For Quick Alerts
ALLOW NOTIFICATIONS  
For Daily Alerts
 

ರೋಹಿತ್ ಮಾತನ್ನು ಗಂಭೀರವಾಗಿ ತೆಗೆದುಕೊಂಡ ದಿನೇಶ್ ಕಾರ್ತಿಕ್; ಟಿ20 ವಿಶ್ವಕಪ್‌ಗೆ ಆಯ್ಕೆ ಪಕ್ಕಾನಾ?

ಮುಂಬರುವ ಐಸಿಸಿ 2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸಂಭಾವ್ಯ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನಕ್ಕಾಗಿ ದಿನೇಶ್ ಕಾರ್ತಿಕ್ ಅವರನ್ನು ಸ್ಟಂಪ್ ಮೈಕ್‌ನಲ್ಲಿ ರೋಹಿತ್ ಶರ್ಮಾ ಕಾಲೆಳೆದಿವುದನ್ನು ಕೇಳಿದಾಗ ಅದು ಹಗುರವಾದ ತಮಾಷೆಯಂತೆ ಕಾಣುತ್ತದೆ.

ಆದರೆ, 38 ವರ್ಷದ ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಇದೀಗ, ಭಾರತ ತಂಡದ ನಾಯಕನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

Dinesh Karthik is on Fire Taking Rohit Sharma s Words Seriously Will He Make the T20 World Cup Squad

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 23 ಎಸೆತಗಳಲ್ಲಿ 53 ರನ್ ಗಳಿಸಿದ ಕೆಲವೇ ದಿನಗಳ ನಂತರ, ಸೋಮವಾರ, ಏಪ್ರಿಲ್ 15ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ನಡುವಿನ ದಾಖಲೆ ಮುರಿಯುವ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 83 ರನ್ ಸಿಡಿಸಿದ ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು.

ಸೋಮವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದ್ದ ಆರ್‌ಸಿಬಿ ಮಾಲೀಕರಿಂದ ಚಪ್ಪಾಳೆ ಗಿಟ್ಟಿಸಿದ ದಿನೇಶ್ ಕಾರ್ತಿಕ್‌ ಅವರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನ ಆರ್‌ಸಿಬಿಯ ಪ್ರಶಸ್ತಿ ವಿಜೇತ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಸೇರಿದಂತೆ ಹಲವರು ಹ್ಯಾಟ್ಸ್‌ಆಫ್ ಹೇಳಿದರು.

Dinesh Karthik is on Fire Taking Rohit Sharma s Words Seriously Will He Make the T20 World Cup Squad

ಇದೇ ವೇಳೆ ದಿನೇಶ್ ಕಾರ್ತಿಕ್‌ ಅವರು 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಗೆ ಪರಿಗಣಿಸುವಂತೆ ತಮ್ಮ ಆಟವನ್ನು ಆಡಿದ್ದಾರೆ. ಗಮನಾರ್ಹವಾಗಿ, ಟಿ20 ವಿಶ್ವಕಪ್‌ ವರ್ಷದಲ್ಲಿ ದಿನೇಶ್ ಕಾರ್ತಿಕ್‌ ಐಪಿಎಲ್‌ನಲ್ಲಿ ಅಬ್ಬರಿಸುತ್ತಾರೆ ಎಂಬ ಮಾತಿದೆ.

ದಿನೇಶ್ ಕಾರ್ತಿಕ್ 2022ರಲ್ಲಿ ಆರ್‌ಸಿಬಿ ಜೊತೆಗಿನ ಐಪಿಎಲ್ ಋತುವಿನ ನಂತರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರು. ಅವರು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಗಳಿಸಲು 2022ರ ಐಪಿಎಲ್‌ನಲ್ಲಿ 183.33ರ ಸ್ಟ್ರೈಕ್ ರೇಟ್‌ನಲ್ಲಿ 16 ಪಂದ್ಯಗಳಲ್ಲಿ 330 ರನ್ ಗಳಿಸಿದರು.

ಆದರೆ, ದಿನೇಶ್ ಕಾರ್ತಿಕ್ ಅವರು 2022ರಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ 20.50ರ ಸರಾಸರಿಯಲ್ಲಿ 28 ಪಂದ್ಯಗಳಲ್ಲಿ ಕೇವಲ 287 ರನ್ ಗಳಿಸಿದ ಕಾರಣ, ಐಪಿಎಲ್ ಫಾರ್ಮ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅನುವಾದಿಸಲು ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ ಐಪಿಎಲ್ 2024ರಲ್ಲಿ ಈವರೆಗೆ ಆಡಿದ 7 ಪಂದ್ಯಗಳಲ್ಲಿ 205.45ರ ಸ್ಟ್ರೈಕ್ ರೇಟ್‌ನಲ್ಲಿ 226 ರನ್ ಗಳಿಸಿದ್ದಾರೆ.

ಆದಾಗ್ಯೂ, ಜೂನ್ 1ರಿಂದ ಪ್ರಾರಂಭವಾಗುವ ಐಸಿಸಿ ಪಂದ್ಯಾವಳಿಗಾಗಿ ಮುಂಚೂಣಿಯಲ್ಲಿರುವ ಆಟಗಾರರ ಸ್ಪರ್ಧೆಯನ್ನು ಪರಿಗಣಿಸಿದರೆ, ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್‌ಗೆ ಪ್ರವೇಶಿಸುವ ಸಾಧ್ಯತೆಗಳು ಮಸುಕಾಗಿವೆ. ರಿಷಭ್ ಪಂತ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಸದ್ಯ ವಿಕೆಟ್ ಕೀಪರ್ ಪಾತ್ರಕ್ಕಾಗಿ ಮುಂಚೂಣಿಯಲ್ಲಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಬ್ಬರಿಸಿದ ಡಿಕೆ

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 7 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು ಮತ್ತು ಅವುಗಳಲ್ಲಿ ಒಂದು ಸಿಕ್ಸರ್ 108 ಮೀಟರ್ ದೂರ ಸಾಗಿತು. ಅಲ್ಲದೆ 5 ಬೌಂಡರಿಗಳನ್ನು ಬಾರಿಸಿದರು.

ಚೇಸಿಂಗ್ ಮಾಡಲು ಅಸಂಭವವೆಂದು ತೋರುತ್ತಿದ್ದ 288 ರನ್‌ಗಳ ಮೊತ್ತವನ್ನು ಬೆನ್ನಟ್ಟುವಾಗ ಆರ್‌ಸಿಬಿ ತಂಡವನ್ನು ಏಕಾಂಗಿಯಾಗಿ ಆಟವಾಡಿ ಜೀವಂತವಾಗಿಟ್ಟಿದ್ದರು.

ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಟ್ರಾವಿಸ್ ಹೆಡ್ 41 ಎಸೆತಗಳಲ್ಲಿ 102 ರನ್, ಹೆನ್ರಿಚ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್, ಏಡೆನ್ ಮಾರ್ಕ್ರಾಮ್ 17 ಎಸೆತಗಳಲ್ಲಿ 32 ರನ್ ಮತ್ತು ಅಬ್ದುಲ್ ಸಮದ್ 10 ಎಸೆತಗಳಲ್ಲಿ 37 ರನ್ ಗಳಿಸಿ ಟಿ20 ಫ್ರಾಂಚೈಸಿ ಕ್ರಿಕೆಟ್ ಇತಿಹಾಸದಲ್ಲಿ 287 ರನ್‌ಗಳ ಅತ್ಯಧಿಕ ಮೊತ್ತ ಮತ್ತು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತವನ್ನು ದಾಖಲಿಸಿದರು.

ನಂತರ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 42 ರನ್ ಮತ್ತು ಫಾಫ್ ಡು ಪ್ಲೆಸಿಸ್ 28 ಎಸೆತಗಳಲ್ಲಿ 62 ರನ್‌ಗಳ ಮೂಲಕ ಅಬ್ಬರದ ಆರಂಭ ನೀಡಿದ್ದರಿಂದ, ಆರ್‌ಸಿಬಿ 8 ಓವರ್‌ಗಳಲ್ಲಿ 2 ವಿಕೆಟ್‌ಗೆ 100 ರನ್ ಗಳಿಸಿತು.

ಆದರೆ, ಸನ್‌ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬ್ರೇಕ್ ಹಾಕಿದ್ದರಿಂದ, 2 ವಿಕೆಟ್‌ಗೆ 100 ರನ್‌ಗಳಿಂದ ಆರ್‌ಸಿಬಿ 12 ಎಸೆತಗಳ ಅವಧಿಯಲ್ಲಿ 5 ವಿಕೆಟ್‌ಗೆ 122 ರನ್‌ಗಳಿಗೆ ಹೋದಾಗ ಮಧ್ಯಮ ಓವರ್‌ಗಳ ಕುಸಿತವನ್ನು ಅನುಭವಿಸಿತು.

ಈ ವೇಳೆ, ದಿನೇಶ್ ಕಾರ್ತಿಕ್ ಗಡಿಯಾರವನ್ನು ಹಿಂತಿರುಗಿಸಿದರು. ಮಹಿಪಾಲ್ ಲೊಮ್ರೋರ್ ಅವರೊಂದಿಗೆ 59 ರನ್‌ಗಳ ಜೊತೆಯಾಟದಲ್ಲಿ ಎಸ್‌ಆರ್‌ಹೆಚ್ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು.

ನಂತರ, ಐತಿಹಾಸಿಕ ಪಂದ್ಯದಲ್ಲಿ ಆರ್‌ಸಿಬಿ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ಅನುಜ್ ರಾವತ್ ಅವರೊಂದಿಗೆ 63 ರನ್ ಜೊತೆಯಾಟವನ್ನು ನಿರ್ಮಿಸಿದರು.

ಆರ್‌ಸಿಬಿ ತಂಡದ ಮೊತ್ತ 244 ರನ್‌ಗಳಿದ್ದಾಗ 19ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಔಟಾದರು. ಈ ವೇಳೆಗೆ ಬೇಕಾದ ರನ್‌ರೇಟ್ ಅಸಾಧ್ಯವಾಗಿತ್ತು. ಅಂತಿಮವಾಗಿ ಆರ್‌ಸಿಬಿ ತಂಡ 262 ರನ್ ಗಳಿಸಿತು.

ಇದು ಐಪಿಎಲ್ ಪಂದ್ಯದಲ್ಲಿ ಚೇಸಿಂಗ್ ಮಾಡುವಾಗ 250 ಅಥವಾ ಅದಕ್ಕಿಂತ ಹೆಚ್ಚಿನ ರನ್ ಬಾರಿಸಿದ ಮೊದಲ ತಂಡವಾಯಿತು ಮತ್ತು 25 ರನ್‌ಗಳಿಂದ ಸೋಲು ಕಂಡಿತು.

Story first published: Tuesday, April 16, 2024, 13:31 [IST]
Other articles published on Apr 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+