ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
ಇದೇ ಕಾರಣಕ್ಕೆ ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ದಿನೇಶ್ ಕಾರ್ತಿಕ್ ಮತ್ತೊಮ್ಮೆ ಆಯ್ಕೆಗಾರರ ಬಾಗಿಲು ತಟ್ಟುತ್ತಿದ್ದಾರೆ.

38 ವರ್ಷದ ಅನುಭವಿ ಆಟಗಾರ ಈ ಅವೃತ್ತಿಯ ಅಗ್ರ ಹತ್ತು ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಆಡಿದ ಆರು ಇನ್ನಿಂಗ್ಸ್‌ಗಳಿಂದ 75.33ರ ಸರಾಸರಿಯಲ್ಲಿ 226 ರನ್ ಗಳಿಸಿದ್ದಾರೆ ಮತ್ತು 205.45ರ ಅಸಾಧಾರಣ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ತಮಿಳುನಾಡು ಮೂಲದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2024ರ ಐಪಿಎಲ್‌ನ 30ನೇ ಪಂದ್ಯದ ವೇಳೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 35 ಎಸೆತಗಳಲ್ಲಿ 83 ರನ್ ಗಳಿಸಿದರು.
ದಿನೇಶ್ ಕಾರ್ತಿಕ್ ಅವರ ಅದ್ಭುತ ಫಾರ್ಮ್ ಅನ್ನು ಅನುಸರಿಸಿ, ಅವರನ್ನು 2024ರ ಟಿ20 ವಿಶ್ವಕಪ್‌ಗಾಗಿ ಭಾರತೀಯ ತಂಡದಲ್ಲಿ ಅವರನ್ನು ನೋಡಲು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಉಂಟಾಗಿದೆ.
ಆದಾಗ್ಯೂ, ಯುವ ಆಟಗಾರರಿಗಿಂತ ಮುಂಚಿತವಾಗಿ ದಿನೇಶ್ ಕಾರ್ತಿಕ್ ಅವರನ್ನು ಭಾರತ ತಂಡದಲ್ಲಿ ಸೇರಿಸುವುದರಿಂದ ಯುವ ಆಟಗಾರರಿಗೆ ಅನ್ಯಾಯವಾಗುತ್ತದೆ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.

"ನೀವು ಹೇಳಿದಂತೆ ದಿನೇಶ್ ಕಾರ್ತಿಕ್ ಎಂಎಸ್ ಧೋನಿ ನೆರಳಿನಲ್ಲಿ ಆಡಿದ್ದಾರೆ, ಹಾಗಾಗಿ ಎಂಎಸ್ ಇನ್ನು ಮುಂದೆ ಆಡುತ್ತಿಲ್ಲ. ಕಾರ್ತಿಕ್ ವಿಶ್ವಕಪ್ ತಂಡಕ್ಕೆ ಬರಬೇಕೆಂದು ನೀವು ಬಯಸುತ್ತೀರಿ. ಆ ತರ್ಕದಲ್ಲಿ ಕಾರ್ತಿಕ್ ನೆರಳಿನಲ್ಲಿ ರಿಷಭ್ ಪಂತ್ ಇರುತ್ತಾರೆ," ಎಂದರು.
"ಅದು ಸರಿಯಾಗುತ್ತದೆಯೇ? ರಿಷಭ್ ಪಂತ್ ಫಾರ್ಮ್‌ನಲ್ಲಿ ಇಲ್ಲದಿದ್ದರೆ, ನಾನು ಸರಿ, ಸರಿ ಎಂದು ಹೇಳುತ್ತಿದ್ದೆ," ಎಂದು ಇರ್ಫಾನ್ ಪಠಾಣ್ ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದ ಅಂಬಟಿ ರಾಯುಡು ಅವರಿಗೆ ಪ್ರತಿಕ್ರಿಯಿಸಿದರು.
ಮಾತು ಮುಂದುವರೆಸಿದ ಇರ್ಫಾನ್ ಪಠಾಣ್, ಟಿ20 ವಿಶ್ವಕಪ್‌ಗೆ ಮುನ್ನ ಭಾರತಕ್ಕಾಗಿ ಆಡುತ್ತಿರುವ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಅವರಂತಹ ಆಟಗಾರರನ್ನು ದಿನೇಶ್ ಕಾರ್ತಿಕ್‌ಗಿಂತ ಮುಂಚಿತವಾಗಿ ಪರಿಗಣಿಸಬೇಕು ಎಂದು ಹೇಳಿದರು.
"ಆದರೆ ಈ ಸಂದರ್ಭದಲ್ಲಿ ಟಿ20 ವಿಶ್ವಕಪ್ ಸ್ಥಾನಕ್ಕಾಗಿ ದಿನೇಶ್ ಕಾರ್ತಿಕ್‌ಗಿಂತ ಸಂಜು ಸ್ಯಾಮ್ಸನ್ ಮುಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಅಥವಾ ಇತ್ತೀಚೆಗೆ ಭಾರತಕ್ಕಾಗಿ ಆಡುತ್ತಿರುವ ಜಿತೇಶ್ ಶರ್ಮಾ. ಪ್ರಸ್ತುತ ಆಟಗಾರರು, ಮತ್ತೊಬ್ಬ ಆಟಗಾರ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ನಿಯಮಿತ ಯೋಜನೆಯಲ್ಲಿರುವ ಪ್ರಸ್ತುತ ಆಟಗಾರರನ್ನು ದೂರವಿಡಬಾರದು ಎಂಬುದನ್ನು ನಾವು ಮರೆಯಬಾರದು," ಎಂದು ಇರ್ಫಾನ್ ಪಠಾಣ್ ತಿಳಿಸಿದರು.
ಗಮನಾರ್ಹವೆಂದರೆ, ಈ ಋತುವಿನಲ್ಲಿ ಸಂಜು ಸ್ಯಾಮ್ಸನ್ (264 ರನ್), ಕೆಎಲ್ ರಾಹುಲ್ (204), ರಿಷಭ್ ಪಂತ್ (194 ರನ್) ಮತ್ತು ಇಶಾನ್ ಕಿಶನ್ (184 ರನ್) ಪ್ರಚಂಡ ಫಾರ್ಮ್‌ನಲ್ಲಿರುವ ಕಾರಣ, ಟಿ20 ವಿಶ್ವಕಪ್‌ನಲ್ಲಿ ವಿಕೆಟ್‌ಕೀಪರ್ ಸ್ಥಾನವನ್ನು ತುಂಬಲು ಭಾರತೀಯ ಆಟಗಾರರ ನಡುವೆ ತೀವ್ರ ಪೈಪೋಟಿ ಇದೆ.
ಹೀಗಾಗಿ, ಜೂನ್ 1ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗಾಗಿ ಮೇಲಿನ ಎರಡು ಹೆಸರುಗಳನ್ನು ಆಯ್ಕೆ ಮಾಡುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಲೆನೋವನ್ನು ತರಸಿದೆ.