'ಬಾಬರ್ ಅಜಂ ಮಾತ್ರ ಸೋಲಿಗೆ ಕಾರಣವಲ್ಲ, ಆತ ಈಗಲೇ ತುಂಬಾ ಅತ್ತಿದ್ದಾನೆ'
2023ರ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿದೆ. ಈ ಮೂಲಕ ಪ್ರಸಕ್ತ ವಿಶ್ವಕಪ್ ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಅಫ್ಘಾನ್ ವಿರುದ್ಧದ ಸೋಲಿನ ಬಳಿಕ ಪಾಕ್ ನಾಯಕ ಬಾಬರ್ ಅಜಂ ಟೀಕಾಕಾರರಿಗೆ ಆಹಾರವಾಗಿದ್ದಾರೆ.
ಅಭಿಮಾನಿಗಳಿಂದ ಹಿಡಿದು ಮಾಜಿ ಕ್ರಿಕೆಟಿಗರವರೆಗೆ ಎಲ್ಲರೂ ಬಾಬರ್ ಅಜಂ ಅವರನ್ನು ಗುರಿಯಾಗಿಸಿ ಕೆಂಡಕಾರಿದ್ದಾರೆ. ಈ ಮಧ್ಯದಲ್ಲಿ ಪಾಕ್ ತಂಡದ ಮಾಜಿ ಅನುಭವಿ ಬ್ಯಾಟ್ಸಮ್ಯಾನ್ ಮೊಹಮ್ಮದ್ ಯೂಸುಫ್, ಬಾಬರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

2023ರ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಬಾಬರ್ ಅಜಂ ಮಾತ್ರ ಹೊಣೆಯಲ್ಲ ಎಂದು ಮೊಹಮ್ಮದ್ ಯೂಸುಫ್ ಹೇಳಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ ಬಾಬರ್ ಅಜಂ ತುಂಬಾ ಅತ್ತಿದ್ದಾರೆ ಎಂದು ನಾನು ಕೇಳಿದ್ದೇನೆ.
ಈ ಸೋಲಿನಲ್ಲಿ ಕೇವಲ ಬಾಬರ್ ತಪ್ಪಿಲ್ಲ. ಇಡೀ ತಂಡ ಮತ್ತು ಮ್ಯಾನೇಜ್ಮೆಂಟ್ ಇದರಲ್ಲಿ ಭಾಗಿಯಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ಮತ್ತು ಇಡೀ ದೇಶ ಬಾಬರ್ ಜೊತೆಗೆ ನಿಲ್ಲಬೇಕು ಎಂದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ, ಬಾಬರ್ ಅಜಂ , "ಈ ಸೋಲಿನಿಂದ ನಾವು ಬಹಳಷ್ಟು ಕಲಿಯುತ್ತೇವೆ ಎಂದು ನಾನು ಭಾವಿಸುತ್ತೇನೆ.
ತಂಡದ ಫೀಲ್ಡಿಂಗ್ ಅಂದು ಕೊಂಡತೆ ಇಲ್ಲ
ನಾವು ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತೇವೆ. ನಮ್ಮ ತಂಡದ ಫೀಲ್ಡಿಂಗ್ ಅಂದು ಕೊಂಡತೆ ಇಲ್ಲ. ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ. ಅಂದಾಗ ಮಾತ್ರ ತಂಡದ ಫಲಿತಾಂಶ ಸಕಾರಾತ್ಮಕವಾಗಿರುತ್ತದೆ.
"ನಮ್ಮ ಆಟಗಾರರು ಫಿಟ್ನೆಸ್ ಬಗ್ಗೆಯೂ ಗಮನ ಹರಿಸಬೇಕಿದೆ. ಈಗ ನಾವು ವಿಭಿನ್ನ ಯೋಜನೆ ಮತ್ತು ವಿಭಿನ್ನ ಮನಸ್ಥಿತಿಯೊಂದಿಗೆ ಆಡಬೇಕಾಗಿದೆ" ಎಂದು ಯೂಸಫ್ ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿಂದ ಪಾಕಿಸ್ತಾನ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಬೇಕಿದೆ. ಅಂದಾಗ ಮಾತ್ರ ಪಾಕ್ ತಂಡ ಸೆಮಿಫೈನಲ್ ಹಂತಕ್ಕೆ ಎಂಟ್ರಿ ನೀಡುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುತ್ತದೆ.
ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ
ಪಾಕಿಸ್ತಾನವು ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಅದು ಸದ್ಯಕ್ಕೆ ಅಸಾಧ್ಯವೆಂದು ತೋರುತ್ತದೆ. ಪಾಕ್ ಇನ್ನು ಮುಂದೆ ದೊಡ್ಡ ತಂಡಗಳ ವಿರುದ್ಧ ಕಾದಾಟವನ್ನು ನಡೆಸಲಿದೆ. ನಿಜವಾದ ಸವಾಲೆಂದರೆ ಪಾಕಿಸ್ತಾನದ ಬೌಲಿಂಗ್ ಸಂಪೂರ್ಣವಾಗಿ ವಿಫಲವಾಗಿದೆ.
ಬ್ಯಾಟ್ಸಮ್ಯಾನ್ ಗಳು ಸಹ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುತ್ತಿಲ್ಲ. ಪಾಕಿಸ್ತಾನಕ್ಕೆ ಉಳಿದಿರುವ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳು ದೊಡ್ಡ ತಂಡಗಳ ವಿರುದ್ಧ ಇದ್ದು, ಇವುಗಳಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications