ಐಪಿಎಲ್ ಫಾರ್ಮ್ ನೋಡಿ ಕೊಹ್ಲಿಯನ್ನು ನಿರ್ಣಯಿಸಬೇಡಿ: ವೆಂಗ್‌ಸರ್ಕಾರ್

ನವದೆಹಲಿ, ಏಪ್ರಿಲ್ 9: ಐಪಿಎಲ್ ಫಾರ್ಮ್ ನೋಡಿ ವಿರಾಟ್ ಕೊಹ್ಲಿಯನ್ನು ನಿರ್ಣಯಿಸಬೇಡಿ ಎಂದು ಟೀಮ್ ಇಂಡಿಯಾ ಮಾಜಿ ನಾಯಕ, ಆಯ್ಕೆ ಸಮಿತಿಯ ಮುಖ್ಯಸ್ಥ ದಿಲೀಪ್ ವೆಂಗ್ ಸರ್ಕಾರ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ ಟೀಕೆಗೊಳಗಾಗುತ್ತಿರುವ ಕುರಿತು ವೆಂಗ್ ಸರ್ಕಾರ್ ಹೀಗೆ ಅಭಿಪ್ರಾಯಿಸಿದ್ದಾರೆ.
ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)
ಐಪಿಎಲ್‌ನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿರುವ ಕೊಹ್ಲಿ ತಂಡದ ಸತತ ಸೋಲಿನಿಂದಾಗಿ ಟೀಕೆಗೊಳಗಾಗುತ್ತಿದ್ದಾರೆ. ಐಪಿಎಲ್ ಪ್ರದರ್ಶನವನ್ನು ಅವಲಂಭಿಸಿ ಕೊಹ್ಲಿ, ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಬಗ್ಗೆಯೂ ಕ್ರಿಕೆಟ್ ವಲಯದಲ್ಲಿ ಚರ್ಚಿಸಲಾಗುತ್ತಿದೆ. ಇದಕ್ಕೆಲ್ಲ ತಿರುಗೇಟು ಎಂಬಂತೆ ದಿಲೀಪ್ ಹೇಳಿಕೆ ನೀಡಿದ್ದಾರೆ.
'ಯಾವುದೇ ಆಟಗಾರರ ಫಾರ್ಮ್ ಅಳೆಯಲು ಐಪಿಎಲ್ ಮಾನದಂತವಲ್ಲ. ಹಾಗಾಗಿ ಆಟಗಾರರನ್ನು ಐಪಿಎಲ್ ಪ್ರದರ್ಶನದ ಮೂಲಕ ನಿರ್ಣಯಿಸಬೇಕಾಗಿಲ್ಲ. ವಿರಾಟ್ ಕೊಹ್ಲಿ ಈಗಲೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ' ಎಂದು ವೆಂಗ್ ಸರ್ಕಾರ್ ಹೇಳಿಕೊಂಡಿದ್ದಾರೆ.
'ಕೊಹ್ಲಿ ಒಬ್ಬ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್. ನಾಯಕನಾಗಿಯೂ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲರು. ನೀವು ಆತನ ಮೇಲೆ ವಿಶ್ವಾಸವಿಡಿ. ಆಗ ಮಾತ್ರ ನೀವು ಆತನನ್ನು ಮತ್ತೆ 100 ಶೇ. ಉತ್ತಮ ಫಾರ್ಮ್‌ನತ್ತ ಕರೆತರಲು ಸಾಧ್ಯ' ಎಂದು ದಿಲೀಪ್ ಹೇಳಿದರು. ಇದು ಒಂದರ್ಥದಲ್ಲಿ ಕೊಹ್ಲಿ ನಾಯಕತ್ವವನ್ನು ಅಣಕಿಸಿದ ಗೌತಮ್ ಗಂಭೀರ್‌ಗೆ ಉತ್ತರವೂ ಹೌದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications