ಟೀಮ್ ಇಂಡಿಯಾ ಕಮ್‌ಬ್ಯಾಕ್ ಬಗ್ಗೆ ಕುತೂಹಲಕಾರಿ ಸಂಗತಿ ವಿವರಿಸಿದ ದಿನೇಶ್ ಕಾರ್ತಿಕ್

ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತ ಟಿ20 ತಂಡಕ್ಕೆ ವಾಪಾಸಾಗಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಪರವಾಗಿಯೂ ದಿನೇಶ್ ಕಾರ್ತಿಕ್ ಕೆಲ ಗಮನಾರ್ಹ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಸೈ ಎನಿಸಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಬಗ್ಗೆ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ 35ರ ಬಳಿಕ ರಾಷ್ಟ್ರೀಉ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಇರುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಈ ಹಂತದಲ್ಲಿ ರಾವು ಯಾವೆಲ್ಲಾ ರೀತಿಯ ಸವಾಲುಗಳನ್ನು ಎದುರಿಸಿದ್ದೆ. ಸವಾಲುಗಳನ್ನು ಮೀರಿನಿಂತು ರಾಷ್ಟ್ರೀಯ ತಂಡಕ್ಕೆ ಮತ್ತೆ ಸ್ಥಾನ ಗಿಟ್ಟಿಸಿಕೊಂಡಿದ್ದು ಹೇಗೆ ಎಂಬುದನ್ನು ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ.

ಡಿಕೆ ಕಮ್‌ಬ್ಯಾಕ್‌ಗೆ ವೇದಿಕೆಯಾಯ್ತು ಆರ್‌ಸಿಬಿ
ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. 1 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ 183.33ರ ಸ್ಟ್ರೈಕ್‌ರೇಟ್‌ನಲ್ಲಿ 330 ರನ್ ಬಾರಿಸುವ ಮೂಲಕ ಗಮನಸೆಳೆದರು. ಕೆಳ ಕ್ರಮಾಂಕದಲ್ಲಿ ನೀಡಿದ ಸ್ಪೋಟಕ ಪ್ರದರ್ಶನ ದಿನೇಶ್ ಕಾರ್ತಿಕ್ ಅವರನ್ನು ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಂತೆ ಮಾಡಿತು. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೂಲಕ ಭಾರತ ತಂಡಕ್ಕೆ ಪುನರಾಗಮನ ಮಾಡಿದರು ಡಿಕೆ.

35ರ ಬಳಿಕ ಕಮ್‌ಬ್ಯಾಕ್ ಸುಲಭವಿಲ್ಲ
ಈ ಕಮ್‌ಬ್ಯಕ್ ಬಗ್ಗೆ ದಿನೇಶ್ ಕಾರ್ತಿಕ್ ಮಾತನಾಡಿದ್ದು 35ರ ವಯಸ್ಸಿನ ಬಳಿಕ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದು ಸುಲಭವಲ್ಲ. ಆದರೆ ನನಗೆ ಆ ಹಂತದಲ್ಲಿ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ನನಗೆ ನನ್ನ ಮೇಲೆ ನಂಬಿಕೆಯಿತ್ತು. ಐಪಿಎಲ್‌ಗಿಂತ ಮೊದಲು ಕಠಿಣವಾದ ಪರಿಶ್ರಮಪಟ್ಟೆ. ಅದು ಉತ್ತಮವಾಗಿ ಕೆಲಸ ಮಾಡಿದ್ದಕ್ಕೆ ನನಗೆ ಖುಷಿಯಿದೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಈ ಪ್ರಯಾಣವನ್ನು ಆನಂದಿಸುತ್ತಿದ್ದೇನೆ
"ನಿಜ ಸಂಗತೊಯೇನೆಂದರೆ ನಾನು ಆರ್‌ಸಿಬಿ ತಂಡಕ್ಕೆ ಉತ್ತ,ವಾದ ಕೊಡುಗೆ ನೀಡಿದ ಕಾರಣಕ್ಕೆ ನನ್ನ ಪರವಾಗಿ ಕೆಲ ಪ್ರಮುಖ ಬೆಳವಣಿಗೆಗಳು ಆಯಿತು. ಇದೊಂದು ಪ್ರಯಾಣವಾಗಿದ್ದು ನಾನು ಇದನ್ನು ಆನಂದಿಸುತ್ತಿದ್ದೇನೆ. ಪ್ರತಿ ದಿನ ಕೂಡ ಹೊಸ ಸವಾಲುಗಳು ಎದುರಾಗುತ್ತವೆ. ಕೆಲ ಸವಾಲುಗಳಿಂದ ನೀವು ಹೊರಗೆ ಬರಬಹುದು. ಇನ್ನು ಕೆಲವು ಸವಾಲುಗಳು ನಿಮ್ಮನ್ನು ಮತ್ತಷ್ಟು ಗಟ್ಟಿಯನ್ನಾಗಿ ಮಾಡುತ್ತವೆ. ಈವರೆಗೆ ಇದೆಲ್ಲವೂ ಸಾಕಷ್ಟು ಕುತೂಹಲಕಾರಿಯಾಗಿದೆ" ಎಂದಿದ್ದಾರೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್.

ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆ
ಇನ್ನು ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ದಿನೇಶ್ ಕಾರ್ತಿಕ್ ಬ್ಯಾಟ್‌ನಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಾರದಿದ್ದರೂ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಫಿನಿಷರ್ ಆಗಿ ಜವಾಬ್ಧಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ. "ಸಾಕಷ್ಟು ಅದ್ಭುತವಾದ ಪ್ರತಿಭೆಗಳ ಪಡೆಯನ್ನು ನಮ್ಮ ತಂಡ ಹೊಂದಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದಿದ್ದಾರೆ ದಿನೇಶ್ ಕಾರ್ತಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications