For Quick Alerts
ALLOW NOTIFICATIONS  
For Daily Alerts
 

Champions Trophy 2025:ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಏನಾಗುತ್ತದೆ ಗೊತ್ತಾ?; ಪಿಸಿಬಿ ಪ್ಲಾನ್‌ ಬಿ!

ಆಗಸ್ಟ್ 6 ಮಂಗಳವಾರ, ವಿಶ್ವದಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅತ್ಯಂತ ಶ್ರೀಮಂತ ಕ್ರಿಕೆಟ್‌ ಬೋರ್ಡ್‌ ಆಗಿದೆ. ಜೊತೆಗೆ ಕ್ರಿಕೆಟ್‌ನಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ.

ಹೀಗಾಗಿ ಯಾವಾಗಲೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಅದರ ಆಟಗಾರರು ಭಾರತದ ಬಗ್ಗೆ ಅಸೂಯೆಪಡುತ್ತಿರುತ್ತಾರೆ. ಇತ್ತೀಚೆಗಂತೂ ಟೀಮ್‌ ಇಂಡಿಯಾದ ಅತ್ಯುತ್ತಮ ಪ್ರದರ್ಶನವನ್ನು ಪಾಕಿಸ್ತಾನ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

\

Do you know what will happen if Indian team does not go to Pakistan

ಇದಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಅನ್ನು ತಮ್ಮ ಕೆಳಮಟ್ಟದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್‌) ನೊಂದಿಗೆ ಹೋಲಿಕೆ ಮಾಡುತ್ತಾರೆ. ಐಪಿಎಲ್‌ಗಿಂತ ಪಿಎಸ್‌ಎಲ್‌ ಉತ್ತಮವಾಗಿದೆ ಎಂಬುದು ಪಾಕಿಸ್ತಾನ ಆಟಗಾರರ ಅಭಿಪ್ರಾಯವಾಗಿದೆ. ಆದರೆ, ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್‌ ಮುಂದೆ ಪಿಎಸ್‌ಎಲ್‌ಗೆ ಯಾವುದೇ ಸ್ಥಾನಮಾನವಿಲ್ಲ ಎಂಬುದು ವಾಸ್ತವ.

ಈಗ ಮುಂದಿನ ವರ್ಷ ಆರಂಭದಲ್ಲಿ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥೇಯ ವಹಿಸಿದೆ. ಭದ್ರತಾ ಕಾರಣಗಳಿಂದ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಹೇಳಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಬೇಕೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದೆ ಬಿಸಿಸಿಐ ಮನವಿ ಇಟ್ಟಿದೆ. ಇದರಿಂದ ಟೀಮ್ ಇಂಡಿಯಾ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುವ ಸಾಧ್ಯತೆಗಳಿವೆ.

ಇದಕ್ಕೆ ಒಪ್ಪಿದ ಪಿಸಿಬಿ ಭಾರತ ತಂಡವು ಪಾಕಿಸ್ತಾನಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದೆ. ಇತ್ತ ಬಿಸಿಸಿಐ ತನ್ನ ನಿರ್ಧಾರವನ್ನು ಭಾರತ ಸರ್ಕಾರದ ಮೇಲೆ ಬಿಟ್ಟಿದೆ. ಇದರ ಬೆನ್ನಲ್ಲೇ ಪಿಸಿಬಿ ಈಗ ಬಿಸಿಸಿಐಯನ್ನು ಎದುರಿಸಲು ಯೋಜಿಸುತ್ತಿದೆ.

ಪಿಎಸ್‌ಎಲ್‌ನ ವೇಳಾಪಟ್ಟಿಯನ್ನು ಬದಲಾಯಿಸಲು ಪಿಸಿಬಿ ಮುಂದಾಗಿದೆ. ಈಗ ಪಿಎಸ್‌ಎಲ್ ಅನ್ನು ಏಪ್ರಿಲ್ 10 ರಿಂದ ಮೇ 25 ರ ನಡುವೆ ಆಯೋಜಿಸುವ ಸಾಧ್ಯತೆಯಿದೆ. ಈ ವೇಳಾಪಟ್ಟಿಯು ಐಪಿಎಲ್‌ನೊಂದಿಗೆ ನೇರ ಸಂಘರ್ಷ ಉಂಟು ಮಾಡಬಹುದು.

ಪಿಎಸ್‌ಎಲ್ ವೇಳಾಪಟ್ಟಿ ಬದಲಾವಣೆ ಏಕೆ?

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಿಸಿಎಲ್‌ ಇತರೆ ಟೂರ್ನಿಗಳೊಂದಿಗೆ ಘರ್ಷಣೆ ಆಗದಂತೆ ನಡೆಸುತ್ತ ಬಂದಿದೆ. ಏಕೆಂದರೆ ಪಿಎಸ್‌ಎಲ್ ಇತರೆ ಟೂರ್ನಿಗಳೊಂದಿಗೆ ಸೆಣಸಿದರೆ ವಿದೇಶಿ ಆಟಗಾರರು ಎರಡೂ ಕಡೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದು ಪಿಎಸ್‌ಎಲ್‌ಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ.

ಆದರೆ, ಭಾರತ ತಂಡವು ಪಾಕಿಸ್ತಾನಕ್ಕೆ ಬರುವುದು ಅನುಮಾನ ಎಂಬುದು ತಿಳಿಯುತ್ತಿದ್ದಂತೆ ಪಿಸಿಬಿ ತಮ್ಮ ಸೂಪರ್ ಲೀಗ್‌ ವೇಳಾಪಟ್ಟಿ ಬದಲಾವಣೆಗೆ ಮುಂದಾಗಿದೆ. ಪಿಎಸ್‌ಎಲ್‌ನ ವೇಳಾಪಟ್ಟಿ ಬದಲಾವಣೆಯಿಂದಾಗಿ ಎರಡು (ಐಪಿಎಲ್) ಲೀಗ್‌ಗಳ ನಡುವೆ ನೇರ ಹಣಾಹಣಿ ಏರ್ಪಡಲಿದೆ.

ಇಂತಹ ಪರಿಸ್ಥಿತಿಯಲ್ಲಿ ಎರಡು ಲೀಗ್‌ಗಳನ್ನು ವಿದೇಶಿ ಆಟಗಾರರು ಆಯ್ಕೆ ಮಾಡಬೇಕಾಗುತ್ತದೆ. ಈ ಮೂಲಕ ಬಿಸಿಸಿಐಗೆ ಪಿಸಿಬಿ ಬಿಸಿ ಮುಟ್ಟಿಸುವ ಹಗಲು ಕನಸು ಕಾಣುತ್ತಿದೆ.

ಪಿಎಸ್‌ಎಲ್‌ನ ವೇಳಾಪಟ್ಟಿಯ ಬದಲಾವಣೆಯು ಕ್ರಿಕೆಟ್ ಜಗತ್ತಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

Story first published: Tuesday, August 6, 2024, 8:42 [IST]
Other articles published on Aug 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+