100 ಟೆಸ್ಟ್ ಪಂದ್ಯಗಳ ಆಡಬಲ್ಲ ಯುವ ಆಟಗಾರನ ಹೆಸರಿಸಿದ ದಿನೇಶ್ ಕಾರ್ತಿಕ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸುತ್ತಿರುವ ಭಾರತದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಅನುಭವಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಶ್ಲಾಘಿಸಿದ್ದಾರೆ. ಕಳೆದ ಕೆಲ ತಿಂಗಳಲ್ಲಿ ಪಂತ್ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಉತ್ತಮ ಫಾರ್ಮ್ ತೋರಿಸುತ್ತಿದ್ದಾರೆ ಎಂದು ಕಾರ್ತಿಕ್ ಹೇಳಿದ್ದಾರೆ.
ಜೂನ್ 18ರಿಂದ 22ರ ವರೆಗೆ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ರಿಷಭ್ ಪಂತ್ ಟೀಮ್ ಇಂಡಿಯಾದಲ್ಲಿ ಪ್ರಭಾವಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬರ್ಥದಲ್ಲಿ ಕಾರ್ತಿಕ್ ಮಾತನಾಡಿದ್ದಾರೆ.
ಸ್ಪೋರ್ಟ್ಸ್ ಟು ಡೇ ಜೊತೆಗೆ ಮಾತನಾಡಿರುವ ದಿನೇಶ್ ಕಾರ್ತಿಕ್ ಪಂತ್ ಅವರಲ್ಲಿರುವ ಒತ್ತಡದ ಸಂದರ್ಭ ನಿಭಾಯಿಸುವ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನಾಡಲಿದ್ದಾರೆ ಎಂದು ಹೇಳಿದ್ದಾರೆ.
'ಕಳೆದ ಕೆಲವು ದಿನಗಳಲ್ಲಿ ರಿಷಭ್ ಪಂತ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆತ ನಿಜಕ್ಕೂ ಬಹಳ ಒತ್ತಡದ ಪಂದ್ಯಗಳನ್ನು ಆಡಿದ್ದಾರೆ. ಅದು ವಿಶ್ವಕಪ್ ಫೈನಲ್ ಆಗಿರಲಿ, ಐಪಿಎಲ್ ಫೈನಲ್ ಆಗಿರಲಿ, ವೈಯಕ್ತಿಕವಾಗಿ ನನಗನ್ನಿಸುವಂತೆ ಪಂತ್ ಈ ಪಂದ್ಯಗಳಲ್ಲಿ ಸೊಗಸಾಗಿ ಆಡಿದ್ದಾರೆ,' ಎಂದು ಕಾರ್ತಿಕ್ ವಿವರಿಸಿದ್ದಾರೆ.
'ಸವಾಲು ಸ್ವೀಕರಿಸಲೆಂದೇ ಇರುವ ಒಬ್ಬ ಆಟಗಾರರಲ್ಲಿ ರಿಷಭ್ ಪಂತ್ ಕೂಡ ಒಬ್ಬರು ನನಗನ್ನಿಸುತ್ತದೆ. ಐಪಿಎಲ್ ಫೈನಲ್‌ನಲ್ಲೂ ಆತ ಅರ್ಥ ಶತಕ ಬಾರಿಸಿದ್ದ. ನನಗೆ ನೆನಪಿದೆ; ಅದು ಐಪಿಎಲ್ ಎಲಿಮಿನೇಟರ್ ಪಂದ್ಯವಿರಬೇಕು. ಪಂತ್ ಏಕಾಂಗಿ ಹೋರಾಟ ಮಾಡಿ ಪಂದ್ಯ ಗೆಲ್ಲಿಸಿದ್ದರು,' ಎಂದು ದಿನೇಶ್ ಹಿಂದಿನ ಕ್ಷಣವೊಂದನ್ನು ಸ್ಮರಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications