Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನಕ್ಕೆ ಆಡದಿರುವುದು ನಿರಾಸೆ ತಂದಿದೆ: ಇಮ್ರಾನ್ ತಾಹೀರ್

Disappointed not to have played for Pakistan: Imran Tahir

ಲಾಹೋರ್, ಜುಲೈ 22: ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡಲು ಅವಕಾಶ ದೊರೆಯದಿರುವುದು ನಿರಾಸೆ ತಂದಿದೆ ಎಂದು ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಹೇಳಿದ್ದಾರೆ. ಲಾಹೋರ್‌ನಲ್ಲಿ ಜನಿಸಿರುವ ಲೆಗ್‌ ಸ್ಪಿನ್ನರ್ ತಾಹಿರ್, ವೃತ್ತಿ ಜೀವನದಲ್ಲಿ ಪಾಕ್‌ ರಾಷ್ಟ್ರೀಯ ತಂಡದ ಪರ ಆಡಲು ಅವಕಾಶ ದೊರೆಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮೂಲತಃ ಪಾಕಿಸ್ತಾನದವರಾಗಿರುವ ಇಮ್ರಾನ್ ತಾಹೀರ್ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಅಲ್ಲೇ ವೃತ್ತಿ ಬದುಕು ಕಂಡುಕೊಂಡರು. ದಕ್ಷಿಣ ಆಫ್ರಿಕಾದಲ್ಲೇ ವೃತ್ತಿ ಬದುಕು ಮುಗಿಸಿದರು. ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡವಲ್ಲದೆ, ಅನೇಕ ವಿದೇಶಿ ಲೀಗ್‌ಗಳಲ್ಲೂ ತಾಹೀರ್ ಮುಂಚೂಣಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ತಾಹಿರ್ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತಿದ್ದರು.

'ನಾನು ಲಾರೋರ್‌ನಲ್ಲಿ ಕ್ರಿಕೆಟ್‌ ಆಡುತ್ತಿದ್ದೆ. ಇದು ನನ್ನ ಕ್ರಿಕೆಟ್ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ನಾನು ನನ್ನ ಹೆಚ್ಚಿನ ಕ್ರಿಕೆಟ್ ಆಡಿದ್ದೆಲ್ಲಾ ಪಾಕಿಸ್ತಾನದಲ್ಲೇ. ಆದರೆ ಅಲ್ಲೇ ನನಗೆ ಅವಕಾಶ ಸಿಗಲಿಲ್ಲ. ಇದು ನಿರಾಶೆ ನೀಡಿದೆ,' ಎಂದು ಜಿಯೋ ಸೂಪರ್ ಜೊತೆ ಮಾತನಾಡಿದ ತಾಹೀರ್ ಹೇಳಿದ್ದಾರೆ.

ಪಾಕಿಸ್ತಾನದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮುನ್ನ ತಾಹೀರ್, ಪಾಕಿಸ್ತಾನ ಅಂಡರ್-19 ಕ್ರಿಕೆಟ್ ತಂಡ, ಪಾಕಿಸ್ತಾನ 'ಎ' ತಂಡದ ಪರ ಆಡಿದ್ದರು. ಈಗ 41ರ ಹರೆಯದವರಾಗಿರುವ ಇಮ್ರಾನ್, ದಕ್ಷಿಣ ಆಫ್ರಿಕಾ ಪ್ರತಿನಿಧಿಸಿ 20 ಟೆಸ್ಟ್‌ ಪಂದ್ಯಗಳಲ್ಲಿ 57 ವಿಕೆಟ್‌, 107 ಏಕದಿನ ಪಂದ್ಯಗಳಲ್ಲಿ 173 ವಿಕೆಟ್‌, 38 ಟಿ20ಐ ಪಂದ್ಯಗಳಲ್ಲಿ 63 ವಿಕೆಟ್ ಪಡೆದಿದ್ದಾರೆ.

Story first published: Thursday, July 23, 2020, 9:44 [IST]
Other articles published on Jul 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+