Dinesh Karthik: ಜನ್ಮದಿನದಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ದಿನೇಶ್ ಕಾರ್ತಿಕ್!
ಜೂನ್ 1 ಶನಿವಾರ, ಟೀಮ್ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಅವರು 39ನೇ ವಂಸತಕ್ಕೆ ಕಾಲಿಟ್ಟಿದ್ದಾರೆ. ಈ ಸಂತಸದ ದಿನದಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಈ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ದಿನೇಶ್ ಕಾರ್ತಿಕ್ ಮಿಂಚಿದ್ದರು. ಮೂರು ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಬಗ್ಗೆ ದಿನೇಶ್ ಕಾರ್ತಿಕ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

"ನಾನು ಅಧಿಕೃತವಾಗಿ ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ. ಮುಂದೆ ಇರುವ ಹೊಸ ಸವಾಲುಗಳಿಗೆ ನಾನು ಸಿದ್ಧನಾಗಿರುವಾಗ, ಆಟದ ದಿನಗಳನ್ನು ನನ್ನ ಹಿಂದೆ ಇಡುತ್ತೇನೆ ಎಂದು ಡಿಕೆ ಬರೆದುಕೊಂಡಿದ್ದಾರೆ. ಈ ಋತುವಿನ ಆರಂಭದಲ್ಲೇ ಐಪಿಎಲ್‌ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಹೇಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಡಿಕೆ ಅಧಿಕೃತವಾಗಿ ಯಾವುದೇ ಪತಿಕ್ರಿಯೆ ನೀಡಿರಲಿಲ್ಲ.
ಬಳಿಕ ರಾಜಸ್ಥಾನ ರಾಯಲ್ ವಿರುದ್ಧ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಪರ ಕಣಕ್ಕೀಳಿದಿದ್ದ ದಿನೇಶ್ ಕಾರ್ತಿಕ್ ತಮ್ಮ ಕೊನೆಯ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿತ್ತು. ಅಂದು ಕೂಡ ಡಿಕೆ ಅಧಿಕೃತವಾಗಿ ನಿವೃತ್ತಿ ಘೋಷಣೆ ಮಾಡಿರಲಿಲ್ಲ.
ಇದೀಗಾ ರಾಜಸ್ಥಾನ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಂಡ 10 ದಿನಗಳ ಬಳಿಕ ಡಿಕೆ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಐಪಿಎಲ್ ಮಾತ್ರವಲ್ಲ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಡಿಕೆ ವಿದಾಯ ಹೇಳಿದ್ದಾರೆ. ಮೈದಾನದಲ್ಲಿ ಆರ್‌ಸಿಬಿ ಆಟಗಾರರು ಭಾವುಕ ವಿದಾಯ ನೀಡಿದಾಗಲೇ ದಿನೇಶ್ ಕಾರ್ತಿಕ್ ನಿವೃತ್ತಿ ಹೇಳುತ್ತಾರೆ ಎಂಬ ವಿಚಾರ ಖಚಿತವಾಗಿತ್ತು.
ಕೋಚ್ ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಕಾರ್ತಿಕ್
ಭಾವನಾತ್ಮಕ ಪೋಸ್ಟ್ ಬರೆದಿರುವ ದಿನೇಶ್ ಕಾರ್ತಿಕ್, 'ಈ ಸುದೀರ್ಘ ಪ್ರಯಾಣವನ್ನು ಆನಂದದಾಯಕವಾಗಿಸಿದ ನನ್ನ ಎಲ್ಲಾ ಕೋಚ್‌ಗಳು, ನಾಯಕ, ಆಯ್ಕೆದಾರರು, ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ' ಎಂದಿದ್ದಾರೆ. ಕಾರ್ತಿಕ್ ತನ್ನ ಪೋಷಕರು, ಪತ್ನಿ ದೀಪಿಕಾ ಮತ್ತು ಅಭಿಮಾನಿಗಳಿಗೂ ಧನ್ಯವಾದ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಕ್ರಿಕೆಟ್ ವೃತ್ತಿಜೀವನ
ಡಿಕೆ 2007ರ ಮೊದಲ ಆವೃತ್ತಿ ಟಿ20 ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇದಲ್ಲದೇ 2010 ಮತ್ತು 2018ರ ಏಷ್ಯಾಕಪ್ ಗೆದ್ದ ಟೀಮ್ ಇಂಡಿಯಾ ಪರ ಡಿಕೆ ಪ್ರಮುಖ ಪಾತ್ರವಹಿಸಿದ್ದರು.
ಟೀಮ್ ಇಂಡಿಯಾ ಪರ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ತಿಕ್ ಕಣಕ್ಕೀಳಿದಿದ್ದಾರೆ. ಮೂರು ಮಾದರಿ ಕ್ರಿಕೆಟ್‌ನಿಂದ ಒಟ್ಟು 3463 ರನ್ ಗಳನ್ನು ಕಲೆ ಹಾಕಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಟೆಸ್ಟ್ ನಲ್ಲಿ ಕೇವಲ ಒಂದು ಶತಕವನ್ನು ಗಳಿಸಿದ್ದಾರೆ.
ಇದರ ಹೊರತಾಗಿ, ಅವರ ಹೆಸರು ಟೆಸ್ಟ್‌ನಲ್ಲಿ 7 ಅರ್ಧಶತಕಗಳು, ಏಕದಿನದಲ್ಲಿ 9 ಮತ್ತು ಟಿ20ಯಲ್ಲಿ 1 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ಒಂದು ಓವರ್ ಮಾಡಿರುವ ಕಾರ್ತಿಕ್ 6 ಎಸೆತಗಳಲ್ಲಿ 18 ರನ್ ನೀಡಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್‌ನಲ್ಲಿಯೂ ಡಿಕೆ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications