ಜಾವಗಲ್ ಶ್ರೀನಾಥ್ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲು ಒತ್ತಾಯ

ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರಿ ಪ್ರಶಸ್ತಿ ಗೌರವವನ್ನು ಕನ್ನಡಿಗ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್‌ಗೆ ನೀಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಟ್ವೀಟ್ಟರ್‌ನಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಇದಕ್ಕೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಧ್ವನಿಯಾಗಿದ್ದಾರೆ.
ಜಾವಗಲ್ ಶ್ರೀನಾಥ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ನಾಮನಿರ್ದೇಶನಗೊಳಿಸಲು ದೊಡ್ಡ ಗಣೇಶ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದೊಡ್ಡ ಗಣೇಶ್ "ದಯವಿಟ್ಟು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಜಾವಗಲ್ ಶ್ರೀನಾಥ್ ಅವರನ್ನು ನಾಮನಿರ್ದೇಶನಗೊಳಿಸಿ. ಅವರು ಅದಕ್ಕೆ ನಿಜವಾಗಿಯೂ ಮತ್ತೆಲ್ಲರಿಗಿಂತಲೂ ಅರ್ಹರು" ಎಂದಿದ್ದಾರೆ.

ರಾಜ್ಯ ರಾಜಕೀಯ ಮುಖಂಡರಿಗೆ ಒತ್ತಾಯ
ದೊಡ್ಡ ಗಣೇಶ್ ತಾವು ಮಾಡಿರುವ ಈ ಟ್ವೀಟ್‌ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರ ಸ್ವಾಮಿ, ಬಿಜೆಪಿ, ಕಾಂಗ್ರೆಸ್ ಹಾಗೂ ಜನತಾದಳದ ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಉಲ್ಲೇಖಿಸಿ ಈ ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ
13 ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಪ್ರಮುಖ ವೇಗದ ಬೌಲರ್ ಆಗಿದ್ದ ಶ್ರೀನಾಥ್ ಸಾಧನೆ ದೊಡ್ಡ ಮಟ್ಟದಲ್ಲಿ ಗುರುತಿಸಲ್ಪಟ್ಟಿಲ್ಲ ಎಂಬುದು ನಾನೇಕ ಬಾರಿ ಚರ್ಚೆಯಾಗಿದೆ . ಈ ಬಗ್ಗೆ ಹಲವು ಕ್ರೀಡಾ ವಿಶ್ಲೇಷಕರು ಶ್ರೀನಾಥ್ ಅವರನ್ನು ಕುರಿತು ಅವರು ಅರ್ಹವಾದ ಗೌರವವನ್ನು ಪಡೆದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀನಾಥ್‌ಗೆ ಅರ್ಹ ಗೌರವ ದೊರೆತಿಲ್ಲ
13 ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಪ್ರಮುಖ ವೇಗದ ಬೌಲರ್ ಆಗಿದ್ದ ಶ್ರೀನಾಥ್ ಸಾಧನೆ ದೊಡ್ಡ ಮಟ್ಟದಲ್ಲಿ ಗುರುತಿಸಲ್ಪಟ್ಟಿಲ್ಲ ಎಂಬುದು ನಾನೇಕ ಬಾರಿ ಚರ್ಚೆಯಾಗಿದೆ . ಈ ಬಗ್ಗೆ ಹಲವು ಕ್ರೀಡಾ ವಿಶ್ಲೇಷಕರು ಶ್ರೀನಾಥ್ ಅವರನ್ನು ಕುರಿತು ಅವರು ಅರ್ಹವಾದ ಗೌರವವನ್ನು ಪಡೆದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀನಾಥ್ ಸಾಧನೆ
ವೇಗಿಗಳಿಗೆ ಸಹಕಾರಿಯಲ್ಲದ ಭಾರತದ ಪಿಚ್‌ನಲ್ಲಿ ಶ್ರೀನಾಥ್ ಏಕಾಂಗಿಯಾಗಿ ವೇಗದ ಬೌಲಿಂಗ್ ಜವಾಬ್ಧಾರಿ ಹೊತ್ತು ತಂಡವನ್ನು ಮುನ್ನಡೆಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀನಾಥ್ 236 ವಿಕೆಟ್ ಪಡದಿದ್ದರೆ ಏಕದಿನದಲ್ಲಿ 315 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ವಿಕೆಟ್ ಪಡೆದ ಭಾರತ ಏಕೈಕ ವೇಗದ ಬೌಲರ್ ಎಂಬ ಖ್ಯಾತಿಯನ್ನೂ ಜಾವಗಲ್ ಶ್ರೀನಾಥ್ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications