Dinesh Karthik: 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ದಿನೇಶ್ ಕಾರ್ತಿಕ್; ಡಿಕೆ ಜೀವನದ ರೋಚಕ ಕಥೆ
ಜೂನ್ 1 ಶನಿವಾರ, ಐಪಿಎಲ್ 2024ರ ನಂತರ ನಿವೃತ್ತಿಯಾಗುತ್ತಿರುವ ಬ್ಯಾಟರ್ ದಿನೇಶ್ ಕಾರ್ತಿಕ್ ಇಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಚೆನ್ನೈನ ತೆಲುಗು ಕುಟುಂಬದಲ್ಲಿ 1 ಜೂನ್ 1985 ರಂದು ಜನಿಸಿದ ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಡಿಕೆ ಇತ್ತೀಚೆಗೆ ನಡೆದ ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಐಪಿಎಲ್)ತಂಡದ ಭಾಗವಾಗಿದ್ದರು.

ಆರ್‌ಸಿಬಿ ಅನೇಕ ಪಂದ್ಯಗಳಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದ ಡಿಕೆ ಅವರು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಈ ಋತುವಿನ ಬಳಿಕ ಡಿಕೆ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಡಿಕೆ ಹಲವು ದಾಖಲೆಗಳನ್ನು ಬರೆದಿದ್ದಾರೆ. ಜೊತೆಗೆ ಐಸಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಕಾರ್ತಿಕ್ ಉದ್ಘಾಟನ ಆವೃತ್ತಿಯ 2007ರ ಟಿ20 ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇದಲ್ಲದೇ 2010 ಮತ್ತು 2018ರ ಏಷ್ಯಾಕಪ್ ಗೆಲ್ಲುವಲ್ಲಿ ಕಾರ್ತಿಕ್ ಟೀಮ್ ಇಂಡಿಯಾ ಪರ ಪ್ರಮುಖ ಪಾತ್ರವಹಿಸಿದ್ದರು.

ಟೀಮ್ ಇಂಡಿಯಾ ಪರ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ತಿಕ್ ಕಣಕ್ಕೀಳಿದಿದ್ದಾರೆ. ಮೂರು ಮಾದರಿ ಕ್ರಿಕೆಟ್‌ನಿಂದ ಒಟ್ಟು 3463 ರನ್ ಗಳನ್ನು ಕಲೆ ಹಾಕಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಟೆಸ್ಟ್ ನಲ್ಲಿ ಕೇವಲ ಒಂದು ಶತಕವನ್ನು ಗಳಿಸಿದ್ದಾರೆ.
ಇದರ ಹೊರತಾಗಿ, ಅವರ ಹೆಸರು ಟೆಸ್ಟ್‌ನಲ್ಲಿ 7 ಅರ್ಧಶತಕಗಳು, ಏಕದಿನದಲ್ಲಿ 9 ಮತ್ತು ಟಿ20ಯಲ್ಲಿ 1 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ಒಂದು ಓವರ್ ಮಾಡಿರುವ ಕಾರ್ತಿಕ್ 6 ಎಸೆತಗಳಲ್ಲಿ 18 ರನ್ ನೀಡಿದ್ದಾರೆ.
ಗೆಳಯ, ಪತ್ನಿಯಿಂದ ಮೋಸ ಹೋದ ಡಿಕೆ
ದಿನೇಶ್ ಕಾರ್ತಿಕ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾರೆ ಕಾರ್ತಿಕ್ ತನ್ನ ಕುಟುಂಬ ಜೀವನದಲ್ಲಿ ಆತ್ಮೀಯ ಗೆಳಯ ಮತ್ತು ತಾಳಿ ಕಟ್ಟಿದ ಹೆಂಡತಿಯಿಂದ ಮೋಸ ಹೊಗಿದ್ದಾರೆ.
ಜೊತೆಗೆ ಆಡಿ ಬೆಳೆದಿದ್ದ ಹುಡುಗಿ ಜೊತೆಗೆ ಕಾರ್ತಿಕ್ ಸಪ್ತಪದಿ ತುಳಿದಿದ್ದರು. ಆರಂಭದಲ್ಲಿ ಸಂಸಾರದಲ್ಲಿ ಎಲ್ಲ ಅನ್ಯೋನ್ಯವಾಗಿತ್ತು. ಆದರೆ ಕಾರ್ತಿಕ್ ತಾಳಿ ಕಟ್ಟಿ ಮದುವೆ ಆಗಿದ್ದ ಪತ್ನಿ ನಿಕಿತಾ ಜೊತೆ ಸ್ನೇಹಿತ, ಟೀಮ್ ಇಂಡಿಯಾ ಮಾಜಿ ಆಟಗಾರ ಮುರಳಿ ವಿಜಯ್ ಅವರ ವಿವಾಹೇತರ ಸಂಬಂಧದ ಬಗ್ಗೆ ಗೊತ್ತಾಯಿತು.
ಬಳಿಕ ಪತ್ನಿ ನಿಕಿತಾಗೆ ಕಾರ್ತಿಕ್ ವಿಚ್ಛೇದನ ನೀಡಿದ್ದರು. ಈ ವೇಳೆ ನಿಕಿತಾ ಅವಳು ಗರ್ಭಿಣಿಯಾಗಿದ್ದಳು. ಮಗುವಿನ ಜನನದ ನಂತರ ನಿಕಿತಾ ಮುರಳಿ ವಿಜಯ್ ಅವರನ್ನು ವಿವಾಹವಾದರು. ಈ ಬಗ್ಗೆ ಅಭಿಮಾನಿ ಈಗಲೂ ಸಾಕಷ್ಟು ಬಾರಿ ಮುರಳಿ ವಿಜಯ್ ಹಾಗು ನಿಕಿತಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿರಿಕಾಡುತ್ತಿರುತ್ತಾರೆ.
ಸ್ಕ್ವಾಷ್ ಆಟಗಾರ್ತಿ ಜೊತೆಗೆ ಎರಡನೇ ಮದುವೆ
ಮೊದಲ ಹೆಂಡತಿ ನಿಕಿತಾಳಿಗೆ ದಿನೇಶ್ ಕಾರ್ತಿಕ್ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಬಳಿಕ ಫಾರ್ಮ್ಗೆ ಮರಳಿ ಕಾರ್ತಿಕ್ ಭಾರತ ತಂಡಕ್ಕೆ ಮರಳಿ ಬಂದು ಮಿಂಚಿದ್ದರು. ಈ ವೇಳೆ ಕಾರ್ತಿಕ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾದರು.
ಪ್ರಸ್ತುತ, ಐಪಿಎಲ್‌ನಿಂದ ನಿವೃತ್ತಿ ಘೋಷಿಸಿರುವ ಕಾರ್ತಿಕ್ ತನ್ನ ಅವಳಿ ಮಕ್ಕಳು ಮತ್ತು ಹೆಂಡತಿಗೆ ಸಮಯವನ್ನು ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications