ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಮ್ಮನ್ನು ಪ್ರತ್ಯೇಕಿಸಬೇಡಿ: ಆಸ್ಟ್ರೇಲಿಯಾಕ್ಕೆ ಎಸಿಬಿ ಸಿಇಒ

Do not isolate us from international cricket: ACB CEO to Cricket Australia

ಕಾಬೂಲ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಫ್ಘಾನಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಬೇಡಿ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌ (ಎಸಿಬಿ)ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಮೀದ್ ಶಿನ್ವಾರಿ ಹೇಳಿದ್ದಾರೆ. ಅಫ್ಘಾನ್ ಮಹಿಳಾ ತಂಡವನ್ನು ತಾಲಿಬಾನ್‌ಗಳು ನಿಷೇಧಿಸುವುದಾಗಿ ಹೇಳಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಅಫ್ಘಾನ್ ವಿರುದ್ಧದ ಟೆಸ್ಟ್ ಪಂದ್ಯ ರದ್ದು ಮಾಡುವುದಾಗಿ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಅಫ್ಘಾನ್ ಕ್ರಿಕೆಟ್ ಬೋರ್ಡ್ ಈ ಹೇಳಿಕೆ ನೀಡಿದೆ.

ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!

ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ಅಧಿಕಾರ ಪಡೆದುಕೊಂಡ ನಂತರ ದೇಶದಲ್ಲಿ ಮಹಿಳೆಯರ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ಬಾನ್ ಮಾಡುವುದಾಗಿ ಹೇಳಿತ್ತು. ಇದಕ್ಕೆ ಇರುಗೇಟು ನೀಡಿದ್ದ ಆಸ್ಟ್ರೇಲಿಯಾ, ಮಹಿಳಾ ಕ್ರಿಕೆಟ್‌ಗೆ ತಾಲಿಬಾನ್‌ಗಳು ನಿಷೇಧ ಹೇರಿದರೆ ಅಫ್ಘಾನ್ ಪುರುಷರ ತಂಡದೊಂದಿಗಿನ ನಮ್ಮ ಉದ್ದೇಶಿತ ಟೆಸ್ಟ್‌ ಪಂದ್ಯ ರದ್ದು ಮಾಡುವುದಾಗಿ ಹೇಳಿತ್ತು.

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮದ ಪ್ರಕಾರ ಟೆಸ್ಟ್ ಕ್ರಿಕೆಟ್ ಆಡುವ ತಂಡಗಳು ಕಡ್ಡಾಯವಾಗಿ ಮಹಿಳಾ ಕ್ರಿಕೆಟ್ ತಂಡ ಹೊಂದಿರಬೇಕು. ಆದರೆ ಅಫ್ಘಾನ್‌ನಲ್ಲಿ ಆಡಳಿತ ಕೈಗೆತ್ತಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಅಫ್ಘಾನ್‌ನಲ್ಲಿ ಮಹಿಳಾ ಕ್ರೀಡೆಗೆ ನಿರ್ಬಂಧ ಹೇರಿದೆ. ಮಹಿಳಾ ಕ್ರಿಕೆಟ್ ತಂಡಕ್ಕೂ ನಿರ್ಬಂಧ ವಿಧಿಸಿದೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ ಕ್ರಿಕೆಟ್ ಬೋರ್ಡ್

ಗುರುವಾರ (ಸೆಪ್ಟೆಂಬರ್‌ 9) ಕ್ರಿಕೆಟ್ ಆಸ್ಟ್ರೇಲಿಯಾ ಒಂದು ಹೇಳಿಕೆ ನೀಡಿತ್ತು. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳಾ ಕ್ರೀಡಾ ಚಟುವವಟಿಕೆಗಳಿಗೆ ನಿರ್ಬಂಧ ಹೇರುವುದಾದರೆ ಸೀಸನ್‌ ಆರಂಭವಾಗಿ ನವೆಂಬರ್ 27ರಂದು ಹೋಬರ್ಟ್‌ನಲ್ಲಿ ನಡೆಯಲಿರುವ ಅಫ್ಘಾನ್ ಪುರುಷರು ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ರದ್ದು ಮಾಡಲಾಗುತ್ತದೆ ಎಂದು ಹೇಳಿತ್ತು.

ಬೆಂಗಳೂರು: ಕೆ.ಆರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಸೇರಿದ ಜನ, ಕೋವಿಡ್‌ ರೂಲ್ಸ್‌ ಸಂಪೂರ್ಣ ಉಲ್ಲಂಘನೆ

ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆಯ ಬಳಿಕ ಪ್ರತಿಕ್ರಿಯಿಸಿರುವ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್‌ನ ಸಿಇಒ ಹಮಿದ್ ಶಿನ್ವಾರಿ, "ನಾವು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ವಿಶ್ವದ ಎಲ್ಲಾ ಕ್ರಿಕೆಟ್ ರಾಷ್ಟ್ರಗಳಲ್ಲಿ ನಮಗಾಗಿ ಬಾಗಿಲು ತೆರೆದಿಡುವಂತೆ ಕೋರಿಕೊಳ್ಳುತ್ತೇವೆ. ನಮ್ಮ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಾಗಿ ನಮ್ಮನ್ನು ದಂಡಿಸಬೇಡಿ, ನಮ್ಮನ್ನು ಪ್ರತ್ಯೇಕವಾಗಿರಿಸಬೇಡಿ," ಎಂದು ವಿನಂತಿಸಿಕೊಂಡಿದ್ದಾರೆ.

Story first published: Saturday, September 11, 2021, 1:52 [IST]
Other articles published on Sep 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X