ರೋಹಿತ್, ರಾಹುಲ್ ಅಲ್ಲ ಈತನೇ ಕೊಹ್ಲಿ ನಂತರ ಭಾರತದ ನಾಯಕ ಎಂದ ಸಲ್ಮಾನ್ ಬಟ್

ಇತ್ತೀಚಿಗಷ್ಟೆ ಮೈಕಲ್ ವಾನ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ನಡುವೆ ಹೋಲಿಕೆಯನ್ನು ಮಾಡಿ ಕೇನ್ ವಿಲಿಯಮ್ಸನ್ ಅತ್ಯುತ್ತಮ ಆಟಗಾರ ಎಂದು ಹೇಳಿದ್ದಾಗ ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಬಟ್ ಕೊಹ್ಲಿ ಈ ಯುಗ ಕಂಡ ಅತ್ಯುತ್ತಮ ಆಟಗಾರ, ಅವರೊಂದಿಗೆ ಯಾವ ಆಟಗಾರನನ್ನು ಸಹ ಹೋಲಿಕೆ ಮಾಡಬಾರದು ಎಂದು ವಾನ್ ಹೋಲಿಕೆಯನ್ನು ಟೀಕಿಸಿದ್ದರು.
ಇದಾದ ಬಳಿಕ ಟೀಮ್ ಇಂಡಿಯಾ ಕುರಿತು ಮಾತನಾಡಿರುವ ಸಲ್ಮಾನ್ ಬಟ್ ವಿರಾಟ್ ಕೊಹ್ಲಿ ನಂತರ ಭಾರತ ತಂಡವನ್ನು ಯಾವ ಆಟಗಾರ ಮುನ್ನಡೆಸಬೇಕು ಎಂಬುದನ್ನು ಹಂಚಿಕೊಂಡಿದ್ದಾರೆ. ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಿರುವ ಸಲ್ಮಾನ್ ಬಟ್ ವಿರಾಟ್ ಕೊಹ್ಲಿಯ ನಂತರ ಟೀಂ ಇಂಡಿಯಾವನ್ನು ಮುನ್ನಡೆಸಲು ರಿಷಭ್ ಪಂತ್ ಸರಿಯಾದ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೀಘ್ರದಲ್ಲಿಯೇ ಕೊಹ್ಲಿ ರೋಹಿತ್‌ಗೆ ನಾಯಕತ್ವ ಬಿಟ್ಟುಕೊಡುವುದು ಖಚಿತ ಎಂದ ಮಾಜಿ ಕ್ರಿಕೆಟಿಗ
'ನಾನು ರಿಷಭ್ ಪಂತ್ ದೇಶೀಯ ಕ್ರಿಕೆಟ್ ಅಂಕಿ ಅಂಶಗಳ ಬಗ್ಗೆ ಆಳವಾಗಿ ತಿಳಿದುಕೊಂಡಿಲ್ಲ. ಆದರೆ ಇತ್ತೀಚೆಗೆ ಅವರು ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ರೀತಿಯನ್ನು ಕಂಡಿದ್ದೇನೆ. ಉತ್ತಮ ರೀತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ನಿರ್ವಹಿಸಿರುವ ರಿಷಭ್ ಪಂತ್ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾದ ನಾಯಕತ್ವದ ಜವಾಬ್ದಾರಿ ಹೊರುವಂಥತಹ ಸಾಮರ್ಥ್ಯವಿರುವ ಆಟಗಾರ' ಎಂದು ಸಲ್ಮಾನ್ ಬಟ್ ರಿಷಭ್ ಪಂತ್ ನಾಯಕತ್ವದ ಕುರಿತು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾ ಕೂಡ ಉತ್ತಮ ನಾಯಕ
ರೋಹಿತ್ ಶರ್ಮಾ ಕೂಡ ಉತ್ತಮ ನಾಯಕ, ಓರ್ವ ನಾಯಕನಾಗಿ ನನಗೆ ಅವರು ತುಂಬಾ ಇಷ್ಟ ಆಗುತ್ತಾರೆ. ಅವರ ಕಾರ್ಯತಂತ್ರ ಮತ್ತು ಚತುರತೆಯಿಂದ ಓರ್ವ ಯಶಸ್ವಿ ನಾಯಕನಾಗಿದ್ದಾರೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ರಹಾನೆಯ ಅದ್ಭುತ ನಾಯಕತ್ವ
ವಿರಾಟ್ ಕೊಹ್ಲಿ ಕೆಲ ವೈಯಕ್ತಿಕ ಕಾರಣಗಳಿಗೆ 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಿಂದ ಹೊರ ನಡೆದ ಸಂದರ್ಭದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ನಾಯಕತ್ವವನ್ನು ವಹಿಸಿಕೊಂಡು ಸರಣಿ ಗೆಲ್ಲಿಸುವುದರ ಮೂಲಕ ನಾಯಕನಾಗಿ ಅದ್ಭುತ ಪ್ರದರ್ಶನವನ್ನು ನೀಡಿದರು ಎಂದು ಸಲ್ಮಾನ್ ಬಟ್ ಪ್ರಶಂಸಿಸಿದ್ದಾರೆ.

ಮುಂದಿನ ಪಂದ್ಯದಲ್ಲಿಯೇ ಕೊಹ್ಲಿ ಶತಕ
ವಿರಾಟ್ ಕೊಹ್ಲಿ ಇದುವರೆಗೂ 70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದ್ದರು, ಇದಾದ ಬಳಿಕ ಕೊಹ್ಲಿ ಇದುವರೆಗೂ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿಲ್ಲ. ಹೀಗಾಗಿ ಕೊಹ್ಲಿ ತಮ್ಮ 71ನೇ ಅಂತಾರಾಷ್ಟ್ರೀಯ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು ಸಲ್ಮಾನ್ ಬಟ್ ಈ ಕುರಿತು ಪ್ರತಿಕ್ರಿಯಿಸಿದ್ದು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿಯೇ ಕೊಹ್ಲಿ ತಮ್ಮ ಮುಂದಿನ ಶತಕವನ್ನ ಸಿಡಿಸಲಿದ್ದಾರೆ ಎಂದು ಸಲ್ಮಾನ್ ಬಟ್ ಭವಿಷ್ಯ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications