ನಿದಹಾಸ್ ಫೈನಲ್‌ನಲ್ಲಿ ಭಾರತದ ರೋಚಕ ಗೆಲುವಿನ ಗುಟ್ಟು ಬಿಚ್ಚಿಟ್ಟ ಕಾರ್ತಿಕ್!

ನವದೆಹಲಿ, ಮಾರ್ಚ್ 19: ಕಳೆದ ವರ್ಷ ಮಾರ್ಚ್ 18ರಂದು ನಿದಹಾಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ರೋಚಕ ಗೆಲುವು ದಾಖಲಿಸಿದ್ದನ್ನು ಕ್ರಿಕೆಟ್ ಪ್ರೇಮಿಗಳು ನೆನಪಿಟ್ಟುಕೊಂಡಿರಬಹುದು. ಆವತ್ತು ಭಾರತದ ಪಾಲಿಗೆ ದಿನೇಶ್ ರ್ಕಾರ್ತಿಕ್ ಹೀರೋ ಅನ್ನಿಸಿಕೊಂಡಿದ್ದರು.
ಅಂದಿನ ಪಂದ್ಯವನ್ನು ಮೆಲುಕು ಹಾಕಿರುವ ಕಾರ್ತಿಕ್, ತನ್ನ ಸ್ಫೋಟಕ ಬ್ಯಾಟಿಂಗ್ ಮತ್ತು ಪೆವಿಲಿಯನ್ ನಲ್ಲಿ ತುಂಬಿದ್ದ ಕ್ರಿಕೆಟ್ ಪ್ರೇಮಿಗಳು ಭಾರತ ತಂಡವನ್ನು ಬೆಂಬಲಿಸಿದ್ದರ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅಂದು ಫೈನಲ್‌ನಲ್ಲಿ ಭಾರತ 4 ವಿಕೆಟ್ ಗೆಲುವು ದಾಖಲಿಸಿತ್ತು.
ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ, ಬಾಂಗ್ಲಾ ಮತ್ತು ಶ್ರೀಲಂಕಾ ತಂಡಗಳ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟಿದ್ದ ಬಾಂಗ್ಲಾದೇಶ 20 ಓವರ್‌ಗೆ 8 ವಿಕೆಟ್ ಕಳೆದು 166 ರನ್ ಗಳಿಸಿತ್ತು. ಭಾರತದ ಇನ್ನಿಂಗ್ಸ್‌ನಲ್ಲಿ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿದ್ದರು.

2 ಓವರ್‌ಗೆ 34 ರನ್
ಬಾಂಗ್ಲಾ ನೀಡಿದ್ದ 167 ರನ್ ಗುರಿ ಬೆನ್ನಟ್ಟಿದ ಭಾರತ, ನಾಯಕ ರೋಹಿತ್ ಶರ್ಮಾ ಅವರ ಅರ್ಧ ಶತಕದ (56) ನೆರವಿನೊಂದಿಗೆ 18 ಓವರ್‌ಗೆ 5 ವಿಕೆಟ್ ಕಳೆದು 133 ರನ್ ಗಳಿಸಿತ್ತು. ಅಂತಿಮ ಎರಡು ಓವರ್‌ನಲ್ಲಿ ಭಾರತ ಗೆಲ್ಲಲು 34 ರನ್‌ಗಳ ಅಗತ್ಯವಿತ್ತು.

ಗೆಲುವಿನ ಪಣ ತೊಟ್ಟ ಕಾರ್ತಿಕ್
6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಎತ್ತಿಕೊಂಡಾಗ ಕ್ರೀಸ್‌ನಲ್ಲಿ ವಿಜಯ್ ಶಂಕರ್ ಇದ್ದರು. ದಿನೇಶ್ ಆವತ್ತು ಕೇವಲ 7 ಎಸೆತಗಳಿಗೆ 23 ರನ್ ಚಚ್ಚಿದ್ದರು. 19.5ನೇ ಓವರ್‌ನಲ್ಲಿ ವಿಜಯ್ ಶಂಕರ್ ಓಟಾದರು. ಪಂದ್ಯ ತೀವ್ರ ರೋಚಕ ಹಂತಕ್ಕೆ ತಿರುಗಿತ್ತು. ಸೌಮ್ಯ ಸರ್ಕಾರ್ ಅವರ ಕೊನೆಯ ಎಸೆತಕ್ಕೆ ಭಾರತಕ್ಕೆ 5 ರನ್‌ಗಳ ಅಗತ್ಯವಿತ್ತು!

ಕೊನೆಯ ಎಸೆತಕ್ಕೆ ಸಿಕ್ಸ್!
ಭಾರತತಂಡದ ಗೆಲುವಿನ ಹೊರೆ ಹೊತ್ತಿದ್ದ ದಿನೇಶ್, ಫೈನಲ್ ಪಂದ್ಯದ ಕೊನೆಯ ಎಸೆತಕ್ಕೆ ಸಿಕ್ಸ್ ಚಚ್ಚಿದರು. ಅಲ್ಲಿಗೆ ಕೇವಲ 8 ಎಸೆತಗಳಿಗೆ ಕಾರ್ತಿಕ್ 29 ರನ್ ಬಾರಿಸಿದ್ದರು. ಭಾರತ ಈ ಪಂದ್ಯದಲ್ಲಿ 20 ಓವರ್‌ಗೆ 6 ವಿಕೆಟ್ ಕಳೆದು 168 ರನ್ ಪೇರಿಸಿ ರೋಚಕ ಗೆಲುವನ್ನಾಚರಿಸಿತ್ತು.

ಪ್ರೇಕ್ಷಕರ ಬೆಂಬಲದ ಗುಟ್ಟು
ಅವತ್ತಿನ ಪಂದ್ಯದಲ್ಲಿ ಪೆವಿಲಿಯನ್‌ನಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರೂ ಭಾರತವನ್ನು ಬೆಂಬಲಿಸಿದ್ದೇಕೆ ಎಂಬುದನ್ನು ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ದಾರೆ. ಪ್ರಶಸ್ತಿ ಸುತ್ತಿನ ಪ್ರವೇಶಕ್ಕಾಗಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾ ಮುಖಾಮುಖಿಯಾಗಿದ್ದವು. ಇದರಲ್ಲಿ ಆತಿಥೇಯ ಶ್ರೀಲಂಕಾ 2 ವಿಕೆಟ್ ಸೋಲನುಭವಿಸಿತ್ತು. ಇದು ಅಲ್ಲಿನ ಪ್ರೇಕ್ಷಕರಿಗೆ ಬೇಸರ ತರಿಸಿತ್ತು. ಹೀಗಾಗಿ ಫೈನಲ್‌ನಲ್ಲಿ ಪೆವಿಲಿಯನ್‌ನಲ್ಲಿದ್ದಾ ಪ್ರೇಕ್ಷರೆಲ್ಲರೂ ಬಾಂಗ್ಲಾ ಎದುರಾಳಿ ಭಾರತಕ್ಕೆ ಬೆಂಬಲಿಸಿದ್ದರು, ಹುರಿದುಂಬಿಸಿದ್ದರು. ಇದೂ ಗೆಲುವಿನ ನೆಲೆಯಲ್ಲಿ ನೆರವಾಯ್ತು ಎಂದು ಕಾರ್ತಿಕ್ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications