Wimbledon 2025: ಸೆಮಿಫೈನಲ್‌ನಲ್ಲಿ ಜೋಕೊಗೆ ನಿರಾಸೆ: ಫೈನಲ್‌ನಲ್ಲಿ ಯಾನಿಕ್, ಅಲ್ಕರಾಜ್ ಫೈಟ್
ವಿಶ್ವದ ಮಾಜಿ ನಂಬರ್ 1 ಆಟಗಾರ ನೋವಾಕ್ ಜೋಕೊವಿಚ್ ಅವರು ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ 25ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚು ನೂರಾಗಿದೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಯಾನಿಕ್ ಸಿನ್ನರ್, ನೋವಾಕ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.
ಸರ್ಬಿಯಾದ ನೋವಾಕ್ ಜೋಕೊವಿಚ್ ಅವರು ಆಘಾತ ಅನುಭವಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ 3-6, 3-6, 4-6 ರಿಂದ ಇಟಲಿಯ ಯಾನಿಕ್ ಸಿನ್ನರ್ ಅವರ ವಿರುದ್ಧ ಸೋಲು ಕಂಡರು. ಈ ಮೂಲಕ ಇಟಲಿಯ ಆಟಗಾರ ಇದೇ ಮೊದಲ ಬಾರಿಗೆ ವಿಂಬಲ್ಡನ್ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. 23 ವರ್ಷದ ಯಾನಿಕ್ ಸಿನ್ನರ್ ಅಮೋಘ ಪ್ರದರ್ಶನ ನೀಡಿದ ಪರಿಣಾಮ ಉಪಾಂತ್ಯ ಪಂದ್ಯವನ್ನು ಗೆದ್ದು ಬೀಗಿದರು. ಏಕಪಕ್ಷೀಯ ಪಂದ್ಯದಲ್ಲಿ ಯಾನಿಕ್ ಸಿನ್ನರ್ ಮೂರು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು.

1995ರ ಬಳಿಕ ನಾಲ್ಕು ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪ್ರಶಸ್ತಿಯ ಸುತ್ತಿಗೆ ಪ್ರವೇಶ ಪಡೆದ ಐದನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ರೋಜರ್ ಫೆಡರರ್, ರಫೆಲ್ ನಡಾಲ್, ಎಂಡಿ ಮರ್ರೆ, ನೋವಾಕ್ ಜೋಕೊವಿಚ್ ಈ ಸಾಧನೆ ಮಾಡಿದ್ದರು. ಗೆಲುವಿನ ನಂತರ ಮಾತನಾಡಿರುವ ಯಾನಿಕ್ ಸಿನ್ನರ್, ಈ ಗೆಲುವು ನನಗೆ ಖುಷಿ ನೀಡಿದೆ. ನಾನು ನನ್ನ ಈ ಸ್ಥಿರ ಪ್ರದರ್ಶನವನ್ನು ಮುಂದುವರೆಸಲು ಪ್ರಯತ್ನಿಸುವೆ. ಐದು ವರ್ಷಗಳ ಹಿಂದೆ ಈ ಅಂಗಳದಲ್ಲಿ ಆಡಲು ಆರಂಭಿಸಿದಾಗ ಕಷ್ಟ ಪಟ್ಟೆ. ನಿಜವಾಗಿ ಈ ರೀತಿಯ ಸಾಧನೆ ಮಾಡಲು ಹೆಚ್ಚಿನ ಶ್ರಮ ಅಗತ್ಯ ಎಂದು ತಿಳಿಸಿದ್ದಾರೆ.
ಯಾನಿಕ್ ಸಿನ್ನರ್ ತಮ್ಮ ನಾಲ್ಕನೇ ಗ್ರ್ಯಾನ್ ಸ್ಲ್ಯಾಮ್ ಹುಡುಕಾಟದಲ್ಲಿದ್ದಾರೆ. ಇವರು ಈಗಾಗಲೇ 2024, 2025ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದು ಬೀಗಿದ್ದಾರೆ. ಅಲ್ಲದೆ 2024ರಲ್ಲಿ ಯುಎಸ್ ಓಪನ್ ಗೆದ್ದು ಸಾಧನೆ ಮಾಡಿದ್ದರು.

ಅಲ್ಕರಾಜ್‌ಗೆ ಜಯ
ಸ್ಪೇನ್‌ನ ಸ್ಟಾರ್ ಆಟಗಾರ ಕಾರ್ಲೋಸ್ ಅಲ್ಕರಾಜ್ 6-4, 5-7, 6-3, 7-6 ರಿಂದ ಟೇಲರ್ ಫ್ರಿಟ್ಜ್ ಅವರನ್ನು ಮಣಿಸಿ ಅಬ್ಬರಿಸಿದರು. ಅಲ್ಕರಾಜ್ ಈಗಾಗಲೇ 2024, 2025ರಲ್ಲಿ ಫ್ರೆಂಚ್ ಓಪನ್, 2023, 2024ರಲ್ಲಿ ವಿಂಬಲ್ಡನ್, 2024ರಲ್ಲಿ ಯುಎಸ್ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಇವರು ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಯಾನಿಕ್ ಸಿನ್ನರ್ ಅವರ ಸವಾಲು ಎದುರಿಸಲಿದ್ದಾರೆ.
ಪ್ರಶಸ್ತಿಗಾಗಿ ಫೈಟ್
ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಟೆಕ್ ಹಾಗೂ ಅಮೆರಿಕದ ಅಮಂಡಾ ಅನಿಸಿಮೊವಾ ವಿರುದ್ಧ ಕಾದಟ ನಡೆಯಲಿದೆ. ಇಗಾ ಸ್ವಿಟೆಕ್ ತಮ್ಮ ಆರನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯ ಹುಡಕಾಟದಲ್ಲಿದ್ದಾರೆ. ಇದಕ್ಕೂ ಮೊದಲು ಇವರು 2020, 2022, 2023, 2024ರ ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಹಾಗೂ 2022ರಲ್ಲಿ ಯುಎಸ್ ಓಪನರ್ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications