For Quick Alerts
ALLOW NOTIFICATIONS  
For Daily Alerts
 

IPL 2024: ಆರ್‌ಸಿಬಿಯ ಬೆಸ್ಟ್‌ ಫಿನಿಶರ್‌ ಹೆಸರಿನಲ್ಲಿ ಕೆಟ್ಟ ದಾಖಲೆ‌; ಭಾರಿ ಬೇಜಾರು ಮಾರ್ರೆ!

2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ 62 ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಇದೀಗಾ ಐಪಿಎಲ್‌ ಲೀಗ್‌‌ ಕೊನೆಯ ಹಂತವನ್ನು ತಲುಪಿದೆ.

ಎಲ್ಲಾ ತಂಡಗಳು 12 ರಿಂದ 13 ಪಂದ್ಯಗಳನ್ನು ಆಡಿದ್ದು, ಕೋಲ್ಕತ್ತಾ ನೈಟ್‌ ರೈಡರ್ಸ್‌ ಹೊರೆತು ಪಡೆಸಿದರೆ ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯಲಿರುವ ತಂಡಗಳ ಹೆಸರು ಫೈನಲ್‌ ಆಗಿಲ್ಲ. ಹೀಗಿರುವಾಗ ಈ ಬಾರಿಯ ಐಪಿಎಲ್‌ನಲ್ಲಿ ಹಲವು ಶ್ರೇಷ್ಠ ದಾಖಲೆಗಳು ಮೂಡಿಬರುತ್ತಿರುವಾಗಲೇ ಹಲವು ಹಳೆಯ ದಾಖಲೆಗಳು ಮುರಿದು ಬಿದ್ದಿವೆ.

Dinesh Karthik worst record in IPL history

ಆದರೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ವಿಕೆಟ್‌ಕೀಪರ್ ಮತ್ತು ಬ್ಯಾಟರ್‌ ದಿನೇಶ್ ಕಾರ್ತಿಕ್ ಹೆಸರಿಗೆ ಕೆಟ್ಟ ದಾಖಲೆವೊಂದು ಸೇರ್ಪಡೆಯಾಗಿದೆ. ಆರ್‌ಸಿಬಿ ಪರ ಬೆಸ್ಟ್‌ ಫಿನಿಶರ್‌ ಪಾತ್ರ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ಅವರು ಐಪಿಎಲ್‌ನ 17 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (18) ಶೂನ್ಯಕ್ಕೆ ಔಟಾಗಿರುವ ಸಾಧನೆಗೆ ಪಾತ್ರರಾಗಿದ್ದಾರೆ.

ಭಾನುವಾರ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್‌ ಶೂನ್ಯಕ್ಕೆ ಔಟ್‌ ಆಗುವ ಮೂಲಕ ಈ ಕೆಟ್ಟ ದಾಖಲೆಯನ್ನು ಹೊತ್ತಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಕೆಟ್ಟ ದಾಖಲೆ ಮುಂಬೈ ಬ್ಯಾಟರ್‌ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ರೋಹಿತ್‌ ಶರ್ಮಾ 17 ಬಾರಿ ಶೂನ್ಯಕ್ಕೆ ಔಟ್‌ ಆಗಿದ್ದಾರೆ.

ರೋಹಿತ್‌ ಶರ್ಮಾ ನಂತರ ಆರ್‌ಸಿಬಿಯ ಮತ್ತೊಬ್ಬ ಆಲ್‌ ರೌಂಡರ್‌ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಈ ಋತುವಿನಲ್ಲಿ 3 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಒಟ್ಟು 17 ಬಾರಿ ಡಕೌಟ್‌ ಆಗಿದ್ದಾರೆ. ಇದಲ್ಲದೇ ಕೋಲ್ಕತ್ತಾ ತಂಡ ಸ್ಪಿನ್ನರ್‌ ಸುನಿಲ್ ನರೈನ್‌ ಮತ್ತು ಮುಂಬೈ ಲೆಗ್‌ ಸ್ಪಿನ್ನರ್‌ ಪಿಯೂಷ್ ಚಾವ್ಲಾ 16 ಬಾರಿ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡಿದ್ದಾರೆ.

Dinesh Karthik worst record in IPL history

ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟ್‌ ಆದ ಬ್ಯಾಟರ್‌ಗಳು

  • ದಿನೇಶ್‌ ಕಾರ್ತಿಕ್‌ - 18
  • ರೋಹಿತ್‌ ಶರ್ಮಾ - 17
  • ಗ್ಲೆನ್ ಮ್ಯಾಕ್ಸ್‌ವೆಲ್ - 17
  • ಸುನಿಲ್ ನರೈನ್‌ - 16
  • ಪಿಯೂಷ್ ಚಾವ್ಲಾ - 16

ಈ ಋತುವಿನಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಫಾರ್ಮಾನಲ್ಲಿದ್ದಾರೆ. ಆರ್‌ಸಿಬಿ ತಂಡಕ್ಕೆ ಕೊನೆಯ ಕ್ಷಣದಲ್ಲಿ ಗೆಲುವ ತಂದುಕೊಡಬಲ್ಲ ಸಾಮರ್ಥ್ಯವನ್ನು ದಿನೇಶ್‌ ಕಾರ್ತಿಕ್‌ ಹೊಂದಿದ್ದಾರೆ. ಡಿಕೆ 2 ಅರ್ಧಶತಕಗಳನ್ನು ಬಾರಿಸಿದ್ದು, 5 ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದಲ್ಲದೇ 2 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಒಟ್ಟು ಡಿಕೆ ಆಡಿದ 11 ಇನಿಂಗ್ಸ್‌ಗಳಲ್ಲಿ 43.00ರ ಸರಾಸರಿ ಕಾಯ್ದುಕೊಂಡು 194.19ರ ಭರ್ಜರಿ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 301 ರನ್‌ಗಳನ್ನು ಹೊಡೆದಿದ್ದಾರೆ.

Story first published: Monday, May 13, 2024, 18:24 [IST]
Other articles published on May 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+