Asia Cup 2023: ಸೂಪರ್ 4 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಬಾಬರ್ ಅಜಂ!
ಬುಧವಾರ, ಸೆಪ್ಟೆಂಬರ್ 6ರಂದು ಲಾಹೋರ್ ಗಡಾಫಿ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ತೇಲಾಡುತ್ತಿದೆ.
ಪಾಕಿಸ್ತಾನ ತಂಡ ತನ್ನ ಮುಂದಿನ ಸೂಪರ್ 4 ಪಂದ್ಯವನ್ನು ಭಾರತ ತಂಡದ ವಿರುದ್ಧ ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ಸೆಣಸಾಡಲಿದೆ. ಈ ವೇಳೆ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿವೆ.

ಪಲ್ಲೆಕೆಲೆಯಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತು. ಭಾರತ ತಂಡ ಮಾತ್ರ ಮೊದಲ ಇನ್ನಿಂಗ್ಸ್ ಆಡಿ 266 ರನ್‌ಗಳನ್ನು ಕಲೆಹಾಕಿತ್ತು. ಆದರೆ, ಪಾಕಿಸ್ತಾನ ತಂಡ ಎರಡನೇ ಇನ್ನಿಂಗ್ಸ್ ಆಡಲು ಮಳೆ ಅವಕಾಶ ನೀಡಲಿಲ್ಲ.
ಇನ್ನು ಸೂಪರ್ 4 ಮೊದಲ ಪಂದ್ಯವನ್ನು ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಪಾಕಿಸ್ತಾನ ತಂಡದ ನಾಯಕ ಮುಂದಿನ ಭಾರತ ವಿರುದ್ಧ ಪಂದ್ಯದ ಕುರಿತು ಮಾತನಾಡಿದ್ದಾರೆ. ದೊಡ್ಡ ಗೆಲುವು ಯಾವಾಗಲೂ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಭಾರತ ವಿರುದ್ಧದ 2023ರ ಏಷ್ಯಾ ಕಪ್ ಸೂಪರ್ 4 ಪಂದ್ಯಕ್ಕೂ ಮುನ್ನ ತಾವು ಒತ್ತಡದಲ್ಲಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿದ್ದಾರೆ.
"ನಿಜವಾಗಿಯೂ ನಾವು ಒತ್ತಡದಲ್ಲಿ ಇಲ್ಲ. ಈ ಗೆಲುವು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ನಾವು ಯಾವಾಗಲೂ ದೊಡ್ಡ ಪಂದ್ಯಕ್ಕೆ ಸಿದ್ಧರಿದ್ದೇವೆ. ಭಾರತ ವಿರುದ್ಧದ ಮುಂದಿನ ಪಂದ್ಯದಲ್ಲಿ ನಾವು ನಮ್ಮ 100 ಪ್ರತಿಶತವನ್ನು ನೀಡುತ್ತೇವೆ," ಎಂದು ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡದ ಗೆಲುವಿನ ನಂತರ ಬಾಬರ್ ಅಜಂ ತಿಳಿಸಿದರು.

ಭಾರತ ವಿರುದ್ಧ ಇಬ್ಬರು ಸ್ಪಿನ್ನರ್‌ಗಳು ವಿಫಲರಾದ ಕಾರಣ, ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಫಾಹೀಮ್ ಅಶ್ರಫ್ ರೂಪದಲ್ಲಿ ಹೆಚ್ಚುವರಿ ವೇಗಿಯನ್ನು ಆಡಿಸಿತು. ಏಕೆಂದರೆ, ಭಾರತ ವಿರುದ್ಧ ಮೂವರು ವೇಗಿಗಳು ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದಿದ್ದರು.
ಇದೇ ವೇಳೆ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡದ ಗೆಲುವಿನಲ್ಲಿ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಪ್ರಮುಖ ಪಾತ್ರ ವಹಿಸಿತು.
"ಹೌದು. ನಮ್ಮ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ವಿಶೇಷವಾಗಿ ವೇಗದ ಬೌಲರ್‌ಗಳು. ಮೊದಲ 10 ಓವರ್‌ಗಳಲ್ಲಿ ಬೌಲ್ ಮಾಡಿದ ರೀತಿ ಮತ್ತು ಅದರಲ್ಲೂ ಹ್ಯಾರಿಸ್ ರೌಫ್ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದರು," ಎಂದು ಬಾಬರ್ ಅಜಂ ಹೇಳಿದರು.
"ಫಾಹೀಮ್ ಅಶ್ರಫ್ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದರು, ನಾನು ಲಾಹೋರ್ ಪಿಚ್‌ನಲ್ಲಿ ಹುಲ್ಲು ನೋಡಿದೆ ಮತ್ತು ಹೆಚ್ಚುವರಿ ವೇಗಿಯೊಂದಿಗೆ ಆಡಲು ಯೋಚಿಸಿದೆ," ಎಂದು ಬಾಬರ್ ಅಜಂ ತಿಳಿಸಿದರು.
ಲಾಹೋರ್ ಮೈದಾನದಲ್ಲಿ ಹ್ಯಾರಿಸ್ ರೌಫ್ ನಾಲ್ಕು ವಿಕೆಟ್‌ಗಳ ಪ್ರಭಾವಿ ಪ್ರದರ್ಶನದೊಂದಿಗೆ ವೇಗದ ದಾಳಿಯನ್ನು ಮುನ್ನಡೆಸಿದರು ಮತ್ತು ಬಾಂಗ್ಲಾದೇಶದ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು. ಇನ್ನು ನಸೀಮ್ ಶಾ ಮೂರು ವಿಕೆಟ್‌ಗಳನ್ನು ಕಬಳಿಸುವ ಸಾಥ್ ನೀಡಿದರು.
ಅಂತಿಮವಾಗಿ, ಬಾಂಗ್ಲಾದೇಶ ತಂಡವನ್ನು 193 ರನ್‌ಗಳಿಗೆ ಆಲೌಟ್ ಮಾಡಿತು. ಆರಂಭದಲ್ಲೇ ಪಾಕಿಸ್ತಾನ ವೇಗಿ ಶಾಹೀನ್ ಶಾ ಆಫ್ರಿದಿ ಎಂದಿನಂತೆ ಹೊಸ ಚೆಂಡಿನ ಮೂಲಕ ಬೆದರಿಕೆ ಒಡ್ಡಿದರು.
ಇನ್ನು 194 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಪರ ಇಮಾಮ್-ಉಲ್-ಹಕ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅಮೂಲ್ಯ ಅರ್ಧಶತಕದ ಸಹಾಯದಿಂದ ಇನ್ನೂ 11.3 ಓವರ್‌ಗಳು ಮತ್ತು 7 ಬಾಕಿ ಉಳಿದಿರುವಂತೆಯೇ ಗೆಲುವು ಸಾಧಿಸಿತು.
ಇಮಾಮ್-ಉಲ್-ಹಕ್ ಅದ್ಭುತ 78 ರನ್ ಗಳಿಸಿ ಔಟಾದರೆ, ಮೊಹಮ್ಮದ್ ರಿಜ್ವಾನ್ 63 ರನ್ ಗಳಿಸಿ ಅಜೇಯರಾಗಿ ಉಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications