ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಗೆ ಗ್ರಾಸವಾದ ವಿಷಯಗಳಲ್ಲಿ ಒಂದು ಆರ್‌ಸಿಬಿ ತಂಡ ಮಾರಾಟ್ಟಕಿದೆ ಎಂಬ ಸುದ್ದಿ ಬಹುವಾಗಿ ಹರಡಿತ್ತು. ಇನ್ನು ಕೆಲ ದಿನಗಳ ಹಿಂದೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ತೊರೆಯುತ್ತಾರೆ ಎಂಬ ಮಾತುಗಳ ಸಹ ಕೇಳಿ ಬಂದಿದ್ದವು. ಆಗ ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಕಾದಿತ್ತು. ಆದರೆ ಈ ಎಲ್ಲದರ ಬಗ್ಗೆ ಈ ಹಿಂದೆಯೇ ಮಾಸ್ಟರ್ ಪ್ಲ್ಯಾನ್‌ನ್ನು ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾಡಿದೆ.
ಟೀಮ್ ಇಂಡಿಯಾದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದರೆ. ಇವರು ಸದ್ಯ ಜಾಹೀರಾತುಗಳ ಪಾಲಿನ ಹಾಟ್ ಕೇಕ್.. ಇವರನ್ನು ಹಲವು ತಂಡಗಳು ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿವೆ. ಆದರೆ ಈ ಸ್ಟಾರ್ ಪ್ಲೇಯರ್ ಮೇಲೆ ಆರ್‌ಸಿಬಿ ಒಂದು ಕಣ್ಣು ಇಟ್ಟಿದೆ. ಸದ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿರುವ ಶುಭಮನ್ ಗಿಲ್, ಆರ್‌ಸಿಬಿ ಕ್ಯಾಂಪ್ ಸೇರುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.

ಒಂದು ವರದಿಯ ಪ್ರಕಾರ ಆರ್‌ಸಿಬಿ ಮ್ಯಾನೇಜ್ಮೆಂಟ್ ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಸರಿದೂಗಿಸುವ ಆಟಗಾರನ ಹುಡುಕಾಟವನ್ನು ಈ ಹಿಂದೆ ನಡೆಸಿತ್ತು. ಆಗ ಆರ್‌ಸಿಬಿ ಈ ಹಿಂದೆ ಶುಭಮನ್ ಗಿಲ್ ಅವರನ್ನು ಗುರಿಯಾಗಿಸಿತ್ತು ಎಂದು ತಿಳಿದು ಬಂದಿದೆ. 2024ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಗುಜರಾಟ್ ಟೈಟಾನ್ಸ್ ಅನುಭವಿ ಸ್ಪಿನ್ ಬೌಲರ್ ರಶೀದ್ ಖಾನ್ ಹಾಗೂ ಶುಭಮನ್ ಗಿಲ್ ಇಬ್ಬರಲ್ಲಿ ಯಾರಿಗೆ ನಾಯಕತ್ವ ನೀಡಬೇಕು ಎಂಬ ಗೊಂದಲದಲ್ಲಿತ್ತು.
ಗುಜರಾತ್ ಟೈಟಾನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ ನಾಯಕ ಹಾರ್ದಿಕ್ ಪಾಂಡ್ಯ 2024ರ ಐಪಿಎಲ್ ಆವೃತ್ತಿಯ ಮುಂಬೈ ತಂಡಕ್ಕೆ ಟ್ರೇಡ್ ಆದರು. ಆಗ ಟೈಟಾನ್ಸ್ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ರಾಶೀದ್ ಖಾನ್ ಅವರ ಅನುಭವಕ್ಕೆ ಫ್ರಾಂಚೈಸಿ ಆದ್ಯತೆ ನೀಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆಗ ಗಿಲ್ ಭವಿಷ್ಯ ಅನಿಶ್ಚಿತವಾಗಿತ್ತು. ಇದೇ ವೇಳೆಗೆ ಆರ್‌ಸಿಬಿ ಹೊಸ ನಾಯಕನ ಹುಡುಕಾಟದಲ್ಲಿತ್ತು. ಇನ್ನು ಐಪಿಎಲ್‌ಗೆ ವಿರಾಟ್ ಗುಡ್‌ಬಾಯ್ ಹೇಳಿದ ಬಳಿಕ ಫ್ರಾಂಚೈಸಿ ಮುಂದಿನ ಸ್ಟಾರ್ ಆಟಗಾರನ ಹುಡುಕಾಟ ತೀವ್ರವಾಗಿ ನಡೆಸಿತ್ತು. ಶುಭಮನ್ ಗಿಲ್‌ಗೆ ಗಾಳ ಹಾಕಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳು ಮಾಸ್ಟರ್ ಪ್ಲ್ಯಾನ್ ಆರ್‌ಸಿಬಿ ತಂಡದ್ದಾಗಿತ್ತು.
ಗುಜರಾತ್ ಶುಭಮನ್ ಗಿಲ್ ಅವರಿಗೆ ನಾಯಕತ್ವ ನೀಡಿದ ಮೇಲೆ ಆರ್‌ಸಿಬಿ ಪ್ಲ್ಯಾನ್ ಎಲ್ಲ ಫ್ಲಾಪ್ ಆಯಿತು. ಒಂದು ವೇಳೆ ಗುಜರಾತ್ ಆಟಗಾರ ರಶೀದ್ ಖಾನ್‌ಗೆ ನಾಯಕತ್ವ ನೀಡಿದ್ದರೆ, ಬೆಂಗಳೂರು ತಾನು ಹೆಣೆದು ಕೊಂಡಿದ್ದ ಬಲೆಯನ್ನು ಗುಜರಾತ್ ವರೆಗೂ ಬೀಸಲು ತಯಾರಿ ನಡೆಸಿತ್ತು. ಆದರೆ ಈ ಯೋಜನೆ ಕೈ ಕೊಟ್ಟಿತ್ತು.