For Quick Alerts
ALLOW NOTIFICATIONS  
For Daily Alerts
 

ರಾಜಮೌಳಿಗಿಂತಲೂ ಬಿಗ್‌ ಬ್ಲಾಕ್‌ ಬಸ್ಟರ್‌ ಚಿತ್ರ ನಿರ್ದೇಶಿಸಿದ ಡಿಕೆ ಸಾಹೇಬಾ

ಸಾಮಾನ್ಯವಾಗಿ ಒಂದು ಚಿತ್ರ ನಿರ್ಮಿಸಿ, ನಿರ್ದೇಶಿಸಲು ಎಷ್ಟು ಸಮಯ ಬೇಕು ಎಂದು ಕೇಳಿದ್ರೆ, ಅದು ಅವರ ಸಾಮರ್ಥ್ಯಕ್ಕೆ ಬಿಟ್ಟಿದ್ದು ಎಂಬ ಉತ್ತರ ಬರುತ್ತದೆ. ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ನಿರ್ದೇಶಕ ಎಸ್ ಎಸ್‌ ರಾಜಮೌಳಿ ಒಂದು ಚಿತ್ರವನ್ನು ನಿರ್ಮಿಸಲು ಸುಮಾರು 4 ರಿಂದ 6 ವರ್ಷ ತೆಗೆದುಕೊಳ್ಳುತ್ತಾರೆ. ಇಷ್ಟು ದಿನಗಳ ಶ್ರಮವನ್ನು ಬೆಳ್ಳಿಯ ತೆರೆಯ ಮೇಲೆ ನೋಡಿದ ಅಭಿಮಾನಿ ಫುಲ್ ಖುಷ್‌. ಇಂತಹ ಹಿಟ್‌ ಚಿತ್ರಗಳನ್ನು ನಿರ್ಮಿಸಿದ ಸಾಲಿನಲ್ಲಿ ರಾಜಮೌಳಿಗೆ ಅಗ್ರ ಸ್ಥಾನ. ಆದರೆ ಇವರಿಗಿಂತಲೂ ಸೂಪರ್‌ ಹಿಟ್‌ ಚಿತ್ರವನ್ನು ಡಿಕೆ ಸಾಹೇಬಾ ಜಸ್ಟ್‌ ಆರು ತಿಂಗಳುಗಳ ಅಂತರದಲ್ಲಿ ನಿರ್ಮಿಸಿದ್ದಾರೆ.

ಈ ಚಿತ್ರದ ಚಿತ್ರ ಕಥೆ ಹಾಗೂ ಡೈರೆಕ್ಷನ್‌ ಮಾಡಿದ್ದು ಇದೇ ಡಿಕೆ ಸಾಹೇಬಾ. ಎಸ್‌ ಟೀಮ್ ಇಂಡಿಯಾ ಮಾಜಿ ಆಟಗಾರ, ಆರ್‌ಸಿಬಿ ತಂಡದ ಆಪತ್‌ಬಾಂಧವ ದಿನೇಶ್‌ ಕಾರ್ತಿಕ್‌. ಕಳೆದ ವರ್ಷದ ಐಪಿಎಲ್ ಮುಗಿಯುತ್ತಿದ್ದಂತೆ ದಿನೇಶ್ ಕಾರ್ತಿಕ್ ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಆದರೆ ಅವರು ಆರ್‌ಸಿಬಿ ಜೊತೆಗಿನ ಸಂಬಂಧವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಆರ್‌ಸಿಬಿ ಮ್ಯಾನೇಜ್ಮೆಂಟ್ ಸಹ ಇವರ ಕ್ಷಮತೆಗೆ ತಕ್ಕ ಕಾರ್ಯವನ್ನೇ ನೀಡಿತು. ಇವರಿಗೆ ಆರ್‌ಸಿಬಿ ಬ್ಯಾಟಿಂಗ್ ಕೋಚ್‌ ಹಾಗೂ ಮೆಂಟರ್‌ ಜವಾಬ್ದಾರಿಯನ್ನು ನೀಡಿತು.

Dinesh Karthik The Mastermind Behind RCB s Blockbuster IPL Triumph in Six Months

ವಿಶ್ವದ ಅತ್ಯಂತ ಜನಪ್ರೀಯ ಕ್ರಿಕೆಟ್‌ ತಂಡದಲ್ಲಿ ದೊಡ್ಡ ಹುದ್ದೆ ಸಿಗುತ್ತಿದ್ದಂತೆ ಡಿಕೆ ಎಸಿ ರೂಮ್‌ನಲ್ಲಿ ಕುಳಿತು ಬ್ಲ್ಯೂ ಪ್ರಿಂಟ್ ಮಾಡಲೇ ಇಲ್ಲ. ಮೈದಾನದಲ್ಲಿ ಇಳಿದು ಪ್ರತಿ ನಡೆಯನ್ನು ನೋಡಿದರು. ದಿನೇಶ್‌ ಕಾರ್ತಿಕ್ ಭಾರತದ ಯುವ ಆಟಗಾರರಿಗೆ ಆರ್‌ಸಿಬಿ ಕ್ಯಾಂಪ್‌ಗೆ ಕರೆದು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶವನ್ನು ನೀಡಿದರು. ಆಗಲೇ ನೋಡಿ ನಿಜವಾದ ಸಾಣಿ ಹಿಡಿಯುವ ಕಾರ್ಯ ಆರಂಭವಾಗಿದ್ದು. ಕ್ಯಾಂಪ್‌ನಿಂದ ಬೆಸ್ಟ್‌ ಪ್ಲೇಯರ್‌ಗಳನ್ನು ಪಿಕ್ ಮಾಡಿ ಆಕ್ಷನ್‌ನಲ್ಲಿ ಟಾರ್ಗೆಟ್‌ ಮಾಡಿದರು.

ಸೌದಿಯಲ್ಲಿ ನಡೆದ ಐಪಿಎಲ್‌ ಹರಾಜಿನ ರೂಮ್‌ ಪ್ರವೇಶಿಸುವ ಮುನ್ನವೇ ದಿನೇಶ್ ಕಾರ್ತಿಕ್ ಒಂದಿಷ್ಟು ಪ್ಲೇಯರ್‌ಗಳ ಲೀಸ್ಟ್‌ ನೀಡಿದ್ದರು. ಈ ಪ್ಲೇಯರ್‌ಗಳು ಬೇಕೆ ಬೇಕು ಎಂದು ಹಠವನ್ನು ಹಿಡಿದರು. ಬೆಂಗಳೂರಿನ ಮೈದಾನಕ್ಕೆ ಹೊಂದಿಕೊಳ್ಳುವ ಆಟಗಾರರನ್ನು ಆಯ್ಕೆ ಮಾಡಿ ಮಣೆ ಹಾಕಿದರು. ಸ್ಟಾರ್ ಆಟಗಾರರೇ ಆಗಿರಲಿ, ದೇಶೀಯ ಆಟಗಾರರೇ ಆಗಿರಲಿ ಅವರ ಆಯ್ಕೆಯ ಹಿಂದೆ ದಿನೇಶ್‌ ಕಾರ್ತಿಕ್ ಕೈವಾಡ ಇದೆ. ಕೆಕೆಆರ್‌ ತಂಡದಲ್ಲಿ ಕಳೆದ ವರ್ಷ ಆಡಿದ್ದ ಫಿಲ್‌ ಸಾಲ್ಟ್‌, ಎಸ್‌ಆರ್‌ಎಚ್‌ ತಂಡದ ಪರ ಆಡಿದ್ದ ಭುವನೇಶ್ವರ್ ಕುಮಾರ್‌ಗೆ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಬರಮಾಡಿಕೊಂಡರು.

Dinesh Karthik The Mastermind Behind RCB s Blockbuster IPL Triumph in Six Months

ಮಾಸ್ಟರ್ ಮೈಂಡ್

ಕೃನಾಲ್‌ ಪಾಂಡ್ಯ, ಜಿತೇಶ್‌ ಶರ್ಮಾ, ಸುಯೇಶ್‌ ಶರ್ಮ, ಟೀಮ್ ಡೇವಿಡ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಾಗ ಅಭಿಮಾನಿಗಳ ಮನದಲ್ಲಿ ಹಲವು ಪ್ರಶ್ನೆಗಳು ಇದ್ದವು. ಆದರೆ ಟೂರ್ನಿ ಆರಂಭವಾಗುತ್ತಿದ್ದಂತೆ ದಿನೇಶ್ ಕಾರ್ತಿಕ್ ಮಾಡಿಕೊಡ ಪ್ಲ್ಯಾನ್‌ ಮೈದಾನದಲ್ಲಿ ರಂಗು ತಂದಿತು. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಸಂಘಟಿತ ಆಟದ ಪ್ರದರ್ಶನ ನೀಡಿದೆ ಎಂದರೆ ಅದರೆ ಹಿಂದಿನ ಮಾಂತ್ರಿಕ ದಿನೇಶ್ ಕಾರ್ತಿಕ್ ಅಂದರೆ ತಪ್ಪಾಗಲ್ಲ.

ಸತತ 17 ವರ್ಷಗಳ ಐಪಿಎಲ್‌ ಪ್ರಶಸ್ತಿಯ ಬರವರನ್ನು ಆರ್‌ಸಿಬಿ ತಂಡ ಬ್ರೇಕ್‌ ಮಾಡುವಲ್ಲಿ ದಿನೇಶ್ ಕಾರ್ತಿಕ್‌ ದೊಡ್ಡ ಪಾತ್ರವನ್ನು ವಹಿಸಿದರು. ದಿನೇಶ್‌ ಕಾರ್ತಿಕ್ ಅವರ ಮುಂದಾಳತ್ವದ ಆರ್‌ಸಿಬಿ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು 6 ರನ್‌ಗಳಿಂದ ಮಣಿಸಿ ಅಬ್ಬರಿಸಿತು. ವಿರಾಟ್‌ ಕೊಹ್ಲಿಯ ಕನಸು ನನಸಾಗಿದೆ. ಅದರಂತೆ ದಿನೇಶ್‌ ಕಾರ್ತಿಕ್ ಅವರ ಶ್ರಮಕ್ಕೆ ಬೆಲೆ ಸಿಕ್ಕಿದೆ.

Story first published: Wednesday, June 4, 2025, 16:11 [IST]
Other articles published on Jun 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+