ಭಾರತ ತಂಡದ ಆರಂಭಿಕ ಆಟಗಾರ ರನ್ ಕಲೆ ಹಾಕಲು ಪರದಾಡುತ್ತಿದ್ದಾರೆ. ಇವರ ಸ್ಥಾನದ ಮೇಲೆ ಈಗ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಇವರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ನೀಡಬೇಕಾ ಎಂಬ ಪ್ರಶ್ನೆಗಳು ಎದ್ದಿವೆ. ಇದೇ ವೇಳೆ ಇವರ ಮುಖದಲ್ಲಿ ಮಂದಹಾಸ ಮೂಡಿಸಲು ನಾಯಕ ಸೂರ್ಯಕುಮಾರ್ ಯಾದವ್ ಸಫಲರಾಗಿದ್ದಾರೆ. ಟೀಮ್ ಇಂಡಿಯಾ ಕ್ಯಾಪ್ಟನ್, ಕೇರಳಾ ಬ್ಯಾಟರ್ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಹೇಗೆ ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ಸರಣಿಯ ಕೊನೆಯ ಪಂದ್ಯ ತಿರುವನಂತಪುರದಲ್ಲಿ ನಡೆಯಲಿದೆ. ಈ ಪಂದ್ಯ ಈ ಸರಣಿಯ ಅಂತಿಮ ಪಂದ್ಯವಾಗಿರಲಿದೆ. ಟಿ20 ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ ಪಕ್ಕಾ ಮಾಡಿಕೊಳ್ಳಲು ಇದು ಕೊನೆಯ ಅವಕಾಶ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ತಿರುವನಂತಪುರಂಗೆ ಆಗಮಿಸಿದ್ದಾರೆ. ಶುಕ್ರವಾರ ಆಗಮಿಸಿದ ಟೀಮ್ ಇಂಡಿಯಾಕ್ಕೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು.
{image-sanjusamson1112-1769762138
.jpg kannada.mykhel.com}
ಸಂಜು ಸ್ಯಾಮ್ಸನ್ ಅವರು ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಇನ್ನು ಕೊನೆಯ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುವ ಅನಿವಾರ್ಯತೆ ಇದೆ. ಇನ್ನು ತಾವು ಹುಟ್ಟಿ ಬೆಳೆದು, ಹಲವು ವರ್ಷಗಳ ಕಾಲ ಅಭ್ಯಾಸ ಮಾಡಿದ ಪಿಚ್ ಮೇಲೆ ಶನಿವಾರ ಪಂದ್ಯವನ್ನು ಆಡಲಿದ್ದು, ಎಲ್ಲರ ಗಮನ ಇವರ ಮೇಲೆ ಚಿತ್ತ ನೆಟ್ಟಿದೆ. ಅಲ್ಲದೆ ಇದೇ ವೇಳೆ ಇವರಿಗೆ ಅಭಿಮಾನಿಗಳ ಬೆಂಬಲವೂ ಸಹ ಸಿಗಲಿದೆ. ಸಂಜು ಸ್ಯಾಮ್ಸನ್ ತಿರುವನಂತಪುರಂಗೆ ಬರುತ್ತಿದ್ದಂತೆ ಸೂರ್ಯಕುಮಾರ್ ಯಾದವ್ ಅವರು ಸ್ವಾಗತಿಸಿದರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಂಜು ಸ್ಯಾಮ್ಸನ್ ಅವರು ವಿಮಾನ ನಿಲ್ದಾಣದಿಂದ ಹೊರ ಬರುತ್ತಲೇ, ಸೂರ್ಯ ಕುಮಾರ್ ಯಾದವ್ ದಾರಿ ಮಾಡಿಕೊಟ್ಟರು. ಅಭಿಮಾನಿಗಳಿಗೆ ದೂರ ಇರಿ. ಡೋಂಟ್ ಡಿಸ್ಟರ್ಬ್ ಚೆಟಾ ಎನ್ನುತ್ತಲೇ ಕೈ ಮಾಡಿ ದಾರಿ ತೋರಿಸಿದರು. ಸೂರ್ಯಕುಮಾರ್ ಹೀಗೆ ಹೇಳುತ್ತಲೇ ಸಂಜು ಮುಖದಲ್ಲಿ ಮಂದಹಾಸ ಮೂಡಿತು.
ಭಾರತದ ಪರ ಹಲವು ವರ್ಷಗಳಿಂದ ಆಡುತ್ತಿರುವ ಸಂಜು ಸ್ಯಾಮ್ಸನ್ ಈ ವರೆಗೆ ತಮ್ಮ ತವರು ಅಂಗಳದಲ್ಲಿ ಒಂದೇ ಒಂದು ಪಂದ್ಯ ಆಡಿರಲಿಲ್ಲ. ಇದೇ ಮೊದಲ ಬಾರಿಗೆ ಸಂಜು ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಅವಕಾಶದಲ್ಲಿ ಬಿಗ್ ಇನಿಂಗ್ಸ್ ಕಟ್ಟಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಳ್ಳುವ ಇರಾದೆ ಸಂಜು ಅವರದ್ದಾಗಿದೆ.
ಶುಭಮನ್ ಗಿಲ್ ಅವರಿಂದ ಖಾಲಿಯಾದ ಆರಂಭಿಕರ ಸ್ಥಾನದಲ್ಲಿ ಮತ್ತೆ ಸಂಜು ಸ್ಯಾಮ್ಸನ್ ಬಹು ದಿನಗಳ ಬಳಿಕ ಕಾಣಿಸಿಕೊಂಡರು. ಈ ಸ್ಥಾನವನ್ನು ಪಡೆದ ಮೇಲಿನಿಂದ ಸಂಜು ಒಂದೇ ಒಂದು ಅರ್ಧಶತಕ ಬಾರಿಸದೇ ಇರುವುದು ಬೇಸರ ತರಿಸಿದೆ. ಅಲ್ಲದೆ ಪವರ್ ಪ್ಲೇನಲ್ಲಿ ಇವರು ಪವರ್ ಫುಲ್ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ನಾಲ್ಕನೇ ಟಿ20 ಪಂದ್ಯದಲ್ಲಿ ಸಂಜು ನೆಲಕಚ್ಚಿ ಬ್ಯಾಟ್ ಮಾಡುವ ಸೂಚನೆಯನ್ನು ನೀಡಿದರು. ಈ ಪಂದ್ಯದಲ್ಲಿ 15 ಎಸೆತಗಳಲ್ಲಿ 24 ರನ್ ಸಿಡಿಸಿದರು. ಆದರೆ ಇದನ್ನೇ ದೊಡ್ಡ ಮೊತ್ತವನ್ನಾಗಿ ಕನ್ವರ್ಟ್ ಮಾಡುವಲ್ಲಿ ವಿಫಲರಾದರು. ಆದರೆ ಅವರ ಬ್ಯಾಟ್‌ನಿಂದ ರನ್‌ಗಳು ಬಂದಿದ್ದು ಟೀಮ್ ಇಂಡಿಯಾಕ್ಕೆ ಸಮಾಧಾನದ ವಿಷಯ.
ಟಿ20 ವಿಶ್ವಕಪ್‌ಗೂ ಮುನ್ನ ಸಂಜು ಸ್ಯಾಮ್ಸನ್ ತಮ್ಮಲ್ಲಿರುವ ಬ್ಯಾಟಿಂಗ್ ಕ್ಷಮತೆಯನ್ನು ತೋರಿಸಲು ತವರಿನ ಮೈದಾನ ಬೆಸ್ಟ್ ವೇದಿಕೆ ಆಗಿದೆ. ವಿಶ್ವಕಪ್‌ಗೂ ಮುನ್ನ ಸಂಜು ಲಯಕ್ಕೆ ಮರಳಿ ಎಂಬುದೇ ಅಭಿಮಾನಿಗಳ ಆಶಯ.