Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Unsung Hero: ಸೋಲಿನಲ್ಲೂ ಮಿಂಚಿದ ಲಕ್ನೋ ಸ್ಪಿನ್ ಬೌಲರ್‌

ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿ ಆವೃತ್ತಿಯಲ್ಲೂ ಸ್ಟಾರ್‌ಗಳನ್ನು ಹುಟ್ಟು ಹಾಕುತ್ತದೆ. ಈ ಬಾರಿಯೂ ಹಲವು ಸ್ಟಾರ್ ಆಟಗಾರರನ್ನು ಹುಟ್ಟು ಹಾಕಿದೆ. ಈ ಆಟಗಾರರಲ್ಲಿ ಮುಂಚೂಣಿಯಲ್ಲಿ ಕಾಣುವ ಆಟಗಾರ ಲಕ್ನೋ ಸೂಪರ್ ಜೈಂಟ್ಸ್ ತಂಡದ ದಿಗ್ವೇಶ್ ರಾಠಿ. ತನ್ನ ಲೆಗ್ ಸ್ಪಿನ್ ಮೂಲಕ ಎದುರಾಳಿಗಳನ್ನು ಕಾಡುವ ಈ ಯುವ ಬೌಲರ್‌ ಐಪಿಎಲ್‌ನಲ್ಲಿ ತನ್ನ ಸೆಲೆಬ್ರೇಷನ್‌ನಿಂದಲೇ ಸುದ್ದಿಯಲ್ಲಿದ್ದಾರೆ. ಇವರು ವಿಕೆಟ್‌ ಪಡೆದ ಬಳಿಕ ಮಾಡುವ ನೋಟ್ ಬುಕ್ ಸಂಭ್ರಮಾಚರಣೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

25 ವರ್ಷದ ದೆಹಲಿಯ ದಿಗ್ವೇಶ್ ರಾಠಿ ಪ್ರಸಕ್ತ ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳಿಗೆ ಕಾಡುವ ದಿಗ್ವೇಶ್ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಎಲ್ಲರ ಗಮನ ಸೆಳೆದರು. ಈ ಪಂದ್ಯದಲ್ಲಿ ಚೆನ್ನೈ ಪಂದ್ಯವನ್ನು ಗೆದ್ದಿರಬಹುದು, ಆದರೆ ಪಂದ್ಯದ ರೀಯಲ್‌ ಹೀರೋ ರಿತಿ ದಿಗ್ವೇಶ್‌ ಮಿಂಚಿದರು. ಇದಕ್ಕೆ ಇವರು ಮಾಡಿದ ಬಿಗುವಿನ ದಾಳಿ ಕಾರಣ.

Digvesh Rathi Impresses with Tight Spell Despite CSK s Win

ದಿಗ್ವೇಶ್, ಚೆನ್ನೈ ವಿರುದ್ಧ ಕೇವಲ ಒಂದು ವಿಕೆಟ್‌ ಪಡೆಯುವಲ್ಲಿ ಸಫಲರಾಗಿದ್ದಾರೆ. ಆದರೆ ಮಿಡ್ಲ್ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ಇವರು ಸಫಲರಾಗಿದ್ದಾರೆ. ಇವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಓವರ್‌ನ್ನು ಪವರ್‌ ಪ್ಲೇನಲ್ಲಿ ಮಾಡಿದರು. ಇವರು ಮೊದಲ ಐದು ಎಸೆತದಲ್ಲಿ ಕೇವಲ ಎರಡು ರನ್ ನೀಡಿದರೆ, ಕೊನೆಯ ಎಸೆತದಲ್ಲಿ ಶೇಕ್ ರಶೀದ್ ಸಿಕ್ಸರ್ ಬಾರಿಸಿದರು. ಪವರ್‌ ಪ್ಲೇನ ಕೊನೆಯ ಓವರ್‌ನ್ನು ಮಾಡುವ ಹೊಣೆಯನ್ನು ಸಹ ರಿಷಭ್‌ ಇವರಿಗೆ ನೀಡಿದರು. ಇವರು ಈ ವೇಳೆ ಏಳು ರನ್‌ ನೀಡಿ ಗಮನ ಸೆಳೆದರು.

ಬಿಗುವಿನ ದಾಳಿ ನಡೆಸಿದ ಯಂಗ್ ಪ್ಲೇಯರ್‌

ದಿಗ್ವೇಶ್ ಬಳಿಕ ಇನಿಂಗ್ಸ್‌ 11ನೇ ಓವರ್ ಬೌಲ್ ಮಾಡಿದರು. ಈ ವೇಳೆ ಅನುಭವಿ ಬ್ಯಾಟರ್‌ಗಳಾದ ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಾ ಇದ್ದರು. ಈ ಸ್ಟಾರ್ ಆಟಗಾರರಿಗೂ ರನ್‌ ನೀಡದಂತೆ ತಡೆದ ದಿಗ್ವೇಶ್‌, ತಮ್ಮ ಮೂರನೇ ಓವರ್‌ನಲ್ಲಿ ಕೇವಲ 6 ರನ್‌ ನೀಡಿದರು. ತಮ್ಮ ಕೊನೆಯ ಓವರ್‌ನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿದ ಲೆಗ್ ಸ್ಪಿನ್ ಬೌಲರ್‌ ಕೇವಲ 2 ರನ್‌ ನೀಡಿ ಒಂದು ವಿಕೆಟ್‌ ಪಡೆದರು. ಈ ಓವರ್‌ನ ಕೊನೆಯ ಎಸೆತದಲ್ಲಿ ವಿಜಯ್ ಶಂಕರ್‌ ಶಾರ್ಟ್‌ ಥರ್ಡ್ ಮ್ಯಾನ್‌ ಮೇಲೆ ಸಿಕ್ಸರ್ ಬಾರಿಸಲು ಹೋಗಿ ಆವೀಶ್‌ ಖಾನ್‌ ಹಿಡಿದ ಕ್ಯಾಚ್‌ಗೆ ಬಲಿಯಾದರು.

ಐಪಿಎಲ್‌ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಇವರಿಗೆ 30 ಲಕ್ಷ ನೀಡಿ ತಂಡದಲ್ಲಿ ಸೇರಿಸಿಕೊಂಡಿತು. ಇವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ಗಮನ ಸೆಳೆದರು. ಒಟ್ಟಾರೆ ಟೂರ್ನಿಯಲ್ಲಿ ದಿಗ್ವೇಶ್ ರಾಠಿ ಆಡಿದ 7 ಪಂದ್ಯಗಳಲ್ಲಿ 7.42ರ ಎಕನಾಮಿಯಲ್ಲಿ 9 ವಿಕೆಟ್‌ ಪಡೆದಿದ್ದಾರೆ.

Story first published: Tuesday, April 15, 2025, 0:30 [IST]
Other articles published on Apr 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+