Chris Gayle luxury bungalow: ಜಮೈಕಾದ ಬೆಟ್ಟಗಳಲ್ಲಿ ಕ್ರಿಸ್ ಗೇಲ್ ಐಷಾರಾಮಿ ಬಂಗಲೆ ಹೇಗಿದೆ ಗೊತ್ತಾ?
ಜುಲೈ 6 ಶನಿವಾರ, ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಕ್ರಿಕೆಟ್‌ನಲ್ಲಿ ತಮ್ಮ ಹೆಸರಿನಲ್ಲಿ ಹಲವು ದಾಖಲೆ ಮಾಡಿದ್ದಾರೆ. ಈವರೆಗೂ ಗೇಲ್ ಮಾಡಿದ ಕೆಲವು ದಾಖಲೆಗಳನ್ನು ಯಾವೊಬ್ಬ ಕ್ರಿಕೆಟಿಗನೂ ಮುರಿಯಲು ಸಾಧ್ಯವಾಗಿಲ್ಲ.
ಕ್ರಿಕೆಟ್ ವೃತ್ತಿಜೀವನದಿಂದ ದೂರವಿದ್ದರೂ ಗೇಲ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತಾರೆ. ಅಲ್ಲದೆ ಗೇಲ್ ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ ಎಂಬುದು ಗೊತ್ತಿರುವ ವಿಷಯ. ಗೇಲ್ ತಮ್ಮ ಜೀವನವನ್ನು ರಾಜನ ರೀತಿಯಲ್ಲಿ ಮಾಡುತ್ತಿದ್ದಾರೆ. ಆದರೆ ಗೇಲ್ ಬಳಿ ಇರುವ ದುಬಾರಿ ಕಾರುಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಬಂಗಲೆ ಬಗ್ಗೆ ಮಾಹಿತಿ ಇಲ್ಲಿದೆ.

ಕ್ರಿಸ್ ಗೇಲ್ ಐಷಾರಾಮಿ ಜೀವನಕ್ಕೆ ಹೆಸರುವಾಸಿವಾಗಿದ್ದಾರೆ. ಜಮೈಕಾದ ಬೆಟ್ಟಗಳ ನಡುವೆ ಕ್ರಿಸ್ ಗೇಲ್ ಬಂಗಲೆ ಹೊಂದಿದ್ದಾರೆ. ಟಿ20 ಕ್ರಿಕೆಟ್ ಕ್ರಿಸ್ ಗೇಲ್ ಅವರ ವೃತ್ತಿಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಇಂದು ಕ್ರಿಸ್ ಗೇಲ್ ಅವರು ಮರ್ಸಿಡಿಸ್, ಲಂಬೋರ್ಗಿನಿಯಿಂದ ಲ್ಯಾಂಡ್ ಕ್ರೂಸರ್ ಮತ್ತು ಹಾರ್ಲೆ ಡೇವಿಡ್ಸನ್ ಬ್ಯಾಡ್ ಬಾಯ್ ವರೆಗಿನ ಎಲ್ಲಾ ಕಾರುಗಳನ್ನು ಹೊಂದಿದ್ದಾರೆ.
ಕ್ರಿಸ್ ಗೇಲ್ ಜಮೈಕಾದ ಬೆಟ್ಟಗಳ ನಡುವೆ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಈ ಐಷಾರಾಮಿ ಬಂಗಲೆ ಮೂರು ಅಂತಸ್ತಿನಿಂದ ಕೂಡಿದ್ದು, ಪಾರ್ಟಿಗಾಗಿ ವಿಶೇಷ ಸ್ಥಳವಿದೆ. ಜೊತೆಗೆ ಈಜುಕೊಳ ಮತ್ತು ಪೂಲ್ ಪಾರ್ಟಿಗಳಿಗಾಗಿ ಒಳಾಂಗಣ ನೃತ್ಯಕ್ಕೂ ಪ್ರತ್ಯೇಕ ಸ್ಥಳವನ್ನೂ ಕಾಣಬಹುದು.

ಸಂದರ್ಶನವೊಂದರಲ್ಲಿ ಗೇಲ್ ತಮ್ಮ ಬಂಗಲೆಯ ವಿಶೇಷತೆಗಳ ಬಗ್ಗೆ ಹೇಳಿದ್ದಾರೆ. ಈ ಬಂಗಲೆ 20 ಕೋಟಿ ರೂ. ಮೌಲ್ಯದಾಗಿದೆ. ಕ್ರಿಸ್ ಗೇಲ್ ತನ್ನ ಮನೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಕ್ರಿಸ್ ಗೇಲ್ 10 ದೇಶಗಳ 14 ಫ್ರಾಂಚೈಸಿಗಳಿಗಾಗಿ ಟಿ20 ಕ್ರಿಕೆಟ್ ಆಡಿದ್ದಾರೆ. ಐಪಿಎಲ್ ಹೊರತುಪಡಿಸಿ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಜಮೈಕಾ, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾದ ಟಿ20 ಲೀಗ್ ಪಂದ್ಯಾವಳಿಗಳನ್ನು ಒಳಗೊಂಡಿದೆ.

ಕ್ರಿಸ್ ಗೇಲ್ ಕುಟುಂಬದ ಕಥೆ
ಜಮೈಕಾದ ಬಡ ಕುಟುಂಬದಲ್ಲಿ ಕ್ರಿಸ್ ಗೇಲ್ ಜನಿಸಿದರು. ಬಾಲ್ಯದಿಂದಲ್ಲೇ ಬಡತನ ನೋಡಿಕೊಂಂಡು ಬಂದ ಗೇಲ್ ಜೀವನಾವಶ್ಯಕತೆಗಳನ್ನು ಪಡೆಯಲು ಅವರ ಕುಟುಂಬದ ಜೊತೆಗೆ ಕಷ್ಟಪಡಬೇಕಾಯಿತು. ಕ್ರಿಸ್ ಗೇಲ್ ಅವರ ತಂದೆ ಡಡ್ಲಿ ಗೇಲ್ ಪೊಲೀಸ್ ಅಧಿಕಾರಿಯಾದರೆ, ಅವರ ತಾಯಿ ರಸ್ತೆ ಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದರು.
ಮೊದಲು ಗೇಲ್ ತಮ್ಮ ಕುಟುಂಬಸ್ಥರೊಂದಿಗೆ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಹಣದ ಕೊರತೆಯಿಂದಾಗಿ ಗೇಲ್ ತನ್ನ ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಬಿಡಬೇಕಾಗಿತ್ತು.

ಡೈಲಿ ಹಂಟ್‌ನ ವರದಿಯ ಪ್ರಕಾರ, ಗೇಲ್ ಅವರು ಕ್ರಿಕೆಟಿಗನಾಗುವ ಮೊದಲು ಬಡವರಾಗಿದ್ದರು. ಗೇಲ್ ಅವರ ತಾಯಿ ತಮ್ಮ ಜೀವನೋಪಾಯಕ್ಕಾಗಿ ರಸ್ತೆಯಲ್ಲಿ ಕಡಲೆಕಾಯಿಯನ್ನು ಮಾರಾಟ ಮಾಡುತ್ತಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಗೇಲ್ ಅವರ ಕುಟುಂಬದ ಬಳಿ ಶಾಲಾ ಶುಲ್ಕವನ್ನು ಪಾವತಿಸುವಷ್ಟು ಹಣವೂ ಇರಲಿಲ್ಲ. ಇದರಿಂದಾಗಿ ಗೇಲ್ ತನ್ನ ಓದನ್ನು 10ನೇ ತರಗತಿಯಲ್ಲಿಯೇ ಬಿಡಬೇಕಾಯಿತು. ಗೇಲ್ ಅವರು ಇಂದು ಕ್ರಿಕೆಟಿಗರಾಗಿರದಿದ್ದರೆ ಬೀದಿಯಲ್ಲಿ ಜೀವನ ಕಳೆಯುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications