ಭಾರತ ತಂಡಕ್ಕೆ ಆಯ್ಕೆಯಾದರೂ ಈ ಸರಣಿಯಲ್ಲಿ ಆತನಿಗೆ ಅವಕಾಶ ದೊರೆಯದು: ದಿನೇಶ್ ಕಾರ್ತಿಕ್

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿ ಬುಧವಾರದಿಂದ ಆರಂಭವಾಗಲಿದೆ. ಕೆಎಲ್ ರಾಹುಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದ್ದು ಏಕಿನ ಸರಣಿಯಲ್ಲಿ ಅನುಭವಿಸಿದ ಹಿನ್ನಡೆಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಮಾತನಾಡಿದ್ದು ಈ ಸರಣಿಗೆ ಆಯ್ಕೆಯಾಗಿದ್ದರೂ ಓರ್ವ ಆಟಗಾರನಿಗೆ ವಕಾಶ ದೊರೆಯುವುದು ಅನುಮಾನ ಎಂದಿದ್ದಾರೆ.
ಸುಮಾರು 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಟೆಸ್ಟ ತಂಡಕ್ಕೆ ಆಯ್ಕೆಯಾಗಿರುವ ಆಟಗಾರ ಜಯ್‌ದೇವ್ ಉನಾದ್ಕಟ್. ದೇಶೀಯ ಕ್ರಿಕೆಟ್‌ನಲ್ಲಿ ನೀಡಿರಿಉವ ಅದ್ಭುತ ಪ್ರದರ್ಶನದಿಂದಾಗಿ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡದ್ದಾರೆ. ಆದರೆ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಬಳಗದಲ್ಲಿ ಅವರಿಗೆ ಸ್ಥಾನ ದೊರೆಯುವ ಸಾಧ್ಯತೆಯಿಲ್ಲ ಎಂದಿದ್ದಾರೆ ದಿನೇಶ್ ಕಾರ್ತಿಕ್.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ಟೆಸ್ಟ್ ತಂಡದಲ್ಲಿ ಕೆಲ ಆಟಗಾರರು ಗಾಯದಿಂದ ಅಲಭ್ಯವಾಗಿರುವ ಕಾರಣ ಪರಿಷ್ಕರಿಸಿ ಪ್ರಕಟಿಸಿದೆ. ಈ ತಂಡದಲ್ಲಿ ಜಯದೇವ್ ಉನದ್ಕಟ್‌ಗೆಅವಕಾಶ ದೊರೆತಿದೆ. ಆದರೆ ತಂಡದಲ್ಲಿ ಸ್ಥಾನ ದೊರೆತರೂ ಉನಾದ್ಕಟ್‌ಗೆ ಆಡುವ ಅವಕಾಶ ದೊರೆಯದೆ ಇರುವ ಸಾಧ್ಯತೆಯಿದೆ ಎಂದಿದ್ದಾರೆ ಡಿಕೆ. ಟೀಮ್ ಇಂಡಿಯಾ ಟೆಸ್ಟ್ ಸರಣಿಗೆ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರು ಕಣಕ್ಕಿಳಿಸುವ ಸಾಧ್ಯತೆಯಿರುವ ಕಾರಣ ಉನಾದ್ಕಟ್ ಬೆಂಚ್ ಕಾಯಬೇಕಾಗವಹುದು ಎಂದಿದ್ದಾರೆ.
ಉನಾದ್ಕಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಡಿಕೆ: ಇನ್ನಿ ಇದೇ ಸಂದರ್ಭದಲ್ಲಿ ಜಯ್‌ದೇವ್ ಉನಾದ್ಕಟ್ ಬಗ್ಗೆ ದಿನೇಶ್ ಕಾರ್ತಿಕ್ ಭಾರೀ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ. ಖಂಡಿತವಾಗಿಯೂ ಜಯ್‌ದೇವ್ ಉನಾದ್ಕಟ್ ಭಾರತ ತಂಡದಲ್ಲಿ ಆಡಲು ಅತ್ಯಂತ ಅರ್ಹವಾಗಿರುವ ವೇಗದ ಬೌಲರ್ ಎಂದಿದ್ದಾರೆ. ಇತ್ತೀಚೆಗಷ್ಟೇ ಅಂತ್ಯವಾದ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಅವರು 19 ವಿಕೆಟ್ ಸಂಪಾದಿಸಿ ಮಿಂಚಿದ್ದರು.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಭ್ ಕುಮಾರ್, ಜಯದೇವ್ ಉನದ್ಕತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications