For Quick Alerts
ALLOW NOTIFICATIONS  
For Daily Alerts
 

ಕೋಹ್ಲಿ, ರೋಹಿತ್ ಅವರಂತೆ ಆತ ಪಂದ್ಯ ಗೆಲ್ಲಿಸಿಕೊಡಬೇಕು: ಸ್ಟಾರ್ ಆಟಗಾರನಿಗೆ ದಿನೇಶ್ ಕಾರ್ತಿಕ್ ಸಲಹೆ

ಭಾರತದ ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಯುವ ಆಟಗಾರನಿಗೆ ಸಲಹೆ ನೀಡಿದ್ದಾರೆ. ಭಾರತ ತಂಡದಲ್ಲಿ ಮತ್ತಷ್ಟು ಹೆಜ್ಜೆ ಮುಂದೆ ಬಂದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಂತೆ ಪಂದ್ಯಗಳನ್ನು ಗೆಲ್ಲಿಸಿಕೊಡುವ ಜವಾಬ್ಧಾರಿ ವಹಿಸಿಕೊಳ್ಳಬೇಕು ಎಂದು ಡಿಕೆ ಸಲಹೆ ನೀಡಿದ್ದಾರೆ.

ಅಂದಹಾಗೆ ದಿನೇಶ್ ಕಾರ್ತಿಕ್ ಸಲಹೆ ನೀಡಿದ್ದು ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರಿಗೆ. ತಂಡದಲ್ಲಿ ಆರಂಭಿಕ ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಗಿಲ್ ಈ ವರ್ಷ ಭಾಋತ ತಂಡದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ. ಅಲ್ಲದೆ ಈ ವರ್ಷ ಏಕದಿನ ಮಾದರಿಯಲ್ಲಿ ಈಗಾಗಲೇ 1000 ರನ್‌ಗಳನ್ನು ಕೂಡ ಗಳಿಸಿದ ಸಾಧನೆ ಮಾಡಿದ್ದಾರೆ. ವಿಶ್ವಕಪ್‌ನಲ್ಲಿಯೂ ಯುವ ಆಟಗಾರನ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು ಪಂದ್ಯವನ್ನು ಗೆಲ್ಲಿಸಿಕೊಡುವಂತಾ ಸಾಮರ್ಥ್ಯವನ್ನು ಹೊಂದಿದ ಆಟಗಾರ ಎಂದು ಈಗಾಗಲೇ ಸಾಬೀತುಪಡಿಸಿದ್ದಾರೆ

Dinesh Karthik said Shubman Gill start winnings matches for India like Virat Kohli, Rohit Sharma

ಶುಬ್ಮನ್ ಗಿಲ್ ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡಿ ಮಿಂಚಿದರು, ಏಕಾಂಗಿ ಹೋರಾಟ ನೀಡಿದ ಗಿಲ್ ಕೊನೆಯವರೆಗೂ ನಿಂತು ಪಂದ್ಯವನ್ನು ಗೆಲ್ಲಿಸಿಕೊಡಲು ವಿಫಲವಾಗಿದ್ದರು. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ ಅದ್ಭುತವಾಗಿ ಹೋರಾಡಿದರೂ ಕೂಡ ಪಂದ್ಯದಲ್ಲಿ ಗೆಲುವು ಸಾಧ್ಯವಾಗಲಿಲ್ಲ.

ಬಾಂಗ್ಲಾ ವಿರುದ್ಧದ ಈ ಪಂದ್ಯದಲ್ಲಿ ಗಿಲ್ ತಮ್ಮ ಐದನೇ ಏಕದಿನ ಶತಕವನ್ನು ಗಳಿಸಿದ್ದಾರೆ. ಅಲ್ಲದೆ ಈಗಾಗಲೇ ಈ ಟೂರ್ನಿಯಲ್ಲಿ ಅವರು ಎರಡು ಅರ್ಧಶತಕಗಳನ್ನು ಕೂಡಿ ಸಿಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ 133 ಎಸೆತಗಳನ್ನು ಎದುರಿಸಿ ಭರ್ಜರಿ 122 ರನ್ ಗಳಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶದ ವಿರುದ್ಧ ಭಾರತದ ರನ್ ಬೆನ್ನಟ್ಟುವಿಕೆಗೆ ಪ್ರಮುಖ ಕೊಡುಗೆ ನೀಡಿದರು.

ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ತಿಲಕ್ ವರ್ಮಾ ಪವರ್‌ಪ್ಲೇಯಲ್ಲಿ ಔಟಾಗುವ ಮೂಲಕ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಗಿಲ್ ಅವರ ಶತಕವು ಭಾರತವನ್ನು ಆಟದಲ್ಲಿ ಮುಂದುವರಿಯುವಂತೆ ಮಾಡಿತ್ತು. ಆದರೆ ಪಂದ್ಯದಲ್ಲಿ ಭಾರತವನನ್ಉ ಗೆಲುವಿನ ದಡ ಸೇರಿದಲು ಅವರಿಂದ ಸಾಧ್ಯವಾಗಲಿಲ್ಲ.

ಕ್ರಿಕ್ ಬಜ್‌ ಸಂವಾದದಲ್ಲಿ ಭಾಗಿಯಾಗಿದ್ದ ಡಿಕೆ "ಶುಬ್ಮನ್ ಗಿಲ್ ಪಂದ್ಯವನ್ನು ಮುಗಿಸಬೇಕೆನ್ನುವ ಧಾವಂತದಲ್ಲಿಯೇ ಇದ್ದರು. ಆದರೆ ಅವರು ಔಟಾಗಿದ್ದು ಕೆಟ್ಟ ಹೊಡೆತದಿಂದ ಅಲ್ಲ ಎಂದು ನಾನು ಪರಿಗಣಿಸುತ್ತೇನೆ. ಆದರೆ ಇಂಥಾ ಪಿಚ್‌ನಲ್ಲಿ ಆ ರೀತಿಯ ಹೊಡೆಗಳನ್ನು ಸತತವಾಗಿ ಬಾರಿಸುತ್ತಾ ಇರುವುದು ಸವಾಲಿನ ಕೆಲಸ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಮುಂದುವರಿದು ದಿನೇಶ್ ಕಾರ್ತಿಕ್ "ಶುಬ್ಮನ್ ಗಿಲ್ ಮೂರು ಮಾದರಿಯಲ್ಲಿಯೂ ಆಡುವ ಆಟಗಾರನಾಗಿ ಮುಂದೆ ಬರಬೇಕು. ಅಲ್ಲದೆ ಸುದೀರ್ಘ ವರ್ಷಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಂತೆ ಪಂದ್ಯಗಳನ್ನು ಗೆಲ್ಲಿಸಿಕೊಡುವ ಜವಾಬ್ಧಾರಿ ವಹಿಸಿಕೊಳ್ಳಬೇಕು. ಆತನಲ್ಲಿ ಅಂಥಾ ಸಾಮರ್ಥ್ಯ ಖಂಡಿತಾ ಇದೆ ಹಾಗೂ ಭಾರತಕ್ಕಾಗಿ ಆತ ಖಂಡಿಯವಾಗಿ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡಲಿದ್ದಾರೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

Story first published: Saturday, September 16, 2023, 18:41 [IST]
Other articles published on Sep 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+