ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ವೇಳೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಬ್ಬರಿಸುತ್ತಿದೆ. ಎಸ್‌ಆರ್‌ಎಚ್ ಹಾಗೂ ಚೆನ್ನೈ ವಿರುದ್ಧ ತವರಿನಲ್ಲಿ ಮನಮೋಹಕ ಆಟವಾಡಿ 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ವೇಳೆ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇವರ ಬ್ಯಾಟಿಂಗ್ ಕಂಡು ಆರ್‌ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಗುಣಗಾನ ಮಾಡಿದ್ದಾರೆ.
ದೇವದತ್ ಪಡಿಕ್ಕಲ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಈ ಪಂದ್ಯದಲ್ಲೀ ದೇವದತ್ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ದೇವದತ್ ಆಡಿದ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು. ದೇವದತ್ ಬ್ಯಾಟಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ದೊಡ್ಡ ಹೇಳಿಕೆ ನೀಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ದಿನೇಶ್ ಕಾರ್ತಿಕ್, ದೇವದತ್ ಪಡಿಕ್ಕಲ್ ಇದೇ ರೀತಿ ಬ್ಯಾಟಿಂಗ್ ಮಾಡಿದರೆ, ಅವರನ್ನು ಟೀಮ್ ಇಂಡಿಯಾದಿಂದ ಹೊರಗಿಡುವುದು ತುಂಬ ಕಷ್ಟ ಎಂದು ತಿಳಿಸಿದ್ದಾರೆ. ದೇವದತ್ ಆರ್‌ಸಿಬಿ ತಂಡದ ಪರ ಆಡಿದ ಧಾಟಿ ಎಲ್ಲರ ಗಮನ ಸೆಳೆದಿದೆ.
ಈ ಪಿಚ್‌ಗಳಲ್ಲಿ ಬೌಲ್ ಸುಲಭವಾಗಿ ಬ್ಯಾಟ್‌ಗೆ ಆರಂಭದಲ್ಲಿ ಬರುತ್ತಿರಲಿಲ್ಲ. ಹೀಗಾಗಿ ಸುಲಭವಾಗಿ ರನ್‌ಗಳನ್ನು ಕಲೆ ಹಾಕುವುದು ಸಾಧ್ಯವಿರಲಿಲ್ಲ. ಇದೇ ಪಂದ್ಯದಲ್ಲಿ ಹಲವು ಬ್ಯಾಟರ್‌ಗಳು ಬಿಗ್ ಹಿಟ್‌ಗಳನ್ನು ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದರು. ಆದರೆ ದೇವದತ್ ಪಡಿಕ್ಕಲ್ ಆಡಿದ ಧಾಟಿ ನಿಜಕ್ಕೂ ಉತ್ತಮವಾಗಿತ್ತು ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.
ಕರ್ನಾಟಕದ ಡ್ರೆಸ್ಸಿಂಗ್ ರೂಮ್‌ನಲ್ಲಿ ಇವರು ನಾಯಕನಾಗಿ ಹೆಜ್ಜೆ ಇಟ್ಟ ರೀತಿ ನಿಜಕ್ಕೂ ಶ್ಲಾಘನೀಯ. ಇವರು ಈ ಬಾರಿಯ ಐಪಿಎಲ್‌ನಲ್ಲಿ ನಿಜಕ್ಕೂ ಅಮೋಘ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇವರು ಚೆನ್ನೈ ವಿರುದ್ಧ ಇವರು ಮೊದಲ ಬೌಂಡರಿ ಬಾರಿಸಿದ ಮೇಲೆ ಗೇರ್ ಶಿಫ್ಟ್ ಮಾಡಿದರು. ಅವರನ್ನು ಹೆಚ್ಚು ಕಾಲ ಭಾರತ ತಂಡದಿಂದ ದೂರವಿಡುವುದು ಕಷ್ಟ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ರನ್ ಕಲೆ ಹಾಕಿದ್ದಾರೆ ಎಂದು ಶ್ಲಾಘಿಸಿದ್ದಾರೆ.