Dinesh Karthik: ತಮ್ಮ ತಪ್ಪಿನ ಅರಿವಾಗಿ ಎಂಎಸ್ ಧೋನಿಗೆ ಕ್ಷಮೆ ಕೇಳಿದ DK
ಆರ್‌ಸಿಬಿ ತಂಡದ ಆಟಗಾರ ದಿನೇಶ್ ಕಾರ್ತಿಕ್ ಡೆತ್ ಓವರ್‌ಗಳಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ಇವರು ಐಪಿಎಲ್‌ನಲ್ಲಿ ತಮ್ಮ ವಿಶಿಷ್ಠ ಶೈಲಿಯ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ಟೀಮ್ ಇಂಡಿಯಾದಲ್ಲಿ ಹೆಸರು ಮಾಡಿರುವ ದಿನೇಶ್ ಕಾರ್ತಿಕ್, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈಗ ಅವರು ಆರ್‌ಸಿಬಿ ಕೋಚ್ ಸ್ಟಾಫ್ ಕುರ್ಚಿಯಲ್ಲಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರಿಗಿಂತಲೂ ಮುನ್ನವೇ ಬ್ಲ್ಯೂ ಜೆರ್ಸಿ ತೊಟ್ಟ ಆಟಗಾರ, ದಿನೇಶ್ ಕಾರ್ತಿಕ್. ಇಬ್ಬರೂ ವಿಕೆಟ್ ಕೀಪರ್‌ಗಳು.. ಧೋನಿ ತಮ್ಮಲ್ಲಿರುವ ಚಾಣಕ್ಯ ನಡೆಗಳಿಂದ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ದಿನೇಶ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ನೆರವಾದ ಪ್ಲೇಯರ್.. ಆದರೆ ಇತ್ತೀಚಿಗೆ ದಿನೇಶ್ ಕಾರ್ತಿಕ್ ತಮ್ಮ ಸಾರ್ವಕಾಲಿಕ ಬೆಸ್ಟ್ ಇಲೆವೆನ್ ಆಯ್ಕೆ ಮಾಡಿದ್ದರು.

ಕ್ಷಮೆ ಕೇಳಿದ್ದು ಏಕೆ?
ದಿನೇಶ್ ಕಾರ್ತಿಕ್ ತಮ್ಮ ಸಾರ್ವಕಾಲಿಕ ಬೆಸ್ಟ್ ಟೀಮ್ ಆಯ್ಕೆ ಮಾಡಿದ್ದರು. ಇದರಲ್ಲಿ ಭಾರತದ ನಾಯಕ ಎಂಎಸ್ ಧೋನಿ ಅವರನ್ನು ಆಯ್ಕೆ ಮಾಡದೇ ದೊಡ್ಡ ತಪ್ಪನ್ನೇ ಮಾಡಿ ಬಿಟ್ಟಿದ್ದರು. ಇದಾದ ಬಳಿಕ ಇದು ಬಹು ದೊಡ್ಡ ವಿವಾದವೇ ಆಯಿತು. ಅಭಿಮಾನಿಗಳು ಡಿಕೆ ವಿರುದ್ಧ ಕೆಂಡ ಕಾರಿದ್ದರು.
ದಿನೇಶ್ ಕಾರ್ತಿಕ್ ಅವರಿಗೆ ಈಗ ತಮ್ಮ ತಪ್ಪಿನ ಅರಿವಾಗಿದೆ. ತಾವು ಮಾಡಿದ ತಪ್ಪನ್ನು ಅರಿತುಕೊಂಡಿರುವ ದಿನೇಶ್ ಕಾರ್ತಿಕ್, ನಾನು ಒಬ್ಬ ವಿಕೆಟ್ ಕೀಪರ್ ಆಗಿ ನನ್ನ ತಂಡದಲ್ಲಿ ವಿಕೆಟ್ ಕೀಪರ್‌ಗೆ ಸ್ಥಾನ ನೀಡುವಲ್ಲಿ ಎಡವಿರುವೆ. ಇದು ದೊಡ್ಡ ತಪ್ಪು. ಧೋನಿ ನಮ್ಮ ಕನಸಿನ ತಂಡದಲ್ಲಿ ಸ್ಥಾನ ಇಲ್ಲದೇ ಇರಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

ಸ್ಪಷ್ಟನೇ ನೀಡಿರುವ ದಿನೇಶ್
ತಮ್ಮ ತಪ್ಪಿನ ಅರಿವಾಗಿ ದಿನೇಶ್ ಕಾರ್ತಿಕ್ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. 'ಸಹೋದರರೇ, ನನ್ನಿಂದ ದೊಡ್ಡ ತಪ್ಪು ಆಗಿದೆ. ಗಂಭೀರದ ತಪ್ಪಾಗಿದೆ. ಈ ವಿಷಯ ಬೆಳಕಿಗೆ ಬಂದಾಗ ನನಗೆ ನಾನು ಮಾಡಿದ ತಪ್ಪು ಅರಿವಾಯಿತು. ವಿಕೆಟ್ ಕೀಪರ್ ಆಗಿರುವ ನಾನು ವಿಕೆಟ್ ಕೀಪರ್ ಅವರನ್ನೇ ಆಯ್ಕೆ ಮಾಡಿರಲಿಲ್ಲ. ಇದು ದೊಡ್ಡ ತಪ್ಪು ಎಂದಿದ್ದಾರೆ.
ಬೇರೆ ಬೇರೆ ಯೋಚನೆಗಳ ಮಧ್ಯೆ ನಾನು ನನ್ನ ತಂಡದ ವಿಕೆಟ್ ಕೀಪರ್ ಅವರನ್ನು ಆಯ್ಕೆ ಮಾಡುವಲ್ಲಿ ಎಡವಿರುವೆ ಎಂದು ತಿಳಿಸಿದರು. ಆಗ ಎಲ್ಲರೂ ರಾಹುಲ್ ದ್ರಾವಿಡ್ ಅವರನ್ನು ದಿನೇಶ್ ಕಾರ್ತಿಕ್ ತಮ್ಮ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ನೀಡುತ್ತಾರೆ ಎಂದೇ ಭಾವಿಸಿದ್ದರು.
ಧೋನಿ ಪ್ರತಿಯೊಬ್ಬ ಭಾರತೀಯರ ನಾಯಕ
ಮಹೇಂದ್ರ ಸಿಂಗ್ ಧೋನಿ ಎಲ್ಲರ ನೆಚ್ಚಿನ ಆಟಗಾರ. ವಿಶ್ವದಲ್ಲೇ ಇವರಿಗೆ ಅಭಿಮಾನಿಗಳ ಬಳಗವಿದೆ. ಅವರು ಸಹ ಒಬ್ಬ ಶ್ರೇಷ್ಠ ಕ್ರಿಕೆಟ್ ಆಟಗಾರ. ನಾನು ನನ್ನ ತಂಡದಲ್ಲಿ ಬದಲಾವಣೆ ಮಾಡುತ್ತೇನೆ. ಏಳನೇ ಸ್ಥಾನದಲ್ಲಿ ಧೋನಿ ನಿಲ್ಲುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಧೋನಿ ಪ್ರತಿಯೊಬ್ಬ ಭಾರತೀಯರ ನಾಯಕ ಎಂದು ತಿಳಿಸಿದ್ದಾರೆ.
ದಿನೇಶ್ ಕಾರ್ತಿಕ್ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್
ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅನಿಲ್ ಕುಂಬ್ಳೆ, ಜಸ್ಪ್ರೀತ್ ಬುಮ್ರಾ, ಜಹೀರ್ ಖಾನ್. 12ನೇ ಆಟಗಾರ: ಹರ್ಭಜನ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications