Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಾಕ್‌ಡೌನ್ ವೇಳೆ ಡ್ಯಾನ್ಸ್ ಮಾಡಿದ ದಿನೇಶ್ ಕಾರ್ತಿಕ್: ಫನ್ನೀ ವೀಡಿಯೋ

Dinesh Karthik Flaunts his Version of Lockdown Dance

ಚೆನ್ನೈ, ಏಪ್ರಿಲ್ 6: ಕೊರೊನಾವೈರಸ್‌ನಿಂದಾಗಿ ಯಾವುದೇ ಕ್ರೀಡಾಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ ಸದಾ ಬ್ಯುಸಿ ಇರುತ್ತಿದ್ದ ಕ್ರಿಕೆಟಿಗರು ತಮ್ಮ ಕುಟುಂಬಸ್ಥರ ಜೊತೆ, ತಮ್ಮ ಸಾಕು ಪ್ರಾಣಿಗಳ ಜೊತೆಗಿನ ಚಿತ್ರ ಅಥವಾ ವೀಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಲ ಕ್ರಿಕೆಟಿಗರು ಕೊಂಚ ವಿಭಿನ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶ್ರೇಯಸ್ ಐಯ್ಯರ್ ಜಾದೂ ಮಾಡಿರುವ ವೀಡಿಯೋ ಹಿಂದೆ ಹಂಚಿಕೊಂಡಿದ್ದರು. ಇದೀಗ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ತಾನು ಡ್ಯಾನ್ ಮಾಡಿರುವ ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.

ತನ್ನದೇ ಶೈಲಿಯ ಲಾಕ್‌ಡೌನ್ ವೀಡಿಯೋ ಹಾಕಿಕೊಂಡಿರುವ ಡಿಕೆ, ವೀಡಿಯೋದಲ್ಲಿ ಡ್ಯಾನ್ಸ್ ಮೂಲಕ ತನ್ನ ಸಾಕು ನಾಯಿ ಕೊಕೊ ಚನೆಲ್‌ನನ್ನು ಭೀತಿಗೊಳಿಸಿರುವ ತಮಾಷೆಯ ಚಿತ್ರಣವಿದೆ. ವೀಡಿಯೋ ಜೊತೆಗೆ 'ಮನೆಯಲ್ಲಿದ್ದು ಹುಚ್ಚಾಟಿಕೆ' ಎಂದು ಡಿಕೆ ಬರೆದುಕೊಂಡಿದ್ದಾರೆ. ಸ್ಪಿನ್ನರ್ ಯುಜುವೇಂದ್ರ ಚಾಹಲ್, ಶಿಖರ್ ಧವನ್ ಕೂಡ ಇಂಥದ್ದೇ ವೀಡಿಯೋವನ್ನು ಶೇರ್ ಮಾಡಿದ್ದರು.

ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಡಿಕೆಯ ಡ್ಯಾನ್ಸ್ ಹುಚ್ಚಾಟಿಕೆಗೆ ನಾಯಿ ಕೊಕೊ ಹೆದರಿ ಓಡಿದ್ದು ವೀಡಿಯೋದಲ್ಲಿದೆ. ಇನ್ನು ಚಾಹಲ್ ತನ್ನ ಹೆತ್ತವರ ಜೊತೆ ಟಿಕ್ ಟಾಕ್ ವೀಡಿಯೋ ಮಾಡಿದ್ದರೆ, ಓಪನರ್ ಶಿಖರ್ ಧವನ್ ತನ್ನ ಪತ್ನಿ ಎದುರಲ್ಲಿ ಮನೆಕೆಲಸ ಮಾಡುತ್ತಿರುವಂತೆ ತಮಾಷೆಯ ವೀಡಿಯೋ ಹಂಚಿಕೊಂಡಿದ್ದರು.

Story first published: Sunday, May 3, 2020, 22:48 [IST]
Other articles published on May 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+