CSK vs KKR IPL 2025: ತವರಿನಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳುವ ವಿಶ್ವಾಸದಲ್ಲಿ ಧೋನಿ ಪಡೆ: ಮೂರನೇ ಗೆಲುವಿನ ಹುಡುಕಾಟದಲ್ಲಿ KKR
ಶುಕ್ರವಾರ ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ. ಹಾಲಿ ಹಾಗೂ ಮಾಜಿ ಚಾಂಪಿಯನ್ನರ್ ಕಾದಾಟ ರೋಚಕತೆ ಹೆಚ್ಚಿಸಿದೆ. ಗಾಯಕ್ಕೆ ತುತ್ತಾಗಿರುವ ರುತುರಾಜ್ ಗಾಯಕ್ವಾಡ್ ಪ್ರಸಕ್ತ ಟೂರ್ನಿಯಿಂದ ಹೊರ ನಡೆದಿದ್ದು, ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಪರವೇ ಆಡಿದ್ದ ಅಜಿಂಕ್ಯ ರಹಾನೆ ಈಗ ಕೆಕೆಆರ್ ನಾಯಕ ಹೀಗಾಗಿ ಉಭಯ ತಂಡಗಳ ನಡುವಣ ಫೈಟ್ ರೋಚಕತೆ ಹುಟ್ಟಿಸಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿವೆ. ಈ ಮೊದಲು ಉಭಯ ತಂಡಗಳು 30 ಬಾರಿ ಐಪಿಎಲ್‌ನಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವು 19 ಪಂದ್ಯಗಳನ್ನು ಗೆದ್ದಿದೆ, ಆದರೆ ಕೆಕೆಆರ್ ಕೇವಲ 10 ಪಂದ್ಯಗಳನ್ನು ಗೆದ್ದಿದೆ. ಇನ್ನು ಪ್ರಸಕ್ತ ವರ್ಷದ ಫಾರ್ಮ್‌ನ್ನು ನೋಡಿದರೆ ಕೆಕೆಆರ್ ಉತ್ತಮವಾಗಿದೆ. ಕೆಕೆಆರ್ ಆಡಿದ 5 ಪಂದ್ಯಗಳಲ್ಲಿ 2 ಜಯ ದಾಖಲಿಸಿದರೆ, ಚೆನ್ನೈ ಆಡಿದ 5 ಪಂದ್ಯಗಳಲ್ಲಿ ಒಂದು ಜಯ ದಾಖಲಿಸಿದೆ.

ಹೇಗಿದೆ ಪಿಚ್?
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಸ್ಪಿನ್ ಬೌಲರ್‌ಗಳಿಗೆ ನೆರವಾಗಲಿದೆ. ಈ ಮೈದಾನದಲ್ಲಿ ಚೇಸ್ ಕೊಂಚ ಕಷ್ಟವಾಗಿರಲಿದೆ. ಹೀಗಾಗಿ ಟಾಸ್ ಸಹ ಮಹತ್ವ ಪಡೆದಿದೆ. ಈ ಮೈದಾನದಲ್ಲಿ ಈ ವರೆಗೆ ಮೂರು ಪಂದ್ಯಗಳನ್ನು ಆಡಲಾಗಿದ್ದು, ಒಮ್ಮೆಯೂ 200 ರನ್ ದಾಖಲಾಗಿಲ್ಲ. ಈ ಮೈದಾನದಲ್ಲಿ 88 ಐಪಿಎಲ್ ಪಂದ್ಯ ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 51, ಚೇಸ್ ಮಾಡಿದ ತಂಡ 37 ಪಂದ್ಯಗಳನ್ನು ಗೆದ್ದಿದೆ.
ಧೋನಿ ನಾಯಕ
ರುತುರಾಜ್ ಗಾಯಕ್ವಾಡ್ ಗಾಯಕ್ಕೆ ತುತ್ತಾಗಿದ್ದರಿಂದ ಸಿಎಸ್‌ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸುತ್ತಿದ್ದಾರೆ. ಈ ವೇಳೆ ಇವರು ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಅಗತ್ಯ ಇದೆ. ಇನ್ನು ಬ್ಯಾಟರ್‌ಗಳು ಈ ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ಸ್ಟಾರ್ ಆಟಗಾರರು ತಂಡದ ಗೆಲುವಿನಲ್ಲಿ ಅಗತ್ಯ ಕಾಣಿಕೆ ನೀಡದೆ ಇರುವುದು ತಂಡಕ್ಕೆ ಪೆಟ್ಟು ನೀಡಿದೆ. ಆಲ್‌ರೌಂಡರ್‌ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಅನಿವಾರ್ಯತೆ ಇದೆ.
ಚೆನ್ನೈ ತಂಡದಲ್ಲಿರುವ ನುರಿತ ಬೌಲರ್‌ಗಳು ತಂಡಕ್ಕೆ ನೆರವಾಗುತ್ತಿದ್ದಾರೆ. ಖಲೀಲ್ ಅಹ್ಮದ್ ಹಾಗೂ ನೂರ್ ಅಹ್ಮದ್ ವಿಕೆಟ್ ಬೇಟೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಮತಿಶ್ ಪತಿರಾಣಾ, ಮುಕೇಶ್ ಚೌಧರಿ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡಬೇಕಿದೆ.

ರಹಾನೆ ಆಕರ್ಷಣೆ
ಅಜಿಂಕ್ಯ ರಹಾನೆ ಪ್ರಸಕ್ತ ಲೀಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಲ್ಲದೆ ಇವರಿಗೆ ಚೆನ್ನೈ ಪಿಚ್ ಬಗ್ಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಇವರ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಕ್ವಿಂಟನ್ ಡಿಕಾಕ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಹಾಗೂ ಯುವ ಆಟಗಾರರು ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕಿದೆ. ಇನ್ನು ಸುನಿಲ್ ನರೈನ್ ಹಾಗೂ ಆಂಡ್ರಿ ರಸೆಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬೇಕಿದೆ. ಇನ್ನು ಹರ್ಷಿತ್ ರಾಣಾ, ವೈಭವ್ ಆರೋರ್ ವೇಗದ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ. ಇನ್ನು ಮಿಸ್ಟ್ರಿ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ತಮ್ಮ ಪಿರ್ಕಿ ಕಮಾಲ್ ಮಾಡಬೇಕಿದೆ.
ಯಾರಿಗೆ ನಾಯಕ ಪಟ್ಟ?
ಡ್ರೀಮ್ ಟೀಮ್‌ನಲ್ಲಿ ವಿಕೆಟ್ ಕೀಪರ್ ಆಗಿ ಕ್ವಿಂಟನ್ ಡಿಕಾಕ್ ಉತ್ತಮ ಆಯ್ಕೆ. ಬ್ಯಾಟರ್‌ಗಳಲ್ಲಿ ಅಂಗ್‌ಕ್ರಿಶ್ ರಘುವಂಶಿ, ಅಜಿಂಕ್ಯ ರಹಾನೆ, ಡೇವೊನ್ ಕಾನ್ವೆ, ವಿಜಯ್ ಶಂಕರ್ ಅವರನ್ನು ಇರಿಸಿಕೊಂಡರೆ ಉತ್ತಮ. ಆಲ್‌ರೌಂಡರ್ ರೂಪದಲ್ಲಿ ಆಂಡ್ರಿ ರಸೆಲ್, ಸುನಿಲ್ ನರೈನ್, ರಚಿನ್ ರವೀಂದ್ರ, ರವೀಂದ್ರ ಜಡೆಜಾ ಒಳ್ಳೆಯ ಆಯ್ಕೆ ಆಗಬಹುದು. ಬೌಲರ್‌ಗಳಲ್ಲಿ ವರುಣ್ ಚಕ್ರವರ್ತಿ, ಖಲೀಲ್ ಅಹ್ಮದ್, ನೂರ್ ಅಹ್ನದ್ ಅವರನ್ನು ಇಟ್ಟುಕೊಂಡರೆ ಬೆಸ್ಟ್. ಅಜಿಂಕ್ಯ ರಹಾನೆ ನಾಯಕ, ಸುನಿಲ್ ನರೈನ್ ಇಬ್ಬರಲ್ಲಿ ಒಬ್ಬರಿಗೆ ನಾಯಕ ಪಟ್ಟ ಕಟ್ಟಿದರೆ ಸೂಕ್ತ. ಉಪನಾಯಕನ ಸ್ಥಾನ ರಚಿನ್ ರವೀಂದ್ರ ಸೂಕ್ತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications