ಸರ್ವಕಾಲಿಕ ಆರ್‌ಸಿಬಿ ತಂಡ ಪ್ರಕಟಿಸಿದ ದಿನೇಶ್ ಕಾರ್ತಿಕ್: ವಿರಾಟ್‌ಗಿಲ್ಲ ನಾಯಕತ್ವ
ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭವಾಗಲಿದೆ. ಈ ಮೆಗಾ ಲೀಗ್‌ಗೆ ಎಲ್ಲ ಫ್ರಾಂಚೈಸಿಗಳ ಆಟಗಾರರು ಈಗಾಗಲೇ ಅಭ್ಯಾಸ ನಡೆಸಿದ್ದಾರೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಸುದ್ದಿಯಲ್ಲಿದ್ದಾರೆ. ದಿನೇಶ್ ಆರ್‌ಸಿಬಿ ಆಲ್-ಟೈಮ್ ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡಿದ್ದಾರೆ.
ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ಪರ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಮಾಡಿದ ಆಟಗಾರ. ಇವರಿಗೆ ಆರ್‌ಸಿಬಿ ಫಿನಿಷರ್ ಪಾತ್ರವನ್ನು ನೀಡಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರು ಈ ಬಾರಿಯ ಐಪಿಎಲ್‌ಗೂ ಮುನ್ನ ಆರ್‌ಸಿಬಿ ಸರ್ವಕಾಲಿ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಇವರು ನಾಯಕತ್ವ ವಿರಾಟ್ ಕೊಹ್ಲಿಗೆ ನೀಡದೆ, ರಜತ್ ಪಾಟಿದಾರ್ ಅವರನ್ನು ನೇಮಿಸಿದ್ದಾರೆ.

ಕ್ರಿಕ್‌ಬಜ್ ಜೊತೆ ಮಾತನಾಡಿರುವ ದಿನೇಶ್, "ವಿರಾಟ್ ಕೊಹ್ಲಿ ಅನೇಕ ಋತುಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ನನ್ನ ಸರ್ವಾಕಾಲಿಕ ತಂಡಕ್ಕೆ ರಜತ್ ಪಟಿದಾರ್ ನಾಯಕ ಎಂದು ತಿಳಿಸಿದ್ದಾರೆ. ಇವರು ಕಡಿಮೆ ಅವಧಿಯಲ್ಲಿ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ತಂಡದಲ್ಲಿ ಇವರು ಹೊಂದಿರುವ ಪ್ರಭಾವ ಅಸಾಧಾರಣವಾಗಿದೆ ಎಂದು ತಿಳಿಸಿದ್ದಾರೆ.
ಆರಂಭಿಕರಾಗಿ ವಿದೇಶಿಗರಿಗೆ ಅವಕಾಶ
ದಿನೇಶ್ ಕಾರ್ತಿಕ್ ಅವರು ಆಯ್ಕೆ ಮಾಡಿದ ತಂಡದಲ್ಲಿ ಆರಂಭಿಕರಾಗಿ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೇಸಿಸ್ ಇದ್ದಾರೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇನ್ನು ನಾಯಕ ರಜತ್ ಪಟಿದಾರ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಇದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಜಿತೇಶ್ ಶರ್ಮಾ, ನಂತರದ ಸ್ಥಾನದಲ್ಲಿ ಕೃನಾಲ್ ಅವರನ್ನು ಆಯ್ಕೆ ಮಾಡಿದ್ದಾರೆ.
ಮೂವರು ವೇಗಿಗಳಿಗೆ ಸ್ಥಾನ
ದಿನೇಶ್ ಕಾರ್ತಿಕ್ ಅವರ ತಂಡದ ವೇಗದ ಬೌಲಿಂಗ್ ನೊಗವನ್ನು ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಮುನ್ನಡೆಸಿದರೆ, ಸ್ಪಿನ್ ಬೌಲರ್ ಆಗಿ ಯುಜ್ವೇಂದ್ರ ಚಾಹಲ್ ಅವರಿಗೆ ಸ್ಥಾನ ನೀಡಿದ್ದಾರೆ.
ದಿನೇಶ್ ಕಾರ್ತಿಕ್ ಸರ್ವಕಾಲಿಕ ತಂಡ: ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಎಬಿ ಡಿವಿಲಿಯರ್ಸ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಜೋಶ್ ಹ್ಯಾಜಲ್‌ವುಡ್.

ಹಾಲಿ ಚಾಂಪಿಯನ್ ಆರ್‌ಸಿಬಿ ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಮೊದಲ ಪಂದ್ಯ ಮಾರ್ಚ್ 28 ರಂದು ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿನಲ್ಲಿ ಕಣಕ್ಕೆ ಇಳಿಯಲಿದ್ದು, ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications