For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ಇಷ್ಟವಿಲ್ಲ ಆದರೆ ಪಂತ್ ಆಟ ಮಾತ್ರ ನೋಡುತ್ತೇನೆ ಎಂದ ಆರ್‌ಸಿಬಿ ಮಾಜಿ ಆಟಗಾರ

Dont like Test cricket but I watch it when Rishabh Pant comes to bat says Tymal Mills
ಟೆಸ್ಟ್ ಕ್ರಿಕೆಟ್ ನೋಡೋದನ್ನೇ ಬಿಟ್ಟಿದ್ದೆ ಆದ್ರೆ ಈಗ ನೋಡ್ತೀನಿ ಎಂದ ಮಿಲ್ಸ್ | Oneindia Kannada

ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಹಾಗೂ ಈ ಪಂದ್ಯ ಮುಗಿದ ಬೆನ್ನಲ್ಲೇ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ ತಂಡ ಆಡಲಿದೆ. ಹೀಗಾಗಿ ಈ ಎರಡೂ ಸರಣಿಗಳಿಗೂ ಸೇರಿ ಬಿಸಿಸಿಐ 20 ಸದಸ್ಯರ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ.

8-9 ದಿನಗಳು ನಿದ್ರೆ ಇರಲಿಲ್ಲ; ಆ ಘಟನೆ ನಂತರ ಕ್ರಿಕೆಟ್ ಆಡೋದೇ ಅನುಮಾನವಾಗಿತ್ತು ಎಂದ ಅಶ್ವಿನ್

ಭಾರತ ಕೈಗೊಳ್ಳಲಿರುವ ಇಂಗ್ಲೆಂಡ್ ಪ್ರವಾಸದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಟೈಮಲ್ ಮಿಲ್ಸ್ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿದ್ದಾರೆ.

ರೋಹಿತ್, ರಾಹುಲ್ ಅಲ್ಲ ಈತನೇ ಕೊಹ್ಲಿ ನಂತರ ಭಾರತದ ನಾಯಕ ಎಂದ ಸಲ್ಮಾನ್ ಬಟ್

'ಗಾಯದ ಸಮಸ್ಯೆಗಳಿರುವುದರಿಂದ ನಾನು ಹೆಚ್ಚಾಗಿ ಟೆಸ್ಟ್ ಪಂದ್ಯಗಳಲ್ಲಿ ಆಡುವುದಿಲ್ಲ, ಸೀಮಿತ ಓವರ್‌ಗಳ ಪಂದ್ಯವನ್ನು ನಾನು ಹೆಚ್ಚಾಗಿ ಇಷ್ಟ ಪಡುತ್ತೇನೆ. ಟೆಸ್ಟ್ ಕ್ರಿಕೆಟ್ ಆಡದ ಕಾರಣ ನಾನು ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುವುದಿಲ್ಲ, ಆದರೆ ರಿಷಭ್ ಪಂತ್ ಆಟ ಬಂತೆಂದರೆ ಸಾಕು ಟಿವಿ ಮುಂದೆ ಕುಳಿತುಬಿಡುತ್ತೇನೆ. ಪಂತ್ ಟೆಸ್ಟ್ ಕ್ರಿಕೆಟ್‍ನಲ್ಲಿಯೂ ಸ್ಪೋಟಕ ಇನ್ನಿಂಗ್ಸ್ ಆಡುತ್ತಾರೆ, ಕಠಿಣವೆನಿಸುವ ಪಿಚ್‌ಗಳಲ್ಲಿಯೂ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸುವುದನ್ನು ನೋಡುವುದೇ ರೋಮಾಂಚಕಾರಿ' ಎಂದು ಟೈಮಲ್ ಮಿಲ್ಸ್ ರಿಷಬ್ ಪಂತ್ ಬ್ಯಾಟಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Story first published: Friday, May 28, 2021, 12:28 [IST]
Other articles published on May 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+