಾರಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಪ್ರಸ್ತುತ ಅವರ ಸಂಭಾವನೆ 53 ಮಿಲಿಯನ್ ಇದ್ದರೆ, ಟೈಗರ್ ವುಡ್ಸ್ ಸಂಭಾವನೆ 36 ಮಿಲಿಯನ್ ಗೆ ಇಳಿಕೆಯಾಗಿದೆ. ಮೂರನೇ ಸಿರಿವಂತ ಆಟಗಾರರ ಟೆನ್ನಿಸ್ ಆಟಗಾರ ರೋಜರ್ ಫೆಡರರ್ 32 ಮಿಲಿಯನ್ ಹೊಂದಿದ್ದರೆ, ಜಮೈಕಾದ ಹೆಸರಾಂತ ಅಥ್ಲೆಟಿಕ್ ಆಟಗಾರ ಉಸೇನ್ ಬೋಲ್ಟ್ 6ನೇ ಸಿರಿವಂತ ಆಟಗಾರನಾಗಿದ್ದಾನೆ.

ಪೋರ್ಚುಗಲ್ ನ ಫುಟ್ಬಾಲ್ ತಾರೆ ಕ್ರಿಶ್ಚಿಯನೋ ರೊನಾಲ್ಡೋ 7ನೇ ಸ್ಥಾನದಲ್ಲಿದ್ದರೆ, ಅರ್ಜಂಟೀನಾ ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ 9 ಹಾಗೂ ರಫೇಲ್ ನಡಾಲ್ 10ನೇ ಸ್ಥಾನದಲ್ಲಿದ್ದಾರೆ.

ಅತ್ಯಂತ ಶ್ರೀಮಂತ ಬ್ರ್ಯಾಂಡ್ ಗಳಲ್ಲಿ ನೈಕ್ 19 ಬಿಲಿಯನ್ ಡಾಲರ್ ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬ್ಯಾಸ್ಕೆಟ್ ಬಾಲ್ನ ವೃತ್ತಿಪರ ತಂಡ ನ್ಯೂಯಾರ್ಕ್ ಯಾಂಕೀಸ್ ತಂಡ 521 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ ಟಾಪ್ ಗಳಿಕೆ ತಂಡ ಎನಿಸಿದೆ. (ಪಿಟಿಐ)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+