ವೈರಲ್ ಆಯ್ತು ಐಪಿಎಲ್ 2020 ವೇಳಾಪಟ್ಟಿ: ಅನುಮಾನಕ್ಕೆ 3 ಕಾರಣಗಳು

ಅಂತಾರಾಷ್ಟ್ರೀಯ ಕ್ರಿಕೆಟ್ ಕೊರೊನಾ ವೈರಸ್‌ನ ಕಾರಣದಿಂದಾಗಿ ಸ್ಥಗಿತವಾಗಿ ಪುನಾರಂಭ ಪಡೆದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸ್ವಲ್ಪ ನಿರಾಳತೆಯನ್ನು ತಂದಿದ್ದು ನಿಜ. ಆದರೆ ಇದರ ರೋಚಕತೆ ಹೆಚ್ಚಲು ಚುಟುಕು ಕ್ರಿಕೆಟ್ ಆರಂಭವಾಗುವುದನ್ನು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ಐಪಿಎಲ್ ಸಜ್ಜಾಗುತ್ತಿದೆ.
ಟಿ20 ವಿಶ್ವಕಪ್ ಮುಂದೂಡಿಕೆಯಾಗುತ್ತಿದ್ದಂತೆಯೇ ಐಪಿಎಲ್‌ಗೆ ವೇದಿಕೆ ಸಿಕ್ಕಂತಾಯಿತು. ಐಪಿಎಲ್ ನಡೆಸಲು ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಹೇಗೆ ಕಾತುರದಿಂದ ಕಾಯುತ್ತಿದೆಯೋ ಹಾಗೆಯೇ ಕ್ರಿಕೆಟ್ ಪ್ರೇಮಿಗಳು ಕೂಡ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಕುತೂಹಲಭರಿತರಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಕೆಲ ಸಂಗತಿಗಳು ಆಧಾರವಿಲ್ಲದೆಯೇ ಹರಿದಾಡಲು ಆರಂಭಿಸಿದೆ.

ಬಿಡುಗಡೆಯಾಯ್ತಾ ವೇಳಾಪಟ್ಟಿ?
ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಈಗ ಭಾರೀ ವೈರಲ್ ಆಗಿದೆ. ಐಪಿಎಲ್ ಚೇರ್‌ಮನ್ ಬ್ರಿಜೇಶ್ ಪಟೇಲ್ ಐಪಿಎಲ್ ಆರಂಭ ಹಾಗೂ ಅಂತ್ಯದ ದಿನಾಂಕವನ್ನು ಸ್ಪಷ್ಟಪಡಿಸಿದ ಮರುದಿನವೇ ಈ ವೇಳಾಪಟ್ಟಿಯ ಪಿಡಿಎಫ್ ಪ್ರತಿ ಹರಿದಾಡುತ್ತಿದೆ. ಅದರೆ ಇದರ ಮೂಲದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

ಬ್ರಿಜೇಶ್ ಪಟೇಲ್ ಹೇಳಿಕೆ
ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸುದ್ದಿಸಂಸ್ಥೆಯೊಂದರ ಜೊತೆಗೆ ಮಾತನಾಡುತ್ತಾ ಒಂದು ವಿಚಾರವನ್ನು ನಿರ್ದಿಷ್ಟವಾಗಿ ಒತ್ತಿಹೇಳಿದ್ದರು. ಐಪಿಎಲ್‌ನ ಸಂಪೂರ್ಣ ವೇಳಾಪಟ್ಟಿ ಆಡಳಿತ ಮಂಡಳಿಯ ಸಭೆಯ ನಂತರವೇ ಬಿಡುಗಡೆಯಾಗಲಿದೆ ಎಂದಿದ್ದರು. ಆದರೆ ಈ ಮಾತಿನ ಮರುದಿನವೇ ಐಪಿಎಲ್ ವೇಳಾಪಟ್ಟಿ ಹರಿದಾಡಲು ಆರಂಭಿಸಿದೆ.

ಪಂದ್ಯದ ಸಮಯದಲ್ಲಿ ಬದಲಾವಣೆ
ಈ ಬಾರಿಯ ಪಂದ್ಯಗಳ ಆರಂಭದ ಸಮಯದ ಬಗ್ಗೆಯೂ ಬ್ರಿಜೇಶ್ ಪಟೇಲ್ ಮಾಹಿತಿಯನ್ನು ಹಂಚಿಕೊಂಡಿದ್ದರು. 51 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಡಬಲ್ ಹೆಡ್ಡರ್‌ಗಳು ಹೆಚ್ಚು ಇರಲಿದೆ ಎಂದಿದ್ದರು. ಅದರಲ್ಲೂ ಮಧ್ಯಾಹ್ನ ನಡೆಯುವ ದಿನದ ಮೊದಲ ಪಂದ್ಯ ಭಾರತೀಯ ಕಾಲಮಾನ 3.30ಕ್ಕೆ ಆರಂಭವಾಗಲಿದ್ದು ಸಂಜೆಯ ಪಂದ್ಯ 7.30ಕ್ಕೆ ಆರಂಭವಾಗುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ ಒಂದೇ ದಿನದ ಅಂತರದಲ್ಲಿ ಹೊರಬಿದ್ದಿರುವ ಈ ಪಟ್ಟಿಯಲ್ಲಿ ಮೊದಲ ಪಂದ್ಯ ಮಧ್ಯಾಹ್ನ 4 ಗಂಟೆಗೆ ಆರಂಭವಾದರೆ ಎರಡನೇ ಪಂದ್ಯ 8 ಗಂಟೆಗೆ ಆರಂಭವಾಗಲಿದೆ ಎಂದಿದೆ.

ಸರ್ಕಾರದ ಅನುಮತಿಗೆ ಕಾಯಲೇಬೇಕು
ಬಿಡುಗಡೆಯಾಗಿರುವ ಐಪಿಎಲ್ ವೇಳಾಪಟ್ಟಿಯ ಮೇಲೆ ಅನುಮಾನ ಮೂಡಲು ಮತ್ತೊಂದು ಪ್ರಮುಖ ಕಾರಣವಿದೆ. ಐಪಿಎಲ್ ಆರಂಭಕ್ಕೆ ಸರ್ಕಾರದಿಂದ ಅನುಮತಿಯಿನ್ನೂ ದೊರೆತಿಲ್ಲ. ಹೀಗಾಗಿ ಅನುಮತಿಯನ್ನು ಪಡೆಯದೆ ಬಿಸಿಸಿಐ ಈ ವೇಳಾಪಟ್ಟಿ ಬಿಡುಗಡೆಯಾಗಲು ಸಾಧ್ಯವೂ ಇಲ್ಲ. ಹೀಗಾಗಿ ಈ ವೇಳಾಪಟ್ಟಿ ಅಧಿಕೃತವಲ್ಲ ಎಂಬುದು ಖಚಿತ. ಕ್ರಿಕೆಟ್ ಪ್ರೇಮಿಗಳು ಬಿಸಿಸಿಐ ಪ್ರಕಟಿಸುವ ಅಧಿಕೃತ ಐಪಿಎಲ್ ವೇಳಾಪಟ್ಟಿಗೆ ಇನ್ನೂ ಕೆಲ ದಿನಗಳು ಕಾಯಲೇಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications