For Quick Alerts
ALLOW NOTIFICATIONS  
For Daily Alerts
 

ಧವನ್‌ ಬಗ್ಗೆ ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌ ಹೇಳಿದ್ದಿದು!

Dont want to rule out player like Shikhar Dhawan: Sanjay Bangar

ಲಂಡನ್‌, ಜೂನ್‌ 12: ಶಿಖರ್‌ ಧವನ್‌ ಅತ್ಯಂತ 'ಅಮೂಲ್ಯ' ಆಟಗಾರ ಹೀಗಾಗಿ ಅವರನ್ನು ತಂಡದಿಂದ ಹೊರಗಿಡಲು ಟೀಮ್‌ ಮ್ಯಾನೇಜ್ಮೆಂಟ್‌ಗೆ ಕಿಂಚಿತ್ತೂ ಮನಸಿಲ್ಲ ಎಂದು ಭಾರತ ತಂಡದ ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ಶಿಖರ್‌ ಧವನ್‌ ಅವರ ಗಾಯದ ಸಮಸ್ಯೆ ಕುರಿತಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾವು ಕನಿಷ್ಠ 10-12 ದಿನಗಳನ್ನು ತೆಗೆದುಕೊಳ್ಳಲಿದ್ದೇವೆ. ಅವರಂತಹ ಅತ್ಯಮೂಲ್ಯ ಆಟಗಾರನನ್ನು ಕಳೆದುಕೊಳ್ಳಲು ನಮಗೆ ಖಂಡಿತಾ ಇಷ್ಟವಿಲ್ಲ,'' ಎಂದು ನ್ಯೂಜಿಲೆಂಡ್‌ ವಿರುದ್ಧದ ಭಾರತ ತಂಡದ ಪಂದ್ಯಕ್ಕೆ ಒಂದು ದಿನ ಮೊದಲು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಾಂಗರ್‌ ಹೇಳಿದ್ದಾರೆ.

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಆಡಿದ ಎರಡನೇ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 109 ಎಸೆತಗಳಲ್ಲಿ 117 ರನ್‌ಗಳನ್ನು ಚಚ್ಚಿ ಜಯದ ರೂವಾರಿ ಎನಿಸಿದ ಧವನ್‌, ಪ್ಯಾಟ್‌ ಕಮಿನ್ಸ್‌ ಅವರ ಬೌಲಿಂಗ್‌ನಲ್ಲಿ ಹೆಬ್ಬೆರಳಿಗೆ ಪೆಟ್ಟು ತಿಂದಿದ್ದರು. ನೋವಿನ ಕಾರಣ ಅವರು ಈ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆಗೂ ಕಣಕ್ಕಿಳಿದಿರಲ್ಲ. ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಅವರ ಹೆಬ್ಬೆರಳಿನ ಭಾಗದಲ್ಲಿ ಹೇರ್‌ಲೈನ್‌ ಫ್ರ್ಯಾಕ್ಚರ್‌ ಆಗಿರುವುದು ಬೆಳಕಿಗೆ ಬಂದಿತ್ತಲ್ಲದೆ ಕನಿಷ್ಠ ಮೂರು ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು.

ಇದರೊಂದಿಗೆ ಧವನ್‌ ಬಹುತೇಕ ಟೂರ್ನಿಯಿಂದಲೇ ನಿರ್ಗಮಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತಾದರೂ, ಬಿಸಿಸಿಐ ಧವನ್‌ ಅವರ ಫಿಟ್ನೆಟ್‌ ಬಗ್ಗೆ ಕಣ್ಣಿಟ್ಟು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಧವನ್‌ ಅವರ ಸ್ಥಾನದಲ್ಲಿ ತಂಡಕ್ಕೆ ಸೇರ್ಪಡೆ ಮಾಡಲು ರಿಷಭ್ ಪಂತ್‌ ಅವರನ್ನು ಬಿಸಿಸಿಐ ಈಗಾಗಲೇ ಇಂಗ್ಲೆಂಡ್‌ಗೆ ಕಳುಹಿಸಿದೆ. ಧವನ್‌ ಗುಣಮುಖರಾಗದೇ ಇದ್ದಲ್ಲಿ ಪಂತ್‌ ತಂಡ ಸೇರಲಿದ್ದಾರೆ.

ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ದಿನೇಶ್‌ ಕಾರ್ತಿಕ್‌ಗೆ ಅವಕಾಶ ನೀಡಿ ಪಂತ್‌ ಅವರನ್ನು ಕೈ ಬಿಡಲಾಗಿತ್ತು. ಆದರೂ ಅವರನ್ನು ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಬಿಸಿಸಿಐ ಸೇರಿಸಿತ್ತು.

ಟೂರ್ನಿಯಲ್ಲಿ ಭಾರತ ತಂಡ ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದು, ಬಳಿಕ ಹಾಲಿ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾಗೆ 36 ರನ್‌ಗಳ ಸೋಲುಣಿಸಿದೆ. ಇದೀಗ ನ್ಯೂಜಿಲೆಂಡ್‌ ವಿರುದ್ಧ ಗುರುವಾರ ಪೈಪೋಟಿ ನಡೆಸಲಿದೆ. ವಿಶ್ವಕಪ್‌ ಸಲುವಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಕಿವೀಸ್‌ ಪಡೆಯ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು.

Story first published: Wednesday, June 12, 2019, 21:01 [IST]
Other articles published on Jun 12, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+