Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat kohli: ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ಸಲಹೆ ಕೊಟ್ಟ ಆರ್‌ಸಿಬಿ ಬ್ಯಾಟಿಂಗ್‌ ಕೋಚ್‌

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ ಉತ್ತಮ ನೀಡಲು ಸಾಧ್ಯವಾಗಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಟೀಕಾಕಾರರಿಗೆ ಆಹಾರವಾಗುತ್ತಿದ್ದಾರೆ.

ಈ ವರ್ಷ ಕೊಹ್ಲಿ ಆಡಿರುವ 9 ಇನ್ನಿಂಗ್ಸ್‌ಗಳಲ್ಲಿ 28.50 ಸರಾಸರಿಯಲ್ಲಿ ಕೇವಲ 228 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿದೆ. ಕೊಹ್ಲಿ ಅವರ ಈ ಅಂಕಿ-ಅಂಶಗಳು ಟೀಮ್ ಇಂಡಿಯಾಗೂ ಟೆಕ್ಷನ್ ಹೆಚ್ಚಿಸಿದೆ. ಮುಂದಿನ ತಿಂಗಳು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಬ್ಯಾಟಿಂಗ್ ಆಧಾರ ಸ್ತಂಭವಾಗಿರುವ ಕೊಹ್ಲಿ ಫಾರ್ಮ್‌ ಕಳೆದುಕೊಂಡಿರುವುದು ನಾಯಕ ರೋಹಿತ್ ಶರ್ಮಾ ಮತ್ತು ಹೆಡ್‌ಕೋಚ್ ಗೌತಮ್ ಗಂಭೀರ್ ಅವರಿಗೆ ಚಿಂತೆಗೀಡು ಮಾಡಿದೆ.

Dinesh Karthik advises Virat Kohli to return to form

ದಿನೇಶ್ ಕಾರ್ತಿಕ್ ಸಲಹೆ

ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಸಮಸ್ಯೆಯನ್ನು ಸುಧಾರಿಸುವ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಆಡಬೇಕು. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಸ್ಪಿನ್ ಬೌಲಿಂಗ್ ವಿರುದ್ದ ಅವರು ರನ್ ಗಳಿಸಲು ಹೆಣಗಾಡುತ್ತಿದ್ದಾರೆ ಕಾಣಿಸುತ್ತಿದೆ ಎಂದು ಕಾರ್ತಿಕ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅವರ ಸಾಮರ್ಥ್ಯ ಏನು ಎಂಬುದು ನಮಗೆಲ್ಲರಿಗೂ ತಿಳಿದಿದೆ. ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್ ಸರಣಿ ಅವರಿಗೆ ಉತ್ತಮವಾಗಿಲ್ಲ. ನಾಲ್ಕು ಇನ್ನಿಂಗ್ಸ್‌ಗಳ ಪೈಕಿ ಮೂರಲ್ಲಿ ಅವರು ತಂಡಕ್ಕೆ ನಿರಾಸೆ ಮೂಡಿಸಿದ್ದಾರೆ. ಅಭಿಮಾನಿಗಳು ಹೇಳಿದಂತೆ ಅವರು ಬಹಳ ದಿನಗಳಿಂದ ಉತ್ತಮ ಪ್ರದರ್ಶನ ನೀಡಲಿಲ್ಲ. ಸ್ಪಿನ್ನರ್‌ಗಳು ಕೊಹ್ಲಿಗೆ ಮಾರಕವಾಗಿದ್ದಾರೆ. ಕೊಹ್ಲಿ ಕಳಪೆ ಫಾರ್ಮ್‌ ಅನ್ನು ಶುಗರ್ಕೋಟ್ ಮಾಡಲು ಬಯಸುವುದಿಲ್ಲ. ಹೀಗಾಗಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ಕಮ್‌ಬ್ಯಾಕ್ ಮಾಡಬೇಕೆಂದು ಸಲಹೆ ನೀಡುತ್ತೇನೆ ಎಂದಿದ್ದಾರೆ.‌

ಪುಣೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸು ನಿರೀಕ್ಷೆಯಿತ್ತು. ಆದರೆ ಅವರು ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿದರು. ತಂಡಕ್ಕೆ ಆಸರೆಯಾಗಬೇಕಿದ್ದ ಸಂದರ್ಭದಲ್ಲಿ ಔಟಾ ಕೊಹ್ಲಿ ಭಾರತ 12 ವರ್ಷಗಳ ನಂತರ ತವರಿನಲ್ಲಿ ಸರಣಿ ಕಳೆದುಕೊಳ್ಳಲು ಒಂದು ರೀತಿಯಲ್ಲಿ ಕಾರಣವಾದರು. ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರು ಪುಣೆ ಟೆಸ್ಟ್‌ನ ಎರಡು ಇನ್ನಿಂಗ್ಸ್‌ಗಳಲ್ಲಿ 1 ಮತ್ತು 17 ರನ್‌ಗಳಿಗೆ ಕೊಹ್ಲಿ ಅವರನ್ನು ಔಟ್ ಮಾಡಿದರು.

ಸ್ಪಿನ್ ವಿರುದ್ಧ ಕೊಹ್ಲಿ

ವಿರಾಟ್ ಕೊಹ್ಲಿ 2021 ರಿಂದ 50 ಇನ್ನಿಂಗ್ಸ್‌ಗಳಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ 24 ಬಾರಿ ಔಟಾಗಿದ್ದಾರೆ.
ಸ್ಪಿನ್ ಬೌಲಿಂಗ್ ವಿರುದ್ಧ ಕೊಹ್ಲಿಯ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊಹ್ಲಿ ಕೊನೆಯ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದಾರೆ. ಇದು ಅವರ ಟೆಸ್ಟ್ ವೃತಿಜೀವನದ 29ನೇ ಶತಕವಾಗಿದೆ. ಇದೀಗ ಮುಂದಿನ ತಿಂಗಳು ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Tuesday, October 29, 2024, 13:03 [IST]
Other articles published on Oct 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+